ಮುಧೋಳ: ಗೋದಾವರಿ ಸಕ್ಕರೆ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿದ ವೇಳೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಸೇರಿದಂತೆ, ಹಲವು ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರಿಗೆ ಗಾಯವಾಗುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಪ್ಪ ಉಳ್ಳಾಗಡ್ಡಿ ಸೇರಿದಂತೆ 8 ಜನರನ್ನು ದಸ್ತಗೀರ ಮಾಡಿದ್ದನ್ನು ಖಂಡಿಸಿ ಸೋಮವಾರ ಕರ್ನಾಟಕ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಅವರ ನೇತೃತ್ವದಲ್ಲಿ ನಗರದ ಜಿ.ಎಲ್.ಬಿ.ಸಿ ಆವರಣದಲ್ಲಿ ಸಭೆ ನಡೆಸಿದರು.

ಬಸವಂತ ಕಾಂಬಳೆ ಮಾತನಾಡಿ, ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ,ತಿಮ್ಮಾಪುರ ಅವರೊಂದಿಗೆ ಸಭೆ ಮಾಡಿದ್ದೇವೆ. ಸಭೆಯಲ್ಲಿ ಯಾರನ್ನೂ ಬಂಧಿಸಬಾರದು ಎಂದು ಮನವಿ ಮಾಡಲಾಗಿದೆ. ಬಂಧಿಸದಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ’ ಎಂದರು.

‘ಈ ಬಗ್ಗೆ ಯಾವುದೇ ರೈತರು ಭಯಗೊಳ್ಳಬಾರದು. ಪೊಲೀಸರು ಬಂಧನಕ್ಕೆ ಬಂದರೆ ರೈತ ಮುಖಂಡರನ್ನು ಸಂಪರ್ಕಿಸಬೇಕು ಈಗಾಗಲೇ 9 ಜನರನ್ನು ಬಂಧಿಸಿದ್ದು, ಈ ಬಗ್ಗೆ ಅಸಮಾಧಾನವಾಗಿದೆ’ ಎಂದರು.

‘ಕಾನೂನನ್ನು ನಾವು ಗೌರವಿಸುತ್ತೆವೆ ಅದಕ್ಕೆ ನಾವು ಎಲ್ಲಾ ಬಂಧಿತರನ್ನು ಜಾಮೀನು ಮೇಲೆ ತರುವ ಜವಾಬ್ದಾರಿ ನಮ್ಮದು. ಬಂಧಿತರ ಮನೆಯವರು ಅವರ ಆಧಾರ್ ಕಾರ್ಡ್ ಹಾಗೂ ಕಾಗದ ಪತ್ರಗಳನ್ನು ತಂದು ಕೊಡಬೇಕು. ಈ ಬಗ್ಗೆ 4– 5 ಜನ ವಕೀಲರು ಉಚಿತವಾಗಿ ನಮ್ಮ ಪ್ರಕರಣ ನಡೆಸುತ್ತಾರೆ. ಇನ್ನು ಮೇಲೆ ಯಾರನ್ನಾದರೂ ಬಂಧಿಸಿದರೆ ಜೈಲೋ ಬರೊ ಚಳವಳಿ ಮಾಡುವುದು ಅನಿವಾರ್ಯ ಎಂದು ಹೇಳಿದರು.

ದುಂಡಪ್ಪ ಯರಗಟ್ಟಿ, ಹನಮಂತ ನಬಾಬ, ಸುರೇಶ ಚಿಂಚಲಿ, ಸುಭಾಷ ಶಿರಬೂರ, ಮಹೇಶಗೌಡ ಪಾಟೀಲ, ಹನಮಂತಗೌಡ ಪಾಟೀಲ, ಮುತ್ತಪ್ಪ ಕೊಮ್ಮಾರ, ಈರಪ್ಪ ಹಂಚಿನಾಳ, ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.