ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಬಾಗಲಕೋಟೆ:ಪ್ರವಾಹ ಬಂದಾಗಲಷ್ಟೇ ಸಂತ್ರಸ್ತರ ನೆನಪು; ನದಿ ತೀರದ ಜನರಿಗೆ ತಪ್ಪದ ಗೋಳು

Published : 29 ಜುಲೈ 2024, 4:40 IST
Last Updated : 29 ಜುಲೈ 2024, 4:40 IST
ಫಾಲೋ ಮಾಡಿ
Comments
ಜಮಖಂಡಿ ತಾಲ್ಲೂಕಿನ ಮುತ್ತೂರು ನಡುಗಡ್ಡೆಯಲ್ಲಿ ಮನೆಗಳಿಗೆ ನೀರು  ನುಗ್ಗಿರುವುದು
ಜಮಖಂಡಿ ತಾಲ್ಲೂಕಿನ ಮುತ್ತೂರು ನಡುಗಡ್ಡೆಯಲ್ಲಿ ಮನೆಗಳಿಗೆ ನೀರು  ನುಗ್ಗಿರುವುದು
ಬಹಳ ವರ್ಷಗಳ ಹಿಂದೆ ಮನೆಗಳಿಗೆ ಪರಿಹಾರ ನೀಡಲಾಗಿದೆ. ಆದರೆ ಹಕ್ಕುಪತ್ರಗಳನ್ನು ಕೂಡಲೇ ನೀಡಲಿಲ್ಲ. ಇದರಿಂದಾಗಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ನೀರು ಬಂದರೆ ಏನು ಮಾಡುವುದು?
ನಿಂಗನಗೌಡ ಪಾಟೀಲ ಸಂತ್ರಸ್ತ
ಸಂತ್ರಸ್ತರ ಸಂಕಷ್ಟಗಳಿಗೆ ಮುಕ್ತಿ ಯಾವಾಗ?
ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಅಣೆಕಟ್ಟಿನಲ್ಲಿ 40 ಗ್ರಾಮ ಆಲಮಟ್ಟಿ ಅಣೆಕಟ್ಟಿನಲ್ಲಿ 136 ಗ್ರಾಮಗಳು ಮುಳುಗಡೆಯಾಗಿವೆ. ಮೂರನೇ ಹಂತದಲ್ಲಿ 20 ಗ್ರಾಮಗಳು ಮುಳುಗಡೆಯಾಗುತ್ತಿವೆ. ಇಲ್ಲಿಯವರೆಗೆ 4.06 ಲಕ್ಷ ಎಕರೆ ಭೂಸ್ವಾಧೀನ 104404 ಕಟ್ಟಡಗಳ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬಾಧಿತವಾಗಿವೆ. ಹತ್ತಾರು ವರ್ಷಗಳ ಹಿಂದೆಯೇ ಮುಳುಗಡೆಯಾದರೂ ಜನರಿಗೆ ಹಕ್ಕುಪತ್ರಗಳು ಲಭಿಸಿಲ್ಲ. ಕಲಾದಗಿ ಗ್ರಾಮದ ಜನರು ಹತ್ತಾರು ವರ್ಷಗಳಿಂದ ಹಕ್ಕುಪತ್ರಗಳಿಗಾಗಿ ಅಲೆದಾಡುತ್ತಿದ್ದಾರೆ. 2019ರಲ್ಲಿ ಪ್ರವಾಹ ಬಂದಾಗ ಕಲಾದಗಿ ಅರ್ಧ ಗ್ರಾಮ ನೀರಿನೊಳಗೆ ಮುಳುಗಡೆಯಾಗಿತ್ತು. ಸರಿಯಾಗಿ ಅವರನ್ನು ಸ್ಥಳಾಂತರ ಮಾಡಿದ್ದರೆ ಅವರು ಸಂಕಷ್ಟ ಎದುರಿಸಬೇಕಾಗಿ ಬರುತ್ತಿರಲಿಲ್ಲ. ಹಲವಾರು ಕಡೆಗಳಲ್ಲಿ ಪುನರ್‌ವಸತಿ ಗ್ರಾಮಗಳನ್ನು ನಿರ್ಮಿಸಲಾಗಿದೆ. ಆದರೆ ವಿವಿಧ ಕಾರಣಗಳಿಗಾಗಿ ಜನರು ಅಲ್ಲಿಗೆ ಸ್ಥಳಾಂತರಗೊಂಡಿಲ್ಲ ಈ ಬಗ್ಗೆ ಅಧಿಕಾರಿಗಳೂ ತಲೆಕೆಡಿಸಿಕೊಂಡಿಲ್ಲ. ಜನರು ಸ್ಥಳಾಂತರಗೊಳ್ಳದ್ದರಿಂದ ಅಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನ ಪ್ರಾಥಮಿಕ ಪಶುಚಿಕಿತ್ಸಾಲಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಂಗನವಾಡಿ ಶಾಲಾ ಕಟ್ಟಡಗಳು ಪಾಳು ಬಿದ್ದಿವೆ. ಅವುಗಳಿಗೆ ಅಳವಡಿಸಲಾಗಿದ್ದ ಕಿಟಕಿ ಬಾಗಿಲು ಕಿತ್ತು ಹೋಗಿವೆ.
ಒತ್ತುವರಿ ತೆರವಿಗೆ ಬೇಕಿದೆ ಇಚ್ಛಾಶಕ್ತಿ
ಜಿಲ್ಲೆಯಲ್ಲಿ ಹರಿಯುವ ಮಲಪ್ರಭಾ ಘಟಪ್ರಭಾ ನದಿಗಳ ಪಾತ್ರ ಒತ್ತುವರಿ ಮಾಡಿರುವುದು ಸರ್ವೆಯಲ್ಲಿ ಬಯಲಾಗಿದೆ. ಒತ್ತುವರಿ ಪರಿಣಾಮ ನದಿಗಳು ಹರಿಯುವ ಮಾರ್ಗವನ್ನೇ ಬದಲಾಯಿಸಿಕೊಂಡು ಹೊಲ ಗ್ರಾಂಗಳಿಗೆ ನುಗ್ಗುತ್ತದೆ. ಮಲಪ್ರಭಾ ನದಿ ಹರಿಯುವ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಭೂ ದಾಖಲೆಗಳ ಇಲಾಖೆಯು ಸರ್ವೆ ಮಾಡಿದ್ದು 424 ಎಕರೆಯಷ್ಟು ನದಿ ಪ್ರದೇಶ ಒತ್ತುವರಿಯಾಗಿದೆ. ಘಟಪ್ರಭಾ ನದಿ ಒತ್ತುವರಿಯಾಗಿರುವ ಎರಡು ತಾಲ್ಲೂಕುಗಳಲ್ಲಿ ಸರ್ವೆ ಮಾಡಲಾಗಿದ್ದು 62 ಎಕರೆ ಒತ್ತುವರಿಯಾಗಿದೆ. ಕೆಲವು ಕಡೆಗಳಲ್ಲಿ ಒತ್ತುವರಿಯಿಂದಾಗಿ ನದಿಯು ಹಳ್ಳವಾದಂತಾಗಿವೆ. ಪ್ರವಾಹ: ನದಿಗಳ ಒತ್ತುವರಿಯಿಂದಾಗಿ ಆಗಾಗ ನದಿಗಳು ಆಗಾಗ ಉಕ್ಕಿ ಹರಿದು ಗ್ರಾಮಗಳಿಗೆ ನುಗ್ಗಲಾರಂಭಿಸಿವೆ. 2009 ಹಾಗೂ 2019ರಲ್ಲಿ ಪ್ರವಾಹ ಉಂಟಾದಾಗ ಮಲಪ್ರಭಾ ನದಿಯು 63 ಗ್ರಾಮಗಳಿಗೆ ಹಾಗೆಯೇ ಘಟಪ್ರಭಾ ನದಿಯು 69 ಗ್ರಾಮಗಳಿಗೆ ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿದ್ದವು. ಪ್ರವಾಹ ಬಂದಾಗ ಒತ್ತುವರಿ ತೆರವಿನ ಮಾತುಗಳು ಕೇಳಿ ಬರುತ್ತವೆ. ನಂತರದಲ್ಲಿ ಯಾರೂ ಗಮನ ಹರಿಸುವುದಿಲ್ಲ.
ಸ್ಥಳಾಂತರಕ್ಕೆ ಹಿಂದೇಟು
ಪ್ರವಾಹ ಬಂದಾಗ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಬಂದಾಗ ಜನರು ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಾರೆ. ಹಿಂದಿನ ವರ್ಷಗಳಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಹಾಗಾಗಿ ಸ್ಥಳಾಂತರಗೊಳ್ಳುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಸುರಕ್ಷಿತ ಸ್ಥಳಗಳಿಗೆ ಕಳುಹಿಸದೇ ಅನಾಹುತವಾದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ ನಂತರ ಈಡೇರಿಕೆಗೆ ಮುಂದಾಗುವುದಿಲ್ಲ.  ಮನೆಯಲ್ಲಿ ಸಾಮಾನುಗಳನ್ನು ತರಬಹುದಾದರೂ ಜಾನುವಾರುಗಳ ಸ್ಥಳಾಂತರ ಸರಳವಲ್ಲ. ಜೊತೆಗೆ ಅವುಗಳನ್ನು ಕಟ್ಟಲು ಜಾಗದ ತೊಂದರೆ ಮೇವಿನ ಕೊರತೆ ಎದುರಾಗುತ್ತದೆ. ಶಾಶ್ವತ ಪರಿಹಾರ ಕಲ್ಪಿಸಿದರೆ ಮಾತ್ರ ಸ್ಥಳಾಂತರಗೊಳ್ಳುವುದಾಗಿ ಜನರು ಪಟ್ಟು ಹಿಡಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT