ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬಕವಿ ಬನಹಟ್ಟಿ | ರಾಮಪುರದಲ್ಲಿ ಸಂಭ್ರಮದ ರಾಮನವಮಿ

Published 17 ಏಪ್ರಿಲ್ 2024, 15:16 IST
Last Updated 17 ಏಪ್ರಿಲ್ 2024, 15:16 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಸಮೀಪದ ರಾಮಪುರದ ರಾಮ ಮಂದಿರದಲ್ಲಿ ಬುಧವಾರ ಸಡಗರದಿಂದ ರಾಮನವಮಿಯನ್ನು ಆಚರಿಸಲಾಯಿತು.

ರಾಮ ನವಮಿ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನರ ಮೂರ್ತಿಗಳಿಗೆ ಮಾಡಿದ ಹೂವಿನ ಶೃಂಗಾರ ಭಕ್ತರ ಗಮನ ಸೆಳೆಯಿತು.

ಬೆಳಿಗ್ಗೆ ಮಂದಿರದಲ್ಲಿ ಮಹಿಳೆಯರು ರಾಮರ ತೊಟ್ಟಿಲೋತ್ಸವವನ್ನು ನೆರವೇರಿಸಿದರು.

ಪರಶುರಾಮ ನಾಯ್ಕರ, ವಿವೇಕಾನಂದ ಭಸ್ಮೆ, ಪ್ರಕಾಶ ಸಿಂಗನ, ಅಜಿತ ಖಟಾವಕರ, ರವಿ ಭಸ್ಮೆ, ಗುರುನಾಥ ಬಕರೆ, ಬಾಲಕೃಷ್ಣ ಭಸ್ಮೆ, ಮಲ್ಲೇಶ ಹೊಸಮನಿ ಇದ್ದರು.

ರಬಕವಿ ಬನಹಟ್ಟಿ ಸಮೀಪದ ರಾಮಪುರದ ರಾಮ ಮಂದಿರದಲ್ಲಿ ಶ್ರೀರಾಮ ಸೀತೆ ಲಕ್ಷ್ಮಣ ಮತ್ತು ಹನುಮಾನರ ವಿಗ್ರಹಗಳಿಗೆ ವಿಶೇಷ ಪೂಜೆ ಮಾಡಲಾಗಿತ್ತು
ರಬಕವಿ ಬನಹಟ್ಟಿ ಸಮೀಪದ ರಾಮಪುರದ ರಾಮ ಮಂದಿರದಲ್ಲಿ ಶ್ರೀರಾಮ ಸೀತೆ ಲಕ್ಷ್ಮಣ ಮತ್ತು ಹನುಮಾನರ ವಿಗ್ರಹಗಳಿಗೆ ವಿಶೇಷ ಪೂಜೆ ಮಾಡಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT