ಬಾದಾಮಿ: ಪಟ್ಟಣದಲ್ಲಿರುವ ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಕತ್ತಲು ಆವರಿಸಿದ್ದರಿಂದ ತಾಲ್ಲೂಕು ಘಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೇಲೂರಪ್ಪ ವಡ್ಡರ ಮತ್ತು ಯುವಕರು ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಧರಣಿ ಕೈಗೊಂಡರು.

‘ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆ ಇಲ್ಲ. ಸಂಪೂರ್ಣವಾಗಿ ಕತ್ತಲಾಗಿದೆ ಎಂದು ರೋಗಿಯ ಸಂಬಂಧಿಕರೊಬ್ಬರು ಕರೆ ಮಾಡಿದಾಗ ಅಲ್ಲಿಗೆ ತೆರಳಿದಾಗ ಆಸ್ಪತ್ರೆಯಲ್ಲಿ ಬೆಳಕಿಲ್ಲದ್ದು ಕಂಡು ಬಂದಿತು ’ ಎಂದು ಬೇಲೂರಪ್ಪ ಪ್ರತಿಕ್ರಿಯಿಸಿದರು.

‘ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದ ವೈದ್ಯರೂ ಸಹ ಇರಲಿಲ್ಲ. ಫೋನ್ ಮಾಡಿ ಕರೆಸಿದಾಗ ವೈದ್ಯರು ಬಂದರು. ಕತ್ತಲಿನಲ್ಲಿ ರೋಗಿಗಳು ಪರದಾಡಬೇಕಾಯಿತು. ಆಸ್ಪತ್ರೆಗೆ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ ಒತ್ತಾಯಿಸಿದರು.

‘ಎರಡು ದಿನಗಳಿಂದ ಕರೆಂಟ್ ಇರಲಿಲ್ಲ. ಕತ್ತಲಲ್ಲಿಯೇ ಪರದಡಬೇಕಾಯಿತು. ಇಂದು ಬೆಳಿಗ್ಗೆ ಬಂದಿದೆ. ರೋಗಿಗಳಿಗೆ ಬಿಸಿ ನೀರಿನ ವ್ಯವಸ್ಥೆಯ ಇಲ್ಲ. ಬಿಸಿ ನೀರಿಗೆ ಹೊರಗೆ ಹೋಗಬೇಕು ’ ಎಂದು ಆಸ್ಪತ್ರೆಯ ರೋಗಿಗಳು ಶುಕ್ರವಾರ ಹೇಳಿದರು.

‘ನಿನ್ನೆ ರಾತ್ರಿ ಒಂದೇ ದಿನ ವಿದ್ಯುತ್ ಇಲ್ಲ. ದುರಸ್ತಿ ಮಾಡಿಸಲು ಹೇಳಲಾಗಿದೆ. ದುರಸ್ತಿ ಕಾರ್ಯ ನಡೆದಿದೆ. ಇಂದು ಪೂರ್ಣಗೊಳ್ಳುವುದು. ಬಿಸಿ ನೀರಿನ ವ್ಯವಸ್ಥೆ ಮಾಡುವುದಾಗಿ ’ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯ ವೀರೇಶ ಶೆಟ್ಟರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.