ಮಕರ ಸಂಕ್ರಮಣದ ಕಾಲವನ್ನು ಭಾರತೀಯ ಜ್ಯೋತಿಷ ಹಾಗೂ ವಿಜ್ಞಾನದ ಬಹು ಮುಖ್ಯವಾದ ಕಾಲ ಘಟ್ಟ ಎಂದು ಗುರುತಿಸುತ್ತದೆ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತದೆ. ವಿಜ್ಞಾನ, ಸೂರ್ಯನನ್ನು ಒಂದು ನಕ್ಷತ್ರ ಎಂದು ಗುರುತಿಸಿರುವಾಗ, ಇದನ್ನು ಭಾರತೀಯ ಜ್ಯೋತಿಷ ತಿರಸ್ಕರಿಸಿದೆ ಎಂದೇನಲ್ಲ. ಆದರೂ ಜ್ಯೋತಿಷ ತನ್ನದೇ ರೀತಿಯಲ್ಲಿ ಸೂರ್ಯನನ್ನು ಒಂದು ಗ್ರಹವನ್ನಾಗಿಯೇ ಗುರುತಿಸುತ್ತದೆ.

ಚಂದ್ರ ಕೂಡಾ ಒಂದು ಸ್ವತಂತ್ರವಾದ ಗ್ರಹ ಎಂದೇ ಜೋತಿಷ ಗುರುತಿಸುತ್ತದೆ. ವಿಜ್ಞಾನ ಚಂದ್ರನು ಒಂದು ಉಪಗ್ರಹ ಎಂದೇ ಗುರುತಿಸುತ್ತದೆ. ಹಾಗಾದರೆ ಯಾಕೆ ನಮ್ಮ ಪೃಥ್ವಿಗೆ ಚಂದ್ರ ಹಾಗೂ ಸೂರ್ಯ (ವಿಜ್ಞಾನದ ನಿಲುವನ್ನು ಮೀರಿ ನಿಂತಂತೆ) ಕೇವಲ ಗ್ರಹಗಳು ಎಂಬುದಾಗಿ ಭಾರತೀಯ ಜ್ಯೋತಿಷ ಗುರುತಿಸುತ್ತದೆ ಎಂಬ ವಿಚಾರ ಒಂದು ವಿಸ್ಮಯವಾಗಿದೆ.
.Sankranti 2026: ಸಂಕ್ರಾಂತಿ ಹಬ್ಬಕ್ಕೆ ಮಾಡುವ ಅಡುಗೆಯಲ್ಲಿದೆ ಆರೋಗ್ಯದ ರಹಸ್ಯ.ಮಕರ ಸಂಕ್ರಾಂತಿ: ನಾಡಿನ ಜನತೆಗೆ ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರ ಶುಭಾಶಯ.
ಭಾರತೀಯ ಜ್ಯೋತಿಷದ ಲೆಕ್ಕದ ವಿಧಾನವು ತುಂಬಾ ಹಿಂದಿನಿಂದಲೂ ಭೂಮಿಯನ್ನು ಬೆಳಗುವ ಸೂರ್ಯ ಚಂದ್ರರನ್ನು ಆಧರಿಸಿರುತ್ತದೆ. ಈ ಬಗ್ಗೆ ಹಲವಾರು ವಿಚಾರಗಳನ್ನು ಅವಲೋಕಿಸುವಾಗ ಈ ಸೂರ್ಯ ಚಂದ್ರರ ದೂರ ಎಷ್ಟು, ಹೇಗೆ, ಏನು ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಿತ್ತು ಎಂದೆನ್ನಬಹುದು.

ಈ ಅವಲೋಕನದಿಂದ ಅವು ಪ್ರತ್ಯೇಕವಾಗಿ ಯಾವ ಯಾವ ರೀತಿಯ ಗಾಢ ಪ್ರಭಾವಗಳನ್ನು ಮನುಷ್ಯರ ಮೇಲೆ ,ಸಸ್ಯ, ಗಿಡ, ಮರ, ಖಗ, ಮೃಗ ಹಾಗೂ ಉರಗ ಇತ್ಯಾದಿ ಜೀವ ಜಂತುಗಳ ಮೇಲೆ ಮಾಡುತ್ತವೆ ಎಂಬುದನ್ನೂ ಅಧ್ಯಯನ ನಡೆಸಿ, ತಿಳಿದು, ಇದು ಹೀಗೇ ಎಂಬ ನಿರ್ಣಯದ ಆಧಾರಗಳ ಮೇಲೆ ಹಲವಾರು ನಿಖರ ವಿಶ್ಲೇಷಣೆ ಮಾಡಿತ್ತು. ಆಕಾಶ ಕಾಯಗಳು ಈ ಬಗೆಯಲ್ಲಿ, ಹೀಗಿರುವಾಗ ಈ ರೀತಿ ಚೌಕಟ್ಟಿನ ಪರಿಧಿಯಲ್ಲಿ ಜಗದ ಜೀವ ಜಂತುಗಳ ಮೇಲೆ ನಿರ್ದಿಷ್ಟ ಪರಿಣಾಮ ಬೀರುವ ಶಕ್ತಿ ಪಡೆದಿವೆ ಎಂಬುದನ್ನು ವಿಶದವಾಗಿ ವಿವರಿಸಿತ್ತು.

ಈ ಅಧ್ಯಯನದ ಫಲವಾಗಿ ದೊರೆತ ದತ್ತಾಂಶಗಳ ಮೇಲಿಂದ ಭೂಮಿಗೆ ಅತ್ಯಂತ ದೂರದ ಸೂರ್ಯನೂ, ಅತಿ ಹತ್ತಿರದ ಚಂದ್ರನೂ ಒಂದೇ ಪ್ರಮಾಣದ ಪ್ರಭಾವ ಒದಗಿಸುವ ಅನುಪಾತ ಪಡೆದ ಪರಿಣಾಮವನ್ನು ಗಮನಿಸಲಾಗಿದೆ. ಎರಡೂ ಆಕಾಶ ಕಾಯಗಳನ್ನು, ಗ್ರಹಗಳು ಎಂದೇ ದೃಢವಾಗಿ ಗ್ರಹಿಸಲಾಗಿದೆ.

ಆದಾಗ್ಯೂ ಭಾರತೀಯ ಜ್ಯೋತಿಷ ಒಂದು ಜನ್ಮ ಕುಂಡಲಿಯಲ್ಲಿ, ಚಂದ್ರನು ಇರುವ (ಒಬ್ಬ ವ್ಯಕ್ತಿಯ ಸಂಬಂಧ, ಆಯಾ ಕುಂಡಲಿಯನ್ನು ಗಮನಿಸಿದಾಗ) ರಾಶಿಯ ಹಿಂದಿನ ಅಥವಾ ಮುಂದಿನ ಮನೆಗಳಲ್ಲಿ ಛಾಯಾ ಗ್ರಹಗಳಾಗಿರುವ ರಾಹು, ಕೇತುಗಳನ್ನು ಹೊರತುಪಡಿಸಿ ಯಾವುದೇ ಗ್ರಹವೂ ಇರದಿದ್ದರೆ ಚಂದ್ರ ಕೇಮದ್ರುಮ ದೋಷ ಪಡೆದಿದ್ದಾನೆ ಎಂಬುದಾಗಿ ಗುರುತಿಸುತ್ತದೆ. ಈ ರೀತಿಯ ಗುರುತಿಸುವಿಕೆಯ ಕಾರಣ ಅಪ್ರತ್ಯಕ್ಷವಾಗಿ ಚಂದ್ರನಿಗೆ ಕೇವಲ ತನ್ನದೇ ಸ್ವಯಂ ಬಲದ ಕೊರತೆ ಇದೆ ಎಂಬ ಕಾರಣದಿಂದ ಈ ನಿರ್ಣಯ ಎಂದು ಅನ್ನಬಹುದು.

ಹಾಗೆಯೇ ಸೂರ್ಯನಿಂದ ಚಂದ್ರನೂ ಸೇರಿದಂತೆ ಪ್ರತಿ ಗ್ರಹಗಳೂ ನಿರ್ದಿಷ್ಟ ಅಂತರವನ್ನು ಕಾಯ್ದುಕೊಳ್ಳದಿದ್ದರೆ ಅವು ಅಸ್ತ ಯೋಗದಿಂದಾಗಿ ಶಕ್ತಿ ಹೀನತೆ ಪಡೆಯುತ್ತವೆ. ಅದಕ್ಕಾಗಿಯೇ ಗುರು ಅಸ್ತ, ಶುಕ್ರ ಅಸ್ತ, ಚಂದ್ರನ ಪೂರ್ತಿ ಅಸ್ತ ಎಂದಾದ ಅಮಾವಾಸ್ಯೆಯ ಕಾಲ ಘಟ್ಟದಲ್ಲಿ ಶುಭ ಕಾರ್ಯಗಳು ನಿಷಿದ್ಧ.

ಒಟ್ಟಿನಲ್ಲಿ ಬೆಳಕು ಬೇಕು ಪೃಥ್ವಿ ಫಲಭರಿತಳಾಗಲು. ಸೂರ್ಯನ ಬೆಳಕಿರಲಿ, ಚಂದ್ರನ ಬೆಳಕೇ ಇರಲಿ, ಬೇಕು ಭೂ ಸೌರಭಕ್ಕೆ. ಬ್ರಹ್ಮ ಕಮಲ ಸೂರ್ಯನ ರಶ್ಮಿ ಇಷ್ಟಪಡವು. ಚಂದ್ರನ ಬೆಳಕೇ ಬೇಕು. ಸಾವಿರಾರು ಸೂಕ್ಷ್ಮ ಔಷಧಿಯ ಸಸ್ಯಗಳು ಚಿಗುರಿ ಬಲ ಪಡೆಯುವುದು ಚಂದ್ರನ ಬೆಳಕಿಗೆ. ಚಂದ್ರನ ಶೀತಲ ಕಿರಣಗಳೇ ಮನುಷ್ಯ ಲೋಕದ ಹೆಣ್ಣು ಗಂಡುಗಳ ಆಪ್ತತೆಗೆ ಬೇಕಾದ ವೇದಿಕೆಗೆ ಶಕ್ತಿಯ ಮೂಲ. ಸೂರ್ಯ ಜೀವದ ಚಲನೆಗಾಗಿ ಶಕ್ತಿ ಕೊಟ್ಟರೆ ಚಂದ್ರ ಮನಸ್ಸು ಎಂಬ ವಿಸ್ಮಯದ ಮೂಲಕವಾದ ಮಿಡಿತಗಳಿಗೆ ಕಾರಣನಾಗುತ್ತಾನೆ. ಭಾವನೆಗಳೆಲ್ಲ ಸಮ್ಮಿಳಿತವಾದ ಸಂವೇದನೆಗಳಿಗೆ ಕಾರಣನಾಗುತ್ತಾನೆ. ಮೂಲದ ಬೆಳಕಿನ ಪಥ ಒಂದೇ. ಆದರೆ ಅದು ನೇರ ಸೂರ್ಯನದೇ ಆದಾಗ ಬೇರೆ ಬಗೆ. ಚಂದ್ರನ ಬೆಳಕೇ ಆದಾಗ ಇನ್ನೊಂದು ಬಗೆ. ಕತ್ತಲಲ್ಲಿ ಸಾಮರ್ಥ್ಯಕ್ಕೆ ಅರ್ಥವಿಲ್ಲ. ಕತ್ತಲಿರದೆಯೇ ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾದ ನಿದ್ದೆಗೆ ಅವಕಾಶವಿಲ್ಲ. ಹಗಲಲ್ಲಿ ನಿದ್ರಿಸುವವರನ್ನ ಸೋಮಾರಿಗಳು ಎಂದು ಜಗತ್ತು ಗುರುತಿಸುತ್ತದೆ.
.ಮಕರ ಸಂಕ್ರಾಂತಿಯಲ್ಲಿ ರವಿ–ಕುಜ ಮಹಾಯೋಗ; ಈ ಆರು ರಾಶಿಗಳಿಗೆ ಆಸ್ತಿ ಭಾಗ್ಯ.ಮಕರ ಸಂಕ್ರಾಂತಿ: ಈ 5 ರಾಶಿಗಳಿಗೆ ಸಾಲಬಾಧೆಯಿಂದ ಮುಕ್ತಿ.
ಸೂರ್ಯನ ಪಥವೇ ಶಕ್ತಿ

ಮಳೆಗಾಲದಲ್ಲಿ ಭೂಮಿ ಆಕಾಶದ ಔದಾರ್ಯವಾದ ಮಳೆಯನ್ನು ಹೆಚ್ಚಾಗಿ ಬಯಸುತ್ತದೆ. ಇಡೀ ಭೂಮಂಡಲದ ನೀರು ಆವಿಯಾಗಿ ಹೋದದ್ದು ತಿರುಗಿ ಭೂಮಿಗೆ ಬೇಕು. ಆವಿಯಾಗಿಸುವ, ಮಳೆ ತರಿಸುವ ಚಕ್ರದ ಚಲನವಲನಗಳು ಸೂರ್ಯನಿಂದಲೇ ಋತು ಚಕ್ರವಾಗಿ ತಿರುಗುತ್ತಿದೆ. ಮುಂಗಾರು ಮಳೆಯಾಗಿ ಸುರಿದ ನೀರು, ಹಿಂಗಾರು ಮಳೆಯಾಗಿ ಸುರಿದ ನೀರು ತರಿಸಿದ ಕದಿರು ಸಂಪನ್ನ ಫಲವಾಗಿ ಹೊಮ್ಮಿದ ಸುಗ್ಗಿಯ ಸಂಭ್ರಮವೇ ಸಂಕ್ರಮಣದ ಸಂಕೇತ. ಎಳ್ಳು ಬೆಲ್ಲ ಹಬ್ಬದ ಹಿನ್ನೆಲೆಯಲ್ಲಿ ಮಾನವನ ಶಕ್ತಿಗಾಗಿನ ಮೂಲ. ಸಕ್ಕರೆ, ತೈಲ, ನಾರು, ಲವಣ ,ಪ್ರೋಟೀನ್ ಇತ್ಯಾದಿ ಆರೋಗ್ಯಯುತ ಜೀವಿಯ ಕಸುವಿಗೆ ಬೇಕು.

ಇವನ್ನು ಭೂಮಿಯಿಂದಲೇ ನಾವು ಪಡೆಯಬೇಕು. ಸಾವಯವ ಪದ್ಧತಿಯ ಹಳಿ ಗುಂಟವೇ ಆಗಬೇಕು. ಒಮ್ಮೆ ಇವನ್ನೆಲ್ಲ ಒದಗಿಸಿತು ಭೂಮಿ ಎಂದನ್ನುವ ಈ ಕ್ರಿಯೆಯ ಮುಕ್ತಾಯವೂ ಹೌದು, ಮತ್ತೆ ಇದೇ ಚಕ್ರ ಹಿಂತಿರುಗಿ ತಿರುಗಲಿಕ್ಕೆ ಬೇಕಾದ ಪ್ರಾರಂಭವೂ ಹೌದು ಎಂಬಂತೆ ಮಕರ ಸಂಕ್ರಾಂತಿ ಹಬ್ಬದ ಈ ಕಾಲ ನಮಗೆ ಮಕರ ವೃತ್ತವನ್ನು ಸೂರ್ಯ ಪ್ರವೇಶಿಸುವ ಮಕರ ಸಂಕ್ರಮಣ ಜಗದ ಫಲವಂತಿಕೆಗಾಗಿನ ಭೂಮಿಯ ಸಂಭ್ರಮದ ಹಾಗೂ ದಿವ್ಯವೇ ಆದ ಮಾಯೆ ಇಲ್ಲಿ ಆವರಣಗೊಂಡಿದೆ. ಕಾವನ್ನು ಒದಗಿಸಿ ಕುಕ್ಕುಟಗಳು ಹೇಗೆ ಅಂಡದಿಂದ ಹೊರಕ್ಕೆ ತರುತ್ತವೋ ಹಾಗೆ ಭೂಮಿ ಎಂಬ ಅಂಡಕ್ಕೆ ಕಾವೊದಗಿಸಿ ಮತ್ತೆ ಫಲ ಕೊಡುವ ಫಲವತಿಯಾಗಲು ಬೇಕಾದ ಬೀಜಗಳನ್ನು ರವಿ ಹದಗೊಳಿಸುತ್ತಾನೆ. ಈ ಹದದ ಫಲವಾಗಿಯೇ ಯುಗಾದಿಗೆ ಮರು ಚೈತನ್ಯದ ಸಂಕೇತವಾಗಿ ಚೈತ್ರ ಋತು ವಸಂತದ ರಂಗನ್ನು ಇಳೆಗೆ ಹೊದೆಸುತ್ತದೆ.

ಭಾರತೀಯ ಜ್ಯೋತಿಷ ವಿಜ್ಞಾನ ಹೇಳುವಂತೆ

ಈ ಬೆಳಕಿನ ಮೂಲಗಳಾದ ರವಿ ಚಂದ್ರರೇ ಭಾರತೀಯ ಜ್ಯೋತಿಷ ವಿಜ್ಞಾನದ ಆಧಾರ ಸ್ತಂಭಗಳು. ಇವಕ್ಕೆ ಪ್ರತಿರೋಧವೋ ಎಂಬಂತೆ ಅಸ್ತಿತ್ವಕ್ಕೆ ಗೋಚರಿಸದ ಕತ್ತಲ ಪಿಂಡಗಳಾದ ರಾಹು ಕೇತುಗಳು. ಇನ್ನುಳಿದ ಘಟಕಗಳು ಎಂದು ಗುರುತಿಸಲ್ಪಡುವ ಮಂಗಳ, ಬುಧ, ಗುರು ಇತ್ಯಾದಿ ಶನೈಶ್ಚರನವರೆಗಿನ ಗ್ರಹಗಳು ದೂರದಲ್ಲಿದ್ದರೂ ತಮ್ಮದಾದ ಪ್ರಭಾವವನ್ನು ಭೂಮಂಡಲಕ್ಕಾಗಿ ಕೊಡುವ ಅಶ್ವಿನಿ, ಭರಣಿ, ರೇವತಿ ಇತ್ಯಾದಿ 27 ನಕ್ಷತ್ರಗಳು ಭೂ ವಲಯ ಸಂವೇದನೆಗಳಿಗೆ ಚಾಲನೆ ಕೊಡುತ್ತವೆ.

ಹೀಗಾಗಿ ಭೂಮಿಗೆ ಬೀಳುವ ಮಳೆಯ ಶಕ್ತಿಯ ಮೂಲವನ್ನು ಈ ನಕ್ಷತ್ರಗಳ ಮಳೆ ಎಂದೇ ಗುರುತಿಸಲಾಗುತ್ತದೆ. ಈ ನಕ್ಷತ್ರಗಳ ಮಳೆಯು ಭೂಮಿಗೆ ಒದಗಿಸುವ ಶಕ್ತಿ ಒಂದಕ್ಕಿಂತ ಒಂದು ಸ್ವರೂಪದಲ್ಲಿ ಭಿನ್ನವೇ ಆಗಿರುತ್ತದೆ. ಈ ನಕ್ಷತ್ರಗಳ ಮಳೆ ಬಂದಾಗಲೇ ಕಡಲ ಒಳಗೆ ಮತ್ಸ್ಯ ಸಂಪತ್ತಿಗೆ ಹೆಚ್ಚಿನ ದಾರಿ ಎಂದು ಅರಿತೇ ಭಾರಿ ಮಳೆ ಇದ್ದರೂ ಮೀನು ಹಿಡಿಯಲು ಮತ್ಸೋದ್ಯಮಿಗಳ ದಂಡು ಧಾವಿಸುತ್ತದೆ. ಸ್ವಾತಿ ಮಳೆಯ ಸಮಯ ಮುತ್ತುಗಳು ಚಿಪ್ಪಲ್ಲಿ ಬೆಳೆಯುತ್ತವೆ ಎಂಬ ಮಹತ್ವದ ನಂಬಿಕೆ ನಮ್ಮ ಸಂಸ್ಕೃತಿಯ ಭಾಗವಾಗಿದೆ.

ಭಾರತೀಯ ಜ್ಯೋತಿಷವನ್ನು ಕಾಲದ ಗುರುತಿಸುವಿಕೆಯಲ್ಲಿಯೂ ಯಾವ ರೀತಿಯಲ್ಲಿ ವೈಜ್ಞಾನಿಕವಾಗಿ ಉಪಯೋಗಿಸಬಹುದು ಎಂಬುದಕ್ಕೆ ಒಂದು ಟಿಪ್ಪಣಿ ಎಂಬಂತೆ ಈ ಬರಹವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.