ಬೀಳಗಿ: ‘ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಲು, ದೈನಂದಿನ ಜೀವನದಲ್ಲಿ ವ್ಯವಹರಿಸಲು ಸಾಕ್ಷರರಾಗುವುದು ಅವಶ್ಯ’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್.ಎಂ. ಮಕಾನದಾರ ಹೇಳಿದರು.

ತಾಲ್ಲೂಕಿನ ಅರಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಲೋಕ ಶಿಕ್ಷಣ ವಿಭಾಗ), ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯದ ಆಶ್ರಯದಲ್ಲಿ ನಡೆದ ಕಲಿಕಾ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಮಕ್ಕಳು ಹಾಗೂ ವಯಸ್ಕರಿಗೆ ಶಿಕ್ಷಣ ಕೊಡಿಸುವಾಗ ಲಿಂಗ ಭೇದ ಮಡಬಾರದು. ಸಾಕ್ಷರತೆ ಸ್ವಾತಂತ್ರ್ಯದ ಅಡಿಪಾಯವಾಗಿದೆ’ ಎಂದು ಹೇಳಿದರು.

2024–25ನೇ ಸಾಲಿನಲ್ಲಿ ಅರಕೇರಿ, ಕಂದಗಲ್ಲ, ಬಾಡಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕ್ಷರತಾ ಕಾರ್ಯಕ್ರಮ ಅಡಿ ಸ್ವಯಂ ಸೇವಕ ಬೋಧಕರ ತರಬೇತಿ ನೀಡಲಾಯಿತು. ಅವರಿಗೆ ಬೋಧನಾ ಉಪಕರಣ ವಿತರಿಸಲಾಯಿತು.

ಡಿ.ಎಂ. ಸಾವಕಾರ ಮಾತನಾಡಿದರು. ಸಾಕ್ಷರತಾ ಸಹಾಯಕ ನೋಡಲ್ ಬಿಆರ್ಪಿ ನಾನಾಗೌಡ ಪಾಟೀಲ, ಸಿಆರ್ಪಿಗಳಾದ ಮಹೇಶ ತೋಟದ, ಆರ್.ಜಿ. ಕುಚನೂರ ತರಬೇತಿ ನೀಡಿದರು.

ಎಸ್ಡಿಎಂಸಿ ಅಧ್ಯಕ್ಷ ವಿಠ್ಠಲ ಭೂಷಣ್ಣವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಕವ್ವ ಕಮ್ಮನ್ನವರ, ಮುಖ್ಯಶಿಕ್ಷಕ ಬಿ.ಎಸ್. ಭೂಷಣ್ಣವರ, ಪರಶು ಮಲ್ಲಾರ, ಎಸ್.ಎಸ್. ಹಿರೇಮಠ, ಬಿ.ಎಂ. ಮನಗೂಳಿ ಇದ್ದರು.

‘ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿ’ ‘ಸಮಸ್ಯೆಗಳನ್ನು ಪರಿಹರಿಸಲು ಪ್ರತಿಯೊಬ್ಬರೂ ಸಾಕ್ಷರಾಗುವುದು ಅವಶ್ಯ. ಎಲ್ಲ ದಾನಗಳಿಗಿಂತ ವಿದ್ಯಾದಾನ ಶ್ರೇಷ್ಠ. ಇದು ಪುಣ್ಯದ ಕೆಲಸವೆಂದು ತಿಳಿಯಬೇಕು. ಕಾರ್ಯಕ್ರಮ ಯಶಸ್ಸಿಗೆ ಬೋಧಕರ ಪಾತ್ರ ಮಹತ್ವದ್ದಾಗಿದೆ’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ ಹೇಳಿದರು. ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಹಾಯಕ ಬಸವರಾಜ ಹರವಿ ಮಾತನಾಡಿ ‘ಅನಕ್ಷರಸ್ಥರನ್ನು ಅಕ್ಷರಸ್ಥರಾಗಿ ಮಾಡುವುದನ್ನು ಸವಾಲಾಗಿ ಸ್ವೀಕರಿಸಬೇಕು. ಕಲಿಕಾ ಕೇಂದ್ರಕ್ಕೆ ಕರೆ ತಂದು ಜಾಗೃತಿ ಮೂಡಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.