ಬಾಗಲಕೋಟೆ: ದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಕಷ್ಟು ಅವಕಾಶವಿದ್ದು, ಮಿತವಾದ ನೀರು, ಪೋಷಕಾಂಶ ಉಪಯೋಗಿಸಿ ಬೆಳೆಯುವುದರಿಂದ ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್ ಬಾಲಾಜಿ ಕುಲಕರ್ಣಿ ಹೇಳಿದರು.

ತೋ.ವಿ.ವಿ. ಆವರಣದಲ್ಲಿರುವ ದಾಳಿಂಬೆ ಉತ್ಕೃಷ್ಟ ಕೇಂದ್ರದಲ್ಲಿ ಇಂಡೋ-ಇಸ್ರೋ ಸಹಯೋಗದಲ್ಲಿ ಮಂಗಳವಾರ ಆರಂಭವಾದ ನೀರಾವರಿ ಹಾಗೂ ರಸಾವರಿ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ದೇಶವಾದ ಇಸ್ರೇಲ್ನಲ್ಲಿ ನೀರಿನ ಮರು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಯುತ್ತಿರುವುದು ಮಾದರಿ ದೇಶವಾಗಿ ಹೊರಹೊಮ್ಮಿದೆ ಎಂದರು.

ದೇಶ ಹಾಗೂ ರಾಜ್ಯದಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಸಿಕೊಂಡು ತೋಟಗಾರಿಕೆ ಬೆಳೆ ಬೆಳೆದಲ್ಲಿ ರೈತರು ಹೆಚ್ಚಿನ ಆದಾಯ ಪಡೆಯಬಹುದಾಗಿದೆ. ಇಲಾಖಾ ಅಧಿಕಾರಿಗಳು ರೈತರಿಗೆ ಹೊಸ, ಹೊಸ ತಂತ್ರಜ್ಞಾನ ಹಾಗೂ ಅವಿಷ್ಕಾರವನ್ನು ರೈತರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಇಂಡೋ-ಇಸ್ರೇಲ್ ಯೋಜನೆ ಯೋಜನೆ ಅಧಿಕಾರಿ ಬ್ರಹ್ಮದೇವ ಮಾತನಾಡಿ, ದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಉತ್ಕೃಷ್ಟ ಕೇಂದ್ರ ಸ್ಥಾಪಿಸಲಾಗಿದ್ದು, ಬಾಗಲಕೋಟೆಯಲ್ಲಿಯೂ ಇದೆ. ಇವುಗಳು ಇಸ್ರೇಲ್ ದೇಶದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಬೆಂಗಳೂರು ಲಾಲ್ಬಾಗ್ನ ಉಪ ನಿರ್ದೇಶಕ ಕೆ.ಬಿ.ದುಂಡಿ ಮಾತನಾಡಿ, ಬಾಗಲಕೋಟೆ ಜಿಲ್ಲೆಯ ಮೊದಲಿನಿಂದಲೂ ದಾಳಿಂಬೆ ಬೆಳೆಗೆ ಪ್ರಸಿದ್ದಿಯಾಗಿದೆ. ಉತ್ತಮ ನೀರಾವರಿ ಮತ್ತು ರಸಾವರಿ ಪದ್ಧತಿಗಳನ್ನು ಉಪಯೋಗಿಸಿಕೊಂಡು ರೈತರು ಉತ್ತಮ ಫಸಲು ತೆಗೆಯಬೇಕು ಎಂದು ಹೇಳಿದರು.

ನೆಟಾಪಿನ್ ಕಂಪನಿಯ ಪ್ರಶಾಂತ ಮುಂಡೋಳಿ ಮತ್ತು ಸಂದೀಪ ಜಾವಳೇಕರ, ಹನಿ ನೀರಾವರಿ ಹಾಗೂ ರಸಾವರಿ ಪದ್ದತಿ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಮಹಾರಾಷ್ಟ್ರ, ಗೋವಾ, ಕೇರಳ, ಗುಜರಾತ್ ಹಾಗೂ ಕರ್ನಾಟಕದ 32 ಜನ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.