ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ದಕ್ಷಿಣ ಆಫ್ರಿಕಾದ ವೈರಸ್‌ ಆತಂಕ: ಸೆನ್ಸೆಕ್ಸ್‌ 1,600 ಅಂಶ ಕುಸಿತ

Last Updated 26 ನವೆಂಬರ್ 2021, 10:33 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರ ಸಕಾರಾತ್ಮಕವಾಗಿ ಮುಕ್ತಾಯವಾ‌ಗಿದ್ದ ದೇಶದ ಷೇರುಪೇಟೆಗಳಲ್ಲಿ ಇಂದು ತಲ್ಲಣ ಉಂಟಾಯಿತು. ಕೋವಿಡ್‌ ಲಸಿಕೆಗಳ ಪ್ರಭಾವವನ್ನು ಮೀರಬಹುದಾದ ಹೊಸ ಸ್ವರೂಪದ ಕೊರೊನಾ ವೈರಸ್‌ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಸುದ್ದಿ ವ್ಯಾಪಿಸಿರುವುದು ಹೂಡಿಕೆದಾರರ ಮೇಲೂ ಪರಿಣಾಮ ಬೀರಿದೆ. ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,600 ಅಂಶಕ್ಕೂ ಹೆಚ್ಚು ಕುಸಿತ ದಾಖಲಿಸಿದೆ.

ಸೆನ್ಸೆಕ್ಸ್‌ 1,687.94 ಅಂಶಗಳಷ್ಟು ಇಳಿಕೆಯಾಗಿ 57,107.15 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 509.80 ಅಂಶಗಳು ಕಡಿಮೆಯಾಗಿ 17,026.45 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಯಿತು.

ರಿಯಲ್‌ ಎಸ್ಟೇಟ್‌ ವಲಯ ಮತ್ತು ಲೋಹಕ್ಕೆ ಸಂಬಂಧಿಸಿದ ಷೇರುಗಳು ಶೇಕಡ 5ರಿಂದ6ರಷ್ಟು ಇಳಿಕೆ ಕಂಡಿವೆ. ಅನಿಲ, ತೈಲ, ಇಂಧನ, ಆಟೊ ಮೊಬೈಲ್‌ ಹಾಗೂ ಬ್ಯಾಂಕಿಂಗ್‌ ಷೇರುಗಳು ಶೇಕಡ 3ರಿಂದ 4ರಷ್ಟು ಕುಸಿದಿವೆ. ಆದರೆ, ಫಾರ್ಮಾ ಷೇರುಗಳು ಶೇಕಡ 2ರವರೆಗೂ ಏರಿಕೆ ದಾಖಲಿಸಿವೆ.

ರಿಲಯನ್ಸ್‌, ಟಾಟಾ ಮೋಟಾರ್ಸ್‌, ಮಾರುತಿ ಸುಜುಕಿ ಇಂಡಿಯಾ, ಟಾಟಾ ಸ್ಟೀಲ್‌, ಎಸ್‌ಬಿಐ, ಐಟಿಸಿ, ಟೈಟಾನ್‌, ಎಚ್‌ಡಿಎಫ್‌ಸಿ ಸೇರಿದಂತೆ ಬಹುತೇಕ ಷೇರುಗಳು ಕುಸಿತ ದಾಖಲಿಸಿವೆ.

ಹೊಸ ಸ್ವರೂಪದ ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸುವುದಾಗಿ ಜರ್ಮನಿ ಈಗಾಗಲೇ ಪ್ರಕಟಿಸಿದೆ. ಕಠಿಣ ನಿಯಂತ್ರಣ ಹಾಗೂ ಪರೀಕ್ಷೆಗಳನ್ನು ಅಳವಡಿಸಿಕೊಳ್ಳುವುದಾಗಿ ಭಾರತ ಮತ್ತು ಸಿಂಗಪುರ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT