ಪ್ರಜಾವಾಣಿ ವಾರ್ತೆ

ಹೊಸಪೇಟೆ(ವಿಜಯನಗರ): ದಾವಣಗೆರೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಹೊಸಪೇಟೆಯ ವಿಕಾಸ ಬ್ಯಾಂಕ್ನಲ್ಲಿ ವಿಲೀನವಾಗಲು ಬ್ಯಾಂಕಿನ 33ನೇ ಮಹಾಜನಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ.ಎಸ್.ಮಹೇಶ್ವರಪ್ಪ ತಿಳಿಸಿದ್ದಾರೆ ಎಂದು ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.

ಶ್ರೀಸದ್ಯೋಜಾತ ಶಿವಾಚಾರ್ಯ ನಿಕೇತನ ಹಿರೇಮಠ, ಎಂ.ಸಿ.ಸಿ. ಬಿ-ಬ್ಲಾಕ್, ದಾವಣಗೆರೆಯಲ್ಲಿ ಭಾನುವಾರ ಜರುಗಿದ 33ನೇ ವಾರ್ಷಿಕ ಮಹಾಸಭೆಯ ನಂತರ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ ಎಂದು ಸೋಮವಾರ ಹೇಳಿಕೆ ನೀಡಿದ ಅವರು, ಕಳೆದ 30 ವರ್ಷಗಳಿಂದ ಹೊಸಪೇಟೆಯಲ್ಲಿ ಕಾರ್ಯನಿರ್ವಹಿಸುವ ವಿಕಾಸ ಬ್ಯಾಂಕ್ ಸದ್ಯ 18 ಶಾಖೆಗಳನ್ನು ಹೊಂದಿ ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದೆ.

ವರ್ಷದ ಹಿಂದೆ ದಾವಣಗೆರೆ ಶಾಖೆಯನ್ನು ಆರಂಭಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಿರುವ ಹಾಗೂ 33ವರ್ಷಗಳಿಂದ ಗ್ರಾಹಕರ ಪ್ರೀತಿ, ವಿಶ್ವಾಸಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಯಂತೆ ಶಿಸ್ತು ಬದ್ಧವಾಗಿ ಹಾಗೂ ಸದಸ್ಯರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಆಡಳಿತ ಮಂಡಳಿಯ ವಿಲೀನ ಪ್ರಸ್ತಾವನೆಯನ್ನು ಸರ್ವ ಸದಸ್ಯರ ಮಹಾಜನ ಸಭೆ ಒಪ್ಪಿಕೊಂಡು ಸರ್ವಾನುಮತದ ಅನುಮೋದನೆ ನೀಡಿದೆ ಎಂದರು.

ಪ್ರಸ್ತಾವನೆಯ ಜೊತೆ ಮಹಾಸಭೆಯು ಸದಸ್ಯರಿಗೆ ಸದ್ಯದ ಆರ್ಥಿಕ ವರ್ಷದಲ್ಲಿ ಶೇ 5 ರಷ್ಟು ಲಾಭಾಂಶ ನೀಡಲು ಆಡಳಿತ ಮಂಡಳಿಯವರು ಇಟ್ಟಿರುವ ಪ್ರಸ್ತಾವವನ್ನು ಸಭೆಯು ಪರಿಶೀಲಿಸಿ ತನ್ನ ಒಪ್ಪಿಗೆಯನ್ನು ನೀಡಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.