ಗುರುವಾರ , ಮೇ 26, 2022
26 °C

ಕಮತಗಿ ಪ.ಪಂ ಕಾಂಗ್ರೆಸ್ ಪಾಲು, ಅಮೀನಗಡ ಪ.ಪಂ ಅತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ವಶವಾಗಿದೆ. ಅಮೀನಗಡ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದರೂ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಿದೆ.

ಕಮತಗಿ ಪಟ್ಟಣ ಪಂಚಾಯ್ತಿಯ  ಒಟ್ಟು 16 ಸ್ಥಾನಗಳ ಪೈಕಿ 11 ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ ನಾಲ್ಕು ಸ್ಥಾನ ಹಾಗೂ ಪಕ್ಷೇತರರು ಒಬ್ಬರು ಜಯ ಗಳಿಸಿದ್ದಾರೆ.

ಅಮೀನಗಡ ಪಟ್ಟಣ ಪಂಚಾಯ್ತಿಯ 16 ಸ್ಥಾನಗಳ ಪೈಕಿ ಏಳು ಬಿಜೆಪಿ, ನಾಲ್ಕು ಕಾಂಗ್ರೆಸ್ ಹಾಗೂ ಐದು ಸ್ಥಾನ ಪಕ್ಷೇತರರ ಪಾಲಾಗಿವೆ. ಬಹುಮತ ಗಳಿಸಲು ಬಿಜೆಪಿಗೆ ಇನ್ನೂ ಎರಡು ಸ್ಥಾನಗಳ ಅಗತ್ಯವಿದ್ದು, ಪಕ್ಷೇತರರ ಮನವೊಲಿಕೆ ಅನಿವಾರ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು