ಬಾಗಲಕೋಟೆ: ಕನ್ನಡ ನಾಡಿನ ಅಕ್ಷರ ಚರಿತ್ರೆ ಸಾರುವಲ್ಲಿ, ಕನ್ನಡ ಸಾಹಿತ್ಯ ಪರಂಪರೆಯ ಅರಿವಿಗೆ ಹಳಗನ್ನಡ ಸಾಹಿತ್ಯ ಅಧ್ಯಯನ ಮುಖ್ಯವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಿ.ವಿ. ಪರಮಶಿವಮೂರ್ತಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಒಕ್ಕೂಟ ಹಾಗೂ ಕಸಾಪ ತಾಲ್ಲೂಕು ಘಟಕದ ಸಹಯೋಗದಲ್ಲಿ ಡಿ.ಎಲ್. ನರಸಿಂಹಚಾಚಾರ್ಯ ದತ್ತಿನಿಧಿಯಡಿ ಸೋಮವಾರ ನಡೆದ ನಾಲ್ಕು ದಿನಗಳ ಕಾಲ ‘ಹಳಗನ್ನಡ ಸಾಹಿತ್ಯ ಬೋಧನಾ ತರಬೇತಿ ಶಿಬಿರ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡದ ಶ್ರೇಷ್ಠ ವಿದ್ವಾಂಸರಾಗಿದ್ದ ಡಿ.ಎಲ್. ನರಸಿಂಹಾಚಾರ್ ಅವರ ವ್ಯಾಸಂಗದ ಬಹುಮುಖ್ಯ ನೆಲೆ ಹಳಗನ್ನಡ ಸಾಹಿತ್ಯ. ಆ ಕ್ಷೇತ್ರದಲ್ಲಿ ಅವರದ್ದೇ ಆದ ಹೆಜ್ಜೆ ಗುರುತುಗಳಿವೆ. ಯಾವುದೇ ಭಾಷೆಯ ಸಾಹಿತ್ಯ ಸಾಮಾಜೀಕರಣಗೊಂಡರೆ ಮಾತ್ರ ಗತಿಶೀಲ ಗುಣ ಹಾಗೂ ಹೊಸ ಹೊಳವು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಶಿಬಿರ ಉದ್ಘಾಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಮಾತನಾಡಿ, ಜಗತ್ತಿನ ಶ್ರೇಷ್ಠ ಭಾಷೆ ಕನ್ನಡವಾಗಿದ್ದು, ಕನ್ನಡ ಬಳಸಿ, ಉಳಿಸಿ ಬೆಳಸಬೇಕು ಎಂದರು.

ಇಂದಿನ ಜನಸಾಮನ್ಯರಿಗೆ ಹಳಗನ್ನಡದ ಅರಿವು ಮುಖ್ಯ, ಶಿಬಿರದ ಸದುಪಯೋಗವನ್ನು ಉಪನ್ಯಾಸಕರು ಪಡೆದುಕೊಂಡು, ವಿದ್ಯಾರ್ಥಿಗಳಲ್ಲಿ ಹಳಗನ್ನಡದ ಅಭಿರುಚಿ ಬೆಳೆಸಬೇಕು ಎಂದು ಹೇಳಿದರು.

ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಕೆ.ಆರ್. ದುರ್ಗದಾಸ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಹಳಗನ್ನಡ ಸಾಹಿತ್ಯ ತರಬೇತಿ ಶಿಬಿರ ಅತ್ಯವಶ್ಯಕವಾಗಿದೆ. ಹಳಗನ್ನಡ ಕಬ್ಬಿಣದ ಕಡಲೆಯಲ್ಲ, ಅದು ಪಠಿಸಿದಷ್ಟು ಸರಳವಾಗುತ್ತದೆ ಎಂದರು.

ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಗಾಳಿ ಮಾತನಾಡಿ, ಕುಮಾರವ್ಯಾಸನ ಕಾವ್ಯವನ್ನು ಹೇಳುವುದರೊಂದಿಗೆ ಹಳಗನ್ನಡ ಕಾವ್ಯದ ಗಟ್ಟಿತನವನ್ನು ನಾವೆಲ್ಲರೂ ಅರಿತು ಉಳಿಸಿಕೊಳ್ಳಬೇಕಾಗಿದೆ ಎಂದರು

ಕನ್ನಡ ವಿವಿ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ಧರಾಮ ಖಾನಾಪುರ, ಸ್ಥಳೀಯ ಸಂಚಾಲಕ ಚಂದ್ರಶೇಖರ ಕಾಳನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.