ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುನಗುಂದ: ಶುದ್ಧ ಕುಡಿಯುವ ನೀರಿಗಾಗಿ ಪರದಾಟ

Published 18 ಮಾರ್ಚ್ 2024, 4:24 IST
Last Updated 18 ಮಾರ್ಚ್ 2024, 4:24 IST
ಅಕ್ಷರ ಗಾತ್ರ

ಹುನಗುಂದ: ಪಟ್ಟಣದ ಜನರ ನೀರಿನ ದಾಹ ತೀರಿಸಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲ ವರ್ಷಗಳಿಂದ ದುರಸ್ತಿ ಆಗಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಮೊತ್ತದ ಯಂತ್ರೋಪಕರಣಗಳು ದೂಳು ಹಿಡಿದಿವೆ.

ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ಏಳು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ ಮೂರು ಘಟಕಗಳು ಬಂದ್ ಆಗಿವೆ.  ಪಟ್ಟಣದ ನೀಲಗಂಗಮ್ಮ ದೇವಸ್ಥಾನದ ಹತ್ತಿರ, ಅಂಚೆ ಕಚೇರಿ ಹತ್ತಿರ ಇರುವ 2014-15ನೇ ಸಾಲಿನಲ್ಲಿ ನಿರ್ಮಾಣವಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿ ಕಾಣದೆ ಸ್ಥಗಿತವಾಗಿವೆ.

ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿರುವ ವಿಷಯ ಅಧಿಕಾರಿಗಳಿಗೆ ಗೊತ್ತಿದ್ದರೂ ದುರಸ್ತಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂಬುದು ನಿವಾಸಿಗಳ ಆರೋಪ.

2016-17ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಬಸ್ ನಿಲ್ದಾಣ ಸಮೀಪದ ಕಾಯಿಪಲ್ಲೆ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕೆಲ ದಿನಗಳು ಮಾತ್ರ ನೀರು ಪೂರೈಸಲಾಯಿತು. ನಂತರ ಸ್ಥಗಿತಗೊಂಡ ಘಟಕ ಈವರೆಗೆ ಆರಂಭಗೊಂಡಿಲ್ಲ. ಇದರಿಂದ ಸುತ್ತಲಿನ ನಿವಾಸಿಗಳು, ಹೋಟೆಲ್ ಹಾಗೂ ಇನ್ನಿರ ವ್ಯಾಪಾರಿಗಳು ನೀರಿಗಾಗಿ ದೂರದಲ್ಲಿರುವ ನೀರಿನ ಘಟಕಗಳಿಗೆ ಹೋಗಬೇಕಿದೆ.

ಈ ಘಟಕದ ಆವರಣ ಬಯಲು ಶೌಚಾಲಯಕ್ಕೆ ಬಳಕೆಯಾಗುತ್ತಿದ್ದು, ಹಂದಿಗಳ ಆವಾಸ ತಾಣವಾಗಿದೆ. ನಿರ್ವಹಣೆ ಗುತ್ತಿಗೆ ಪಡೆದ ಏಜೆನ್ಸಿಯವರು ಇತ್ತ ಗಮನ ಹರಿಸಿಲ್ಲ.

ಸಾರ್ವಜನಿಕರು ಒಂದು ಕೊಡ ನೀರಿಗಾಗಿ ಬೆಳಿಗ್ಗೆಯೇ ಇತರೆ ನೀರಿನ ಘಟಕಗಳ‌ ಮುಂದೆ ಸಾಲುಗಟ್ಟಿ ನಿಂತು, ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.

ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ದುರಸ್ತಿ ಕಾರ್ಯ ಮಾಡಲಾಗುವುದು
- ವಿ.ಎಸ್. ಕೊಟಗಿ ಕಿರಿಯ ಎಂಜಿನಿಯರ್ ಪುರಸಭೆ ಹುನಗುಂದ
ಉದ್ಯೋಗಸ್ಥರು ನೀರಿಗಾಗಿ ಗಂಟೆ ಗಟ್ಟಲೆ ಕಾಯಬೇಕಿದ್ದು ತೀವ್ರ ತೊಂದರೆಯಾಗಿದೆ. ಸ್ಥಗಿತಗೊಂಡ ನೀರಿನ ಘಟಕಗಳನ್ನು ಕೂಡಲೇ ದುರಸ್ತಿ ಮಾಡಬೇಕು
- ಮಹಾಂತೇಶ ಪಟ್ಟಣದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT