ತೇರದಾಳ: ಇಲ್ಲಿನ ಹಿಡಕಲ್ ರಸ್ತೆಯ ಬಳಿ ಹಲವು ದಿನಗಳಿಂದ ಸಂಗ್ರಹವಾಗಿ ವಾಸನೆ ಹರಡಿದ್ದ ತ್ಯಾಜ್ಯವನ್ನು ತೇರದಾಳ ಪುರಸಭೆ ಪೌರಕಾರ್ಮಿಕರು ಜೆಸಿಬಿ ಯಂತ್ರದ ಸಹಾಯದಿಂದ ಬುಧವಾರ ವಿಲೇವಾರಿ ಮಾಡಿ ಸ್ವಚ್ಛಗೊಳಿಸಿದರು.

ತಾಲ್ಲೂಕಿನ ಸಸಾಲಟ್ಟಿ ಗ್ರಾಮ ಪಂಚಾಯಿತಿಯ ಗಡಿ ಇಲ್ಲಿಯವರೆಗೆ ವಿಸ್ತರಿಸಿದ್ದರಿಂದ ಅಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಯಾರು ವಿಲೇವಾರಿ ಮಾಡಬಹುದೆಂಬ ಸಾರ್ವಜನಿಕರ ಪ್ರಶ್ನೆಗೆ ತೆರೆ ಎಳೆಯಲಾಯಿತು. ಈ ರಸ್ತೆ ಮೂಲಕ ಸಂಚರಿಸುತ್ತಿದ್ದ ವಿದ್ಯಾರ್ಥಿಗಳು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಈ ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭದಲ್ಲಿಯೇ ಅದರ ಸುತ್ತಲೂ ಇರುವ ರಸ್ತೆ ಬದಿಗಳನ್ನು ಕೂಡ ಪೌರಕಾರ್ಮಿಕರು ಸ್ವಚ್ಛಗೊಳಿಸಿದರು.

‘ತ್ಯಾಜ್ಯ: ಗ್ರಾ.ಪಂ, ಪುರಸಭೆ ಕಿತ್ತಾಟ’ ಎಂಬ ತಲೆಬರಹದ ಅಡಿ ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಇರ್ಫಾನ್ ಝಾರೆ ನಸುಕಿನ ಜಾವವೇ ಪೌರಕಾರ್ಮಿಕರು, ಜೆಸಿಬಿ ಯಂತ್ರ ಹಾಗೂ ಟ್ರ್ಯಾಕ್ರ್ಗಳ ಜೊತೆ ಸ್ಥಳಕ್ಕೆ ಬಂದು ಕಸ ವಿಲೇವಾರಿಗೆ ಕ್ರಮ ಕೈಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.