ಜಮಖಂಡಿ: ‘ಡಿಜಿಟಲ್ ವಂಚನೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಅವಶ್ಯಕತೆ ಇದೆ. ಸಾಕಷ್ಟು ಮುನ್ನೆಚ್ಚರಿಕೆ ನೀಡುತ್ತಿದ್ದರೂ ವಂಚನೆ ಮುಂದುವರಿದಿದೆ. ಸಂಘ–ಸಂಸ್ಥೆಗಳೂ ನಮ್ಮೊಂದಿಗೆ ಕೈಜೋಡಿಸಬೇಕು’ ಎಂದು ಡಿವೈಎಸ್ಪಿ ಎಸ್. ರೋಷನ ಜಮೀರ ಹೇಳಿದರು.

ಇಲ್ಲಿನ ಬಸವ ಭವನದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರದ ಅಂಗವಾಗಿ ಶನಿವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು,

‘ಬ್ಯಾಂಕ್ ಖಾತೆ ಕೆವೈಸಿ ಅಪ್ಡೇಟ್, ಒಟಿಪಿ, ಮೊಬೈಲ್ಫೋನ್ನಲ್ಲಿ ಲಿಂಕ್, ಅನಾಮಿಕ ಕರೆಗಳು, ಬ್ಯಾಂಕ್ ಸಿಬ್ಬಂದಿ ಹೆಸರು ಹೇಳಿ ವಂಚನೆ ಮಾಡಲಾಗುತ್ತಿದೆ. ಇಂತಹ ಕರೆ ಬಂದಾಗ ಗಾಬರಿಯಾಗಬಾರದು. ಬ್ಯಾಂಕಿಗೆ ಖುದ್ದಾಗಿ ಹೋಗಿ ವಿಚಾರಿಸಬೇಕು’ ಎಂದರು.

ಆರ್ಥಿಕ ನೆರವು, ಆರ್ಥಿಕ ಸಾಕ್ಷರತೆ ಬಗ್ಗೆ ಮಾತನಾಡಿದ ರಾಮಕೃಷ್ಣ, ‘ಹೂಡಿಕೆ ವಿಚಾರವಾಗಿ ತಜ್ಞರಿಂದ ಸಲಹೆ–ಸೂಚನೆ ಪಡೆಯಿತಿ. ಒಮ್ಮೆಲೆ ಶ್ರೀಮಂತರಾಗುವ ಕಡೆ ಹೂಡಿಕೆ ಮಾಡಿ ಮೋಸ ಹೋಗಬಾರದು. ಸಾಲ ಮಾಡಿ ಹೂಡಿಕೆ ಮಾಡಬಾರದು’ ಎಂದು ಹೇಳಿದರು.

ಕೆನರಾ ಬ್ಯಾಕಿನ ವಿಠ್ಠಲ ಗುರವ ಮಾತನಾಡಿ, ‘ಯಾವುದೇ ಸಾಲ ಸಿಗಬೇಕಾದರೆ ಸಿವಿಲ್ ಸ್ಕೋರ್ ಪರೀಕ್ಷೆ ಮಾಡಲಾಗುತ್ತದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕು. ಸರಿಯಾದ ವ್ಯವಹಾರ ಮಾಡಿದರೆ ತಮ್ಮ ಜೀವನ ಚೆನ್ನಾಗಿರುತ್ತದೆ’ ಎಂದರು.

ಪ್ರವೀಣಕುಮಾರ, ಓಬಳಸ್ವಾಮಿ, ದೇವಪ್ಪ ಮೊಗಲೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.