ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1922ರಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂಗರಕ್ಷಕರ ಮಸೀದಿಯನ್ನು ನಿರ್ಮಿಸಿದರು. ಆ ವರ್ಷದ ಏಪ್ರಿಲ್ 14ರಂದು ಮಸೀದಿ ಉದ್ಘಾಟಿಸಿದ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ‘ನಿಮ್ಮ ವಸತಿಗೃಹಗಳ ಒಂದು ಪಕ್ಕದಲ್ಲಿ ಹಿಂದೂ ದೇವಾಲಯವಿದೆ. ಇನ್ನೊಂದು ಪಕ್ಕದಲ್ಲಿ ಮಸೀದಿ ಇದೆ. ಈ ಎರಡೂ ಪೂಜಾಮಂದಿರಗಳು ಬೇರೆ ಬೇರೆ ಧರ್ಮಕ್ಕೆ ಸೇರಿದವಾದರೂ, ಅಲ್ಲಿ ನಡೆಯುವುದು ಒಂದೇ. ಅದು ಭಕ್ತಿಯ ಅರ್ಪಣೆ. ಅನೇಕತೆಯಲ್ಲಿ ಏಕತೆ ಎಂದರೆ ಇದೇ. ಇದು ತಾಯಿನಾಡಿನ ಧರ್ಮ. ಇದು ಸಾಮರಸ್ಯವನ್ನು ಜಗತ್ತಿಗೆ ಸಾರುವ ಅಮರ ಸಂದೇಶ’ ಎಂದು ಹೇಳಿದ್ದರು. 2025ರ ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಹ್ವಾನ ಮಾಡಿರುವ ಹಿನ್ನೆಲೆಯಲ್ಲಿ ವಿವಾದ ಎಬ್ಬಿಸುತ್ತಿರುವ ಪ್ರತಿಯೊಬ್ಬರೂ ನಾಲ್ವಡಿ ಅವರ ಈ ಮಾತುಗಳನ್ನು ಗಮನಿಸಬೇಕು. ಸೌಹಾರ್ದ ಮನೋಭಾವ ನಮ್ಮ ಮಣ್ಣಿನ ಗುಣ. ‘ಮೂರ್ತಿಪೂಜೆಯನ್ನು ಒಪ್ಪಿಕೊಂಡು, ಹಣೆಗೆ ಕುಂಕುಮ ಇಟ್ಟುಕೊಂಡು ಬರುವುದಾದರೆ ಬರಲಿ’ ಎಂದು ಬಾನು ಅವರ ಮೇಲೆ ಒತ್ತಡ ಹೇರುವುದು ತರವಲ್ಲ. ಈಗ ಬೇಕಾಗಿರುವುದು ಹಿಂದೂ ಮತ್ತು ಮುಸ್ಲಿಮರ ನಡುವೆ ಪರಸ್ಪರ ಗೌರವವೇ ವಿನಾ, ಯಾವುದೇ ಒಂದು ಧರ್ಮದ ಸಂಪ್ರದಾಯವನ್ನು ಇನ್ನೊಂದು ಧರ್ಮದವರು ಅನುಸರಿಸಬೇಕು ಎನ್ನುವುದಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬಾನು ಮುಷ್ತಾಕ್ ಅವರು ಉದ್ಘಾಟಿಸುತ್ತಿರುವುದು ನಾಡಹಬ್ಬ ದಸರಾ ಉತ್ಸವವನ್ನೇ ವಿನಾ ನವರಾತ್ರಿ ಪೂಜೆಯನ್ನಲ್ಲ.

ಮೈಸೂರು ದಸರಾ ಹಬ್ಬವನ್ನು ನಾಡಹಬ್ಬ ಎಂದು ಗುರುತಿಸಿದ ಮೇಲೆ ಅದು ಒಂದು ಜನಾಂಗಕ್ಕೆ, ಒಂದು ಧರ್ಮಕ್ಕೆ ಸೀಮಿತವಲ್ಲ. ಏಕಸಂಸ್ಕೃತಿಯ ಪ್ರತೀಕವೂ ಅಲ್ಲ. ಅದು ಎಲ್ಲರ ಹಬ್ಬ. ಎಲ್ಲ ಧರ್ಮ, ಎಲ್ಲ ಜನಾಂಗದವರ ಹಬ್ಬ.

ಮೈಸೂರು ದಸರಾ ಹಬ್ಬದ ಸೌಹಾರ್ದತೆಗೆ ದೊಡ್ಡ ಇತಿಹಾಸ ಇದೆ. ಮೈಸೂರು ರಾಜ್ಯವನ್ನು ಬ್ರಿಟಿಷರು ಆಳುವಾಗಲೂ, ಮುಸ್ಲಿಂ ದೊರೆಗಳು ಆಳುವಾಗಲೂ ದಸರಾ ಹಬ್ಬ ಇತ್ತು. ಆಗಲೂ ಅದು ಸೌಹಾರ್ದ ದಸರಾವೇ ಆಗಿತ್ತು ಎನ್ನುವುದನ್ನು ನಾವು ಮರೆಯಬಾರದು. ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆಯಲ್ಲಿ ಕರ್ನಾಟಕದ ಬಗ್ಗೆ ಹೇಳಿದ ‘ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ’ ಎಂಬ ಮಾತು ನಾಡಹಬ್ಬಕ್ಕೂ ಅನ್ವಯವಾಗುತ್ತದೆ.

ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಮೇಲೆ ಚಾಮುಂಡೇಶ್ವರಿ ಮೂರ್ತಿಯನ್ನು ಕುಳ್ಳಿರಿಸಲಾಗುತ್ತದೆ. ಚಾಮುಂಡೇಶ್ವರಿ ಕನ್ನಡನಾಡಿನ ದೇವತೆ. ನಾಡಿನೊಳಗೆ ಇರುವ ಎಲ್ಲರನ್ನೂ ಕಾಪಾಡುವ ತಾಯಿ ಆಕೆ. ಚಾಮುಂಡೇಶ್ವರಿಗೆ ಕೇವಲ ಹಿಂದೂ ಭಕ್ತರು ಮಾತ್ರ ಇಲ್ಲ. ಮುಸ್ಲಿಂ, ಕ್ರೈಸ್ತ ಭಕ್ತರೂ ಇದ್ದಾರೆ. ಚಾಮುಂಡೇಶ್ವರಿ ದೇವಾಲಯದ ಮುಂಭಾಗದಲ್ಲಿ ಇರುವ ಮಂಟಪವನ್ನು ಕಟ್ಟಿಸಿದ್ದು ಒಬ್ಬ ಮುಸ್ಲಿಂ ಭಕ್ತ. ಈ ಹಿಂದೆ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ದಸರಾ ಹಬ್ಬವನ್ನು ಉದ್ಘಾಟಿಸಿದ್ದರು. ತನ್ವೀರ್ ಸೇಠ್ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಚಾಮುಂಡೇಶ್ವರಿಯ ಗರ್ಭಗುಡಿಗೇ ತೆರಳಿ ಪೂಜೆ ಸಲ್ಲಿಸಿದ್ದರು. ರಾಜ ಮಹಾರಾಜರ ಕಾಲದಿಂದಲೂ ದಸರಾ ಹಬ್ಬದಲ್ಲಿ ಮುಸ್ಲಿಮರು ಭಾಗಿಯಾಗುವ ಸಂಪ್ರದಾಯ ಇದೆ. ಮಹಾರಾಜರ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವಾಗ ನಿರ್ದಿಷ್ಟ ಸ್ಥಳಗಳಲ್ಲಿ ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು ನಿಂತು ಮಹಾರಾಜರ ಮೇಲೆ ಪುಷ್ಪವೃಷ್ಟಿ ಮಾಡುತ್ತಿದ್ದರು. ಮೆರವಣಿಗೆಯಲ್ಲಿ ಸಾಗುವ ಕುದುರೆ ಸವಾರರು ಮತ್ತು ಆನೆ ಗಾಡಿಯಲ್ಲಿ ಮುಸ್ಲಿಮರೇ ಇರುತ್ತಿದ್ದರು. ದಸರಾ ನಡೆಯುವ ಹತ್ತು ದಿನಗಳಲ್ಲಿ ಮೈಸೂರಿನ ಎಲ್ಲ ಚರ್ಚ್ಗಳಲ್ಲಿ ‘ನಾಡಿಗೆ ಒಳಿತಾಗಲಿ’ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವೂ ಇದೆ.

ದಸರಾ ಹಬ್ಬ ಬಂತು ಎಂದರೆ ಪಲ್ಲಕ್ಕಿ ಶೃಂಗಾರದ ಜವಾಬ್ದಾರಿ ಮುಸ್ಲಿಮರದ್ದೇ ಆಗಿತ್ತು. ಬನ್ನಿಮಂಟಪದಲ್ಲಿ ದಸರಾ ಸಿದ್ಧತೆ ನಡೆಸುವುದು ಕೂಡ ಮುಸ್ಲಿಮರೆ. ಮೈಸೂರು ಅರಮನೆಯ ಪಕ್ಕದಲ್ಲಿಯೇ ಮನ್ಸೂರ್ ದಿವಾನ್ ಷಾ ವಲಿ ಎಂಬ ಸಂತರ ಗೋರಿ ಇದೆ. ಮಹಾರಾಜರಿಗೆ ಒಳ್ಳೆಯದಾಗಲಿ ಎಂದು ಅಲ್ಲಿ ಪ್ರಾರ್ಥನೆ ಮಾಡಿ, ಅಲ್ಲಿಂದ ಗಂಧದ ಧೂಪವನ್ನು ಮಹಾರಾಜರ ಬಳಿಗೆ ಮುಸ್ಲಿಮರೇ ಕೊಂಡೊಯ್ದು ಹಾಕುತ್ತಿದ್ದರು. ಮೈಸೂರಿನಲ್ಲಿರುವ ಬಹುತೇಕ ಮಸೀದಿಗಳನ್ನು ನಿರ್ಮಿಸಿದ್ದು ಮೈಸೂರು ಮಹಾರಾಜರು. ಮಸೀದಿಗಳಲ್ಲದೆ ಹಜರತ್ ಇಮಾಂ ಷಾ ವಲಿ, ಹೈದರ್ ಷಾ ವಲಿ ಮುಂತಾದ ಸಂತರ ಗೋರಿಗಳನ್ನೂ ಸರ್ಕಾರಿ ಇಲಾಖೆಯಿಂದಲೇ ನಿರ್ಮಿಸಲಾಗಿತ್ತು. ಅಲ್ಲಿನ ಸೇವೆಗೆ ಹಣ, ಪೂಜೆ ಖರ್ಚು, ಕೆಲಸಗಾರರಿಗೆ ಸಂಬಳ ಎಲ್ಲವನ್ನೂ ಮಹಾರಾಜರೇ ನೀಡುತ್ತಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಮುಸ್ಲಿಂ ಸೈನಿಕರಿಗಾಗಿಯೇ ಪ್ರತ್ಯೇಕ ಮಸೀದಿ ಕಟ್ಟಿಸಿದ್ದರು. ದಸರಾ ಸಂದರ್ಭದಲ್ಲಿ ಮೈಸೂರಿಗೆ ಬರುವ ಮುಸ್ಲಿಮರಿಗೆ ಅನುಕೂಲವಾಗಲಿ, ಊಟಕ್ಕೆ ಮತ್ತು ವಸತಿಗೆ ತೊಂದರೆಯಾಗದಿರಲಿ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಲಂಗರ್ ಖಾನಾವೊಂದನ್ನು ನಿರ್ಮಿಸಿದ್ದರು. ಅಲ್ಲದೆ ಅವರು ಕಛ್ನಿಂದ ಬಂದ ಮುಸ್ಲಿಮರಿಗಾಗಿಯೇ ‘ಕಚ್ಚೇ ಮೆಮನ್ ಮಸೀದಿ’ ನಿರ್ಮಾಣ ಮಾಡಿದ್ದರು.

ದಸರಾ ಉತ್ಸವದ ಆಚರಣೆ ಮೈಸೂರಿಗೆ ಬಂದಿದ್ದು ವಿಜಯನಗರದಿಂದ. ವಿಜಯನಗರ ಅರಸರ ಸೇನೆಯಲ್ಲಿ ಆಪ್ಘನ್ ಮುಸ್ಲಿಮರ ದೊಡ್ಡ ಪಡೆಯೇ ಇತ್ತು. ವಿಜಯನಗರದ ಅರಸರ ಕಾಲದಲ್ಲಿ ಕಟ್ಟಿಗೆ ಬಂಟ (ಬಾಡಿ ಗಾರ್ಡ್) ಆಗಿದ್ದ ಕಟ್ಟಿಗೆ ಅಹ್ಮದ್ ಖಾನ್, ಹಂಪಿಯ ರಾಜಬೀದಿಯಲ್ಲಿ ಒಂದು ಧರ್ಮಶಾಲೆ ಕಟ್ಟಿದ್ದಾನೆ. ಬಾವಿಯನ್ನೂ ತೆಗೆಸಿದ್ದಾನೆ. ಅದರ ಮೇಲೆ ಬರೆಸಿದ ಬರಹ ಹೀಗಿದೆ: ‘ರಾಯರಿಗೆ ಒಳ್ಳೇದಾಗಲಿ. ಸೂರ್ಯ ಚಂದ್ರರು ಇರುವವರೆಗೂ ಅವರಿಗೆ ಪುಣ್ಯ ಬರಲಿ’.

ಮುಸ್ಲಿಂ ವ್ಯಕ್ತಿಗಳನ್ನು ಬಾಡಿಗಾರ್ಡ್ ಆಗಿ ಇಟ್ಟುಕೊಳ್ಳುವ ಪದ್ಧತಿಯನ್ನು ಮೈಸೂರು ಅರಸರೂ ಮುಂದುವರಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಬಾಡಿಗಾರ್ಡ್ ಆಗಿದ್ದವನು ಪೀರ್ ಬೇಗ್. ಒಡೆಯರ್ ಅವರ ಆಪ್ತ ಬಂಟನಾಗಿದ್ದ ಆತ ಒಂದು ಕ್ಷಣವೂ ದೊರೆಯನ್ನು ಬಿಟ್ಟು ಕದಲುತ್ತಿರಲಿಲ್ಲ. ಈಗಲೂ ಮೈಸೂರು ಅರಮನೆಯಲ್ಲಿ ಒಡೆಯರ್ ಜೊತೆಗೆ ಆತನ ಪ್ರತಿಮೆಯನ್ನು ನೋಡಬಹುದು.

ಮೈಸೂರು ಅರಮನೆ ಕೂಡ ಸೌಹಾರ್ದದ ಸಂಕೇತವೇ ಆಗಿದೆ. ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣವಾದ ಅರಮನೆಯಲ್ಲಿ ಇಸ್ಲಾಂ ಶೈಲಿಯ ಸ್ಟಾರ್ಗಳು, ಹಿಂದೂ ಶೈಲಿಯ ಹಾವುಗಳು, ಕ್ರೈಸ್ತರ ಗೋಥಿಕ್ ಶೈಲಿಯ ವಿನ್ಯಾಸಗಳನ್ನು ಕಾಣಬಹುದು.

1927ರ ಅಕ್ಟೋಬರ್ 27ರಂದು ನಡೆದ ವಿಜಯದಶಮಿ ಜಂಬೂಸವಾರಿಯಲ್ಲಿ ನಾಲ್ವಡಿ ಅವರು ಆನೆಯ ಮೇಲಿನ ಅಂಬಾರಿಯಲ್ಲಿ ಮಿರ್ಜಾ ಇಸ್ಮಾಯಿಲ್ ಅವರನ್ನು ಕುಳ್ಳಿರಿಸಿಕೊಂಡು, ರಾಜಮಾರ್ಗದಲ್ಲಿ ಮೆರವಣಿಗೆ ಹೊರಟಿದ್ದರು. ಆಗ ಕೆಲವರು ಪ್ರತಿಭಟನೆ ನಡೆಸಿದರು. ಅಂಬಾರಿಯತ್ತ ಚಪ್ಪಲಿಗಳನ್ನು ತೂರಿದರು. ಅಂಬಾರಿ ಆನೆಯನ್ನು ಬೆದರಿಸುವ ಕೃತ್ಯವನ್ನೂ ಮಾಡಿದರು. ಆದರೆ ಅದಕ್ಕೆ ಆನೆಯೂ ಬೆದರಲಿಲ್ಲ. ಮಹಾರಾಜರೂ ಬೆದರಲಿಲ್ಲ. ಮುಂದಿನ ವರ್ಷವೂ ಅವರು ಮಿರ್ಜಾ ಇಸ್ಮಾಯಿಲ್ ಅವರಿಗೆ ಅಂಬಾರಿಯಲ್ಲಿ ಜಾಗ ಕೊಟ್ಟರು. ಬಾನು ಮುಷ್ತಾಕ್ ಅವರು ಕನ್ನಡ ಬಾವುಟದ ಬಗ್ಗೆ ಮತ್ತು ಭುವನೇಶ್ವರಿಯ ಬಗ್ಗೆ ಆಡಿದ ಮಾತುಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು ಹಾಗೂ ಅವರನ್ನು ಒಳಗೊಳ್ಳುವುದರ ಬಗ್ಗೆ ಪ್ರಯತ್ನಿಸಬೇಕು. ಬಾನು ಅವರಿಗೂ ಕನ್ನಡ ಎಲ್ಲವನ್ನೂ ಕೊಟ್ಟಿದೆ. ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿದ್ದು ಕನ್ನಡದಿಂದ. ಮೂರ್ತಿಪೂಜೆ ಮಾಡುವುದರಿಂದ ಏನೆಲ್ಲ ಕಷ್ಟವಾಗಬಹುದು ಎಂದು ಆಲೋಚಿಸಬೇಕಾದವರು ಬಾನು ಅವರೇ ವಿನಾ ಉಳಿದವರಲ್ಲ.

ದೇವುಡು ನರಸಿಂಹಶಾಸ್ತ್ರಿ ಅವರು ಒಮ್ಮೆ ಸರ್ವಜ್ಞ ಪದಗಳ ಸಂಪಾದಕರಾದ ರೆವರೆಂಡ್ ಚನ್ನಪ್ಪ ಉತ್ತಂಗಿ ಅವರನ್ನು ಭೇಟಿಯಾದಾಗ, ‘ತಾವು ನಾಳೆ ನಮ್ಮ ಮನೆಗೆ ಊಟಕ್ಕೆ ಬರಬಹುದೇ?’ ಎಂದು ಪ್ರಶ್ನಿಸಿದರಂತೆ. ಅದಕ್ಕೆ ಉತ್ತಂಗಿ ಅವರು ಒಪ್ಪಿಕೊಂಡರು. ನಂತರ ಶಾಸ್ತ್ರಿಗಳಿಗೆ, ತಾವಾದರೆ ಸಂಪ್ರದಾಯಸ್ಥ ಬ್ರಾಹ್ಮಣ, ಚನ್ನಪ್ಪನವರು ಕ್ರೈಸ್ತ ಪಂಗಡದವರು. ಅವರನ್ನು ಸತ್ಕರಿಸುವುದು ಹೇಗೆ ಎಂಬ ಪ್ರಶ್ನೆ ಮೂಡಿತು. ಅದಕ್ಕೆ ಅವರು ತಮ್ಮ ಗುರುಗಳಾದ ವೈದ್ಯನಾಥ ಶಾಸ್ತ್ರಿಗಳಲ್ಲಿ ವಿಚಾರಿಸಿದರು. ಅದಕ್ಕೆ ಗುರುಗಳು ‘ನಿನ್ನ ಮನೆಗೆ ಆ ಏಸು ದೇವನೇ ಬಂದರೆ ಹೇಗೋ ಹಾಗೆ ಅವರನ್ನು ಸತ್ಕರಿಸು’ ಎಂದು ಸಲಹೆ ಮಾಡಿದರು. ಅದರಂತೆ ದೇವುಡು ಅವರು ಸಪತ್ನೀಕರಾಗಿ ಉತ್ತಂಗಿ ಚನ್ನಪ್ಪ ಅವರ ಕಾಲು ತೊಳೆದು, ಪಾದೋದಕವನ್ನು ತಮ್ಮ ತಲೆಯ ಮೇಲೆ ಪ್ರೋಕ್ಷಿಸಿಕೊಂಡರು. ಚನ್ನಪ್ಪ ಅವರನ್ನು ಪೂರ್ವಾಭಿಮುಖವಾಗಿ ಕುಳ್ಳಿರಿಸಿ ತಾವು ಉತ್ತರಾಭಿಮುಖವಾಗಿ ಕುಳಿತು ಸಂಭಾಷಿಸಿದರು. ಸಹಪಂಕ್ತಿ ಭೋಜನವನ್ನೂ ಮಾಡಿದರು. ನಾವೂ ಹಾಗೆಯೇ ಬಾನು ಮುಷ್ತಾಕ್ ಅವರನ್ನು ಸ್ವಾಗತಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.