ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ರೈತರು, ಪೊಲೀಸರ ಮೇಲೆಯೂ ತೂರಲಾಗಿದೆ. ಕಾರ್ಖಾನೆಗೆ ಹೋಗುವ ಮೊದಲೇ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹೊತ್ತಿಕೊಂಡಿತ್ತು.
– ಸುಭಾಷ ಶಿಬರೂರ, ರೈತ ಮುಖಂಡ
ರಿಕವರಿ ಆಧಾರದ ಮೇಲೆ ದರ ನಿರ್ಧರಿಸಬಾರದು ಎಂಬುದು ರೈತರ ಆಗ್ರಹವಾಗಿತ್ತು. ಇದಕ್ಕೆ ಕಾರ್ಖಾನೆಯವರೂ ಒಪ್ಪಿದ್ದರು. ಈಗ ಈ ಘಟನೆ ನಡೆದಿದೆ. ಘಟನೆ ಬಗ್ಗೆ ವರದಿ ತರಿಸಿಕೊಂಡು ಕ್ರಮಕೈಗೊಳ್ಳಲಾಗುವುದು.
– ಆರ್.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ
ರೈತರ ಹೆಸರಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು. ಕಬ್ಬು ಸುಡುವ ಕೆಲಸ ರೈತರು ಮಾಡುವುದಿಲ್ಲ. ಹೆಚ್ಚಿನ ಬೆಲೆ ಕೊಡಿಸುವ ಪ್ರಯತ್ನ ಮಾಡಿದ್ದೇವೆ ಹೊರತು ಕಡಿಮೆ ಮಾಡಿಲ್ಲ.