ಧ್ಯಾನದಲ್ಲಿ ಮೂರು ಸುವರ್ಣ ನಿಯಮಗಳಿವೆ. ಮೊದಲನೆಯ ನಿಯಮವೆಂದರೆ, ಮುಂದಿನ ಹತ್ತು-ಇಪ್ಪತ್ತು ನಿಮಿಷಗಳವರೆಗೆ 'ನನಗೆ ಏನೂ ಬೇಡ', ಈ ರೀತಿಯಾಗಿ ನಿರ್ಧರಿಸಬಲ್ಲಿರೇ? ಹಾಗಾದರೆ, ಧ್ಯಾನ ಮಾಡಿದ ಹತ್ತಿಪ್ಪತ್ತು ನಿಮಿಷಗಳ ನಂತರ ನಿಮಗೇನೆಲ್ಲಾ ಬೇಕೋ ಅದನ್ನು ಪಡೆದುಕೊಳ್ಳಬಹುದು. ಆದರೆ, ಈ ಅವಧಿಯಲ್ಲಿ ಜೀವನದಲ್ಲಿ ನನಗೇನೂ ಬೇಡ ಎಂದುಕೊಳ್ಳುವುದು ಮುಖ್ಯ.

ಎರಡನೆಯದೆಂದರೆ, 'ನಾನು ಏನನ್ನೂ ಮಾಡುವುದಿಲ್ಲ’. ಧ್ಯಾನವೆಂದರೆ ನಿಮ್ಮ ಆಲೋಚನೆಗಳನ್ನೆಲ್ಲಾ ಓಡಿಸುವುದಲ್ಲ, ಏಕಾಗ್ರತೆಯಲ್ಲ, ಏನನ್ನೋ ಮಾಡುತಲಿರುವುದಲ್ಲ. ಧ್ಯಾನವೆಂದರೆ ಇದ್ಯಾವುದೂ ಅಲ್ಲ.

ಮೂರನೆಯ ವಿಷಯವೆಂದರೆ, ‘ನಾನು ಯಾರೂ ಅಲ್ಲ’. ನೀವು ಯಾರೋ ‘ಮಹಾನ್ ವ್ಯಕ್ತಿ, ಅತೀ ಬುದ್ಧಿವಂತ ವ್ಯಕ್ತಿ, ಅತೀ ಮೂರ್ಖ ವ್ಯಕ್ತಿ’ ಎಂದುಕೊಂಡು ಕುಳಿತಾಗ ಧ್ಯಾನವಾಗುವುದಿಲ್ಲ. ನೀವು ಬಹಳ ಧನವಂತರು ಅಥವಾ ಬಡವರು ಎಂದುಕೊಂಡು ಕುಳಿತರೆ, ಧ್ಯಾನವು ದೂರವಾಗಿಯೇ ಉಳಿಯುತ್ತದೆ. ನೀವು ಬಹಳ ಪಾಪಿಗಳು ಅಥವಾ ಅತೀ ಪುಣ್ಯವಂತರು, ವಿದ್ಯಾರ್ಥಿ ಅಥವಾ ಸನ್ಯಾಸಿ ಎಂದುಕೊಂಡು ಕುಳಿತರೆ, ನಿಮಗೆ ಧ್ಯಾನವು ಅಸಾಧ್ಯವಾದ ವಿಷಯವೇ ಆಗುತ್ತದೆ.

‘ನನಗೇನೂ ಬೇಡ, ನಾನು ಏನನ್ನೂ ಮಾಡುವುದಿಲ್ಲ, ನಾನು ಯಾರೂ ಅಲ್ಲ’ - ಧ್ಯಾನವನ್ನು ಆರಂಭಿಸಲು ಇದು ಮೊಟ್ಟಮೊದಲನೆಯ ಅವಶ್ಯಕತೆ. ಧ್ಯಾನವೆಂದರೆ ಶಬ್ದದಿಂದ ಮೌನದೆಡೆಗಿನ ಪಯಣ, ಚಲನೆಯಿಂದ ಸ್ತಬ್ಧತೆಯ ವರೆಗಿನ ಪಯಣ, ಸೀಮಿತವಾದ ಗುರುತಿನಿಂದ ನಿಸ್ಸೀಮವಾದ ಆಕಾಶದೆಡೆಗಿನ ಪಯಣ.

ಧ್ಯಾನವು ಒಂದು ಕಲೆ. ಎಲ್ಲರಿಗೂ ಹತ್ತು ಬೆರಳುಗಳಿವೆ. ಆ ಹತ್ತು ಬೆರಳುಗಳನ್ನು ಬಳಸುವುದು ಹೇಗೆ ಎಂದು ಕಲಿತು ವೀಣೆಯನ್ನು ಸುಮಧುರವಾಗಿ ನುಡಿಸಲು ಸಾಧ್ಯ. ಅದೇ ರೀತಿಯಾಗಿ ನಮಗೆಲ್ಲರಿಗೂ ಮನಸ್ಸಿದೆ, ನಾವೆಲ್ಲರೂ ಆಲೋಚಿಸಬಲ್ಲೆವು ಮತ್ತು ನಮಗೆಲ್ಲರಿಗೂ ಧ್ಯಾನ ಮಾಡಲು ಸಾಧ್ಯ. ಮನಸ್ಸನ್ನು ಹೇಗೆ ಪ್ರಶಾಂತಗೊಳಿಸುವುದು ಎಂದು ಕಲಿಯುವುದು ಒಂದು ಕಲೆ. ಆ ಕಲೆಯೇ ಧ್ಯಾನ.

ನಮ್ಮ ಮೂಲವೇ ಆಗಿರುವ ನಮ್ಮ ಶಕ್ತಿಯನ್ನು ಸಂಪರ್ಕಿಸುವುದು. ಮನಸ್ಸು ಪ್ರಶಾಂತವಿದ್ದಾಗ, ನಮ್ಮೊಳಗೆ ನಾವು ಹೊಂದಿರುವ ಅಪಾರವಾದ ಶಕ್ತಿ ಹಾಗೂ ಬುದ್ಧಿವಂತಿಕೆಯ ಸಂಪರ್ಕಕ್ಕೆ ಸಾಧ್ಯವಾಗುತ್ತದೆ. ಆಳವಾದ ವಿಶ್ರಾಂತಿಯನ್ನು ಪಡೆಯುವ, ಮತ್ತದೇ ಸಮಯದಲ್ಲಿ ಜಾಗರೂಕವಾಗಿಯೂ ಇರುವ ಸ್ಥಿತಿಯೇ ಧ್ಯಾನ. ಆಳವಾದ ವಿಶ್ರಾಂತಿಯನ್ನು ಪಡೆಯುವುದು ಒಂದು ಕುಶಲತೆ, ಆದರೂ ಪ್ರಜ್ಞೆಯಿಂದ ತುಂಬಿ, ಜಾಗರೂಕರಾಗಿರುವುದು. ಸಾಮಾನ್ಯವಾಗಿ, ‘ಮನಸ್ಸನ್ನು ಏಕಾಗ್ರಗೊಳಿಸಲು ಸಾಧ್ಯವೇ ಇಲ್ಲ. ಮನಸ್ಸಿನ ತುಂಬಾ ಆಲೋಚನೆಗಳೇ ಇರುತ್ತವೆ. ಆಲೋಚನೆಗಳಿಂದ ನನಗೆ ಸ್ವಾತಂತ್ರ್ಯ ಬೇಕು. ವಿರಮಿಸಲು ಬಹಳ ಕಷ್ಟ’ ಎನ್ನುವವರೆಲ್ಲರೂ ಸಾಕಷ್ಟು ಧ್ಯಾನ ಮಾಡಬೇಕು. ಧ್ಯಾನ ಮಾಡುವುದನ್ನು ಕಲಿಯಬೇಕು. ಭಗವಂತನೊಡನೆ ಮಾತನಾಡುವುದು ಹೇಗೆ ಎಂಬುದು ಕೆಲವರಲ್ಲಿ ಇರುವ ಪ್ರಶ್ನೆ. ಪ್ರಾರ್ಥನೆ ಎಂದರೆ, ‘ಭಗವಂತ ನನಗೆ ಅದನ್ನು ಕೊಡು, ಇದನ್ನು ಕೊಡು’ ಎಂದು ಕೇಳುತ್ತಲಿರುವುದು. ಧ್ಯಾನವೆಂದರೆ, ‘ಭಗವಂತ.. ನಾನಿಲ್ಲಿದ್ದೇನೆ. ನಿನ್ನನ್ನು ಕೇಳಿಸಿಕೊಳ್ಳಲು ಸಿದ್ಧವಾಗಿದ್ದೇನೆ’ ಎನ್ನುವುದು. ಧ್ಯಾನ ಮಾಡಿದಾಗ ಭಗವಂತನನ್ನೂ ಕೇಳಿಸಿಕೊಳ್ಳಬಲ್ಲಿರಿ.

ಆಳವಾದ ವಿಶ್ರಾಂತಿಯೊಂದಿಗೆ, ಜಾಗೃತವಾಗಿರುವ ಸ್ಥಿತಿಯೇ ಧ್ಯಾನ. ಸಂಧ್ಯಾಕಾಲದಲ್ಲಿ ಬೆಳಿಗ್ಗೆ ಸಂಜೆ ಧ್ಯಾನ ಮಾಡಿ, ಕೆಟ್ಟ ಸಮಯವಿದ್ದಾಗ ಧ್ಯಾನ ಮಾಡಿ ಎನ್ನುತ್ತಾರೆ. ಹೀಗೇ ಧ್ಯಾನ ಮಾಡುತ್ತಾ ಹೋದಾಗ ಏನಾಗುತ್ತದೆ? ಧ್ಯಾನ ಮಾಡಿದಾಗ ಮನಸ್ಸಿನ ಪ್ರಭಾವದಿಂದ ಹೊರಬರುತ್ತೇವೆ ಮತ್ತು ಆತ್ಮದೊಳಗೆ ಹೊಕ್ಕುತ್ತೇವೆ. ಆ ಆತ್ಮವೇ ಶಿವತತ್ವ. ‘ಶಿವ’ ಎಂದರೆ ಸದಾ ಮಂಗಳಮಯವಾದ, ಉತ್ಥಾಪಿಸುವ, ಆದರವನ್ನು ತೋರುವ, ಪ್ರೇಮಮಯಿಯಾದ ಚೇತನ. ಆ ಮಂಗಳಮಯವಾದ ಶಿವತತ್ವವು ಮನಸ್ಸಿನ ನಕಾರಾತ್ಮಕತೆಯೆಲ್ಲವನ್ನೂ ತೊಡೆದು ಹಾಕುತ್ತದೆ, ಕಾಲದ ಕೆಟ್ಟ ಪ್ರಭಾವವೆಲ್ಲವನ್ನೂ ತೊಡೆದು ಹಾಕುತ್ತದೆ.

ಧ್ಯಾನ ಮಾಡುವುದನ್ನು ಕಲಿತಾಗ ನಿಮ್ಮ ಜೀವನದ ಅತೀ ಗಹನವಾದ ಅನುಭವವನ್ನು ಪಡೆಯುತ್ತೀರಿ. ಧ್ಯಾನ ಮಾಡುವುದನ್ನು ಕಲಿಯಲು ನೀವು ಹಿಮಾಲಯಕ್ಕೆ ಹೋಗಬೇಕಿಲ್ಲ, ಸನ್ಯಾಸಿಗಳಾಗಬೇಕಿಲ್ಲ, ನಿಮ್ಮ ಜೀವನಶೈಲಿಯನ್ನು ಇದಕ್ಕಾಗಿ ಬದಲಿಸಬೇಕಿಲ್ಲ, ವಿಪರೀತ ತಪಸ್ಸನ್ನು ಮಾಡಬೇಕಿಲ್ಲ. ಸರಿಯಾದ ಮಾಗದರ್ಶಕರಿದ್ದರೆ, ಧ್ಯಾನವನ್ನು ಸುಲಭವಾಗಿ ಕಲಿಸಿ, ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳುವುದನ್ನೂ ಕಲಿಸಬಲ್ಲರು. ಶಬ್ದವನ್ನು, ಮಂತ್ರವನ್ನು ಬಳಸಿ ಧ್ಯಾನ ಮಾಡಿದಾಗ ಮನಸ್ಸಿಗೆ ಬಹಳ ಅದ್ಭುತ ಎನಿಸುತ್ತದೆ. ಪ್ರತಿನಿತ್ಯ ದಿನಕ್ಕೊಮ್ಮೆ ಅಥವಾ ಎರಡು ಸಲ ಧ್ಯಾನ ಮಾಡುವುದನ್ನು ಮುಂದುವರಿಸಿದರೆ, ನಿಮ್ಮಲ್ಲಿ ದೊಡ್ಡ ಪರಿವರ್ತನೆಯೇ ಆಗುತ್ತಿರುವುದನ್ನು ಕಾಣುತ್ತೀರಿ. ನಿಮ್ಮ ಸುತ್ತಲೂ ಇರುವವರೂ ನಿಮ್ಮಲ್ಲಿರುವ ಸುಂದರವಾದ ಶಕ್ತಿಯನ್ನು ಗುರುತಿಸಲು ಆರಂಭಿಸುತ್ತಾರೆ.

ಸಹಜವಾದ ರೀತಿಯಲ್ಲಿ ಧ್ಯಾನ ಮಾಡಿದಾಗ ಸಹಜವಾದ ರೀತಿಯಲ್ಲಿ ನಮ್ಮ ಆಲೋಚನೆಗಳನ್ನು ದಾಟಿ, ನಮ್ಮ ಅಸ್ತಿತ್ವದ ಮೂಲದ ಬಳಿ ತಲುಪುತ್ತೇವೆ. ಉಪದೇಶದಿಂದ ಒಂದು ವೈಯಕ್ತಿಕ ಮಂತ್ರವನ್ನು ಪಡೆಯುತ್ತೀರಿ ಮತ್ತು ಆ ಮಂತ್ರವನ್ನು ನಿಮ್ಮೊಳಗೆ ಗೋಪ್ಯವಾಗಿ, ಭದ್ರವಾಗಿ ಇಟ್ಟುಕೊಳ್ಳುತ್ತೀರಿ. ಒಂದು ಬೀಜವನ್ನು ಬಿತ್ತಿ, ಅದರ ಮೇಲೆ ಮಣ್ಣನ್ನು ಮುಚ್ಚಿದ ಹಾಗೆ. ಆಗ ಆ ಬೀಜವು ಕೆಳಗೆ ಬೇರುಗಳನ್ನು, ಮೇಲೆ ಚಿಗುರನ್ನು ಹೊಂದುತ್ತದೆ. ಧ್ಯಾನದ ಬೀಜಗಳನ್ನು ನೆಟ್ಟು, ದಿನನಿತ್ಯ ಅದರ ಅಭ್ಯಾಸವನ್ನು ಮಾಡಬಹುದು. ಆಗ ಸಾಕಷ್ಟು ಆನಂದ, ಸ್ಪಷ್ಟತೆ, ಪ್ರಶಾಂತತೆ, ಅಂತಃಸ್ಫುರಣೆ, ಎಲ್ಲವೂ ಜೀವನದಲ್ಲಿ ಚಿಮ್ಮಿ ಹೊರಬರಲು ಆರಂಭಿಸುತ್ತದೆ. ಮಂತ್ರವನ್ನು ಪಡೆದುಕೊಂಡ ನಂತರ ನೀವು ರೈಲು, ವಿಮಾನ, ಕಾರಿನಲ್ಲಿ ಪಯಣಿಸುತ್ತಿದ್ದರೂ ಕುಳಿತು ಧ್ಯಾನ ಮಾಡಬಹುದು. ಆದರೆ, ಕಾರು ಹಾಗೂ ಬೈಕ್ ಚಾಲನೆ ಮಾಡುವಾಗಲ್ಲ!

ಧ್ಯಾನವನ್ನು ಹೊರತುಪಡಿಸಿ ಬೇರೆ ಯಾವ ವ್ಯಾಯಾಮದಿಂದಲೂ ಮೆದುಳಿನ ಗ್ರೇ ಮ್ಯಾಟರ್ ಅನ್ನು ಹೆಚ್ಚಿಸಲು ಸಾಧ್ಯವಿಲ್ಲ. ಅದು ಕೇವಲ ಧ್ಯಾನದಿಂದ ಮಾತ್ರ ಎಂದು ವಿಜ್ಞಾನಿಗಳು ಪ್ರಕಟಿಸಿರುವ ತಮ್ಮ ವೈಜ್ಞಾನಿಕ ಪತ್ರಗಳಲ್ಲಿ ತಿಳಿಸಿದ್ದಾರೆ. ಮಿದುಳಿನ ವಿನ್ಯಾಸದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಮಿದುಳು ಕಂಪನಯುತವಾಗುತ್ತದೆ, ಹೆಚ್ಚು ಸೃಜನಶೀಲವಾಗುತ್ತದೆ, ಅಂತಃಸ್ಫುರಣೆ ಹೆಚ್ಚುತ್ತದೆ, ಮೆದುಳು ಸಂತೋಷಮಯವಾಗುತ್ತದೆ. ಇಂದು ಇದು ಬಹಳ ಅವಶ್ಯಕ. ಖಿನ್ನತೆಯು ಇಂದು ಭೂಮಿಯ ಮೇಲೆ ಹೆಚ್ಚು ವ್ಯಾಪಕವಾಗಿದೆ. ಔಷಧಿಯ ಪ್ರಭಾವವನ್ನೂ ಇದು ಮೀರುತ್ತದೆ, ನಮ್ಮ ಕಂಪನವೆಲ್ಲವೂ ಸಕಾರಾತ್ಮಕವಾಗುತ್ತದೆ. ಆದ್ದರಿಂದ, ಎಲ್ಲರೂ ಪ್ರತಿನಿತ್ಯ ಕೆಲ ನಿಮಿಷಗಳ ಕಾಲ ಧ್ಯಾನ ಮಾಡಿ ಜೀವನವನ್ನು ಒತ್ತಡಮುಕ್ತವಾಗಿ ಮಾಡಿಕೊಳ್ಳಬೇಕು, ಜೀವನದಲ್ಲಿ ಹೆಚ್ಚು ಸಂತೋಷವನ್ನು ಪಡೆಯಬೇಕು.

ವಿಶ್ವ ಧ್ಯಾನ ದಿನದ ನೇರ ಪ್ರಸಾರ ಶನಿವಾರ (ಡಿಸೆಂಬರ್ 21) ರಾತ್ರಿ 8 ಗಂಟೆಗೆ https://www.youtube.com/live/QvlYzOATbWo

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.