ಕಂದಾಯ ಸಚಿವ ಕೃಷ್ಣ ಭೈರೇಗೌಡ ನೀಡಿದ ಹೇಳಿಕೆಯನ್ನು ಖಂಡಿಸಿ ಮಹಾಲಿಂಗಪುರದ ಚನ್ನಮ್ಮ ವೃತ್ತದಲ್ಲಿ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಗಂಗಾಧರ ಮೇಟಿ ಮಾತನಾಡಿದರು
ಪರಿಶೀಲನೆಗೆ ಒತ್ತಾಯ
‘ಜಿಲ್ಲಾಧಿಕಾರಿ ಪ್ರಸ್ತಾವ ಶಾಸಕ ಉಸ್ತುವಾರಿ ಸಚಿವರ ಒಪ್ಪಿಗೆ ಪತ್ರಗಳಿಗೆ ಕಂದಾಯ ಸಚಿವರು ಆದ್ಯತೆ ನೀಡಬೇಕು. ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ನೇತೃತ್ವದಲ್ಲಿ ಹೋರಾಟ ಸಮಿತಿ ಶಾಸಕರು ಒಳಗೊಂಡಂತೆ ಸಭೆ ಕರೆದು ವರದಿಯನ್ನು ಎಲ್ಲರ ಸಮಕ್ಷಮ ಪರಿಶೀಲಿಸಿ ಅದನ್ನು ವಿಲೇಗೆ ಹಾಕದೆ ಪರಿಶೀಲನೆಗೆ ಇಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ರಸ್ತೆ ಸಂಚಾರ ತಡೆದಿದ್ದರಿಂದ ಪ್ರತಿಭಟನಕಾರರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ಸಿಪಿಐ ಸಂಜೀವ ಬಳೆಗಾರ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.