ರಬಕವಿ ಬನಹಟ್ಟಿ: ಸಮೀಪದ ಹಿಪ್ಪರಗಿ ಬ್ಯಾರೇಜ್ಗೆ ಬುಧವಾರ ಸಂಜೆ 1 ಲಕ್ಷ 26 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಇದ್ದು, ಇದು ಗುರುವಾರ ಬೆಳಿಗ್ಗೆ 1ಲಕ್ಷ 80 ಸಾವಿರದಷ್ಟು ಹೆಚ್ಚಿಗೆ ಆಗಲಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಜಲಾನಯನ ಪ್ರದೇಶಗಳಾದ ಕೊಯ್ನಾ: 27 ಸೆಂ.ಮೀ, ನವುಜಾ 38 ಸೆಂ.ಮೀ ಮತ್ತು ಮಹಾಬಳೇಶ್ವರದಲ್ಲಿ 30 ಸೆಂ.ಮೀ ದಷ್ಟು ಮಳೆಯಾದ ವರದಿಯಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ 1,41,500 ಕ್ಯೂಸೆಕ್ ಮತ್ತು ದೂಧ ಗಂಗಾ ನದಿಯಿಂದ 39,504 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗಡಿ ಭಾಗದ ಕಲ್ಲೊಳ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ ಒಟ್ಟು 1,81,004 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಬುಧವಾರ 33,074 ಕ್ಯೂಸೆಕ್ದಷ್ಟು ಹೆಚ್ಚಿಗೆ ನೀರು ಹರಿದು ಬರುತ್ತಿದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.