ಕಂಪ್ಲಿ: ಪಟ್ಟಣ ಸೇರಿದಂತೆ ತಾಲ್ಲೂಕಿನ 120 ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಶನಿವಾರ ನಡೆಯಲಿದೆ.
ಪಟ್ಟಣದ ಚಿತ್ರಗಾರ ಸಮುದಾಯದವರು ಈಗಾಗಲೇ ವೈವಿದ್ಯಮಯ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು, ಮಾರಾಟ ಶುಕ್ರವಾರ ಜೋರಾಗಿತ್ತು.
ವಿವಿಧ ಆಕಾರದ ಚಿಕ್ಕ ಗಣೇಶ ಮೂರ್ತಿಗಳು ₹150ರಿಂದ ₹300, 2ರಿಂದ 3ಅಡಿ ಗಣೇಶ ಮೂರ್ತಿ ₹1,500ರಿಂದ ₹2,000ರೂ, ದೊಡ್ಡ ಗಾತ್ರದ ಗಣೇಶ ಮೂರ್ತಿ ₹5,000ದಿಂದ ₹8,000 ವರೆಗೆ ಮಾರಾಟವಾಗುತ್ತಿದ್ದವು.
ಪಟ್ಟಣದ ಗ್ರಾಮದೇವತೆ ಮಾರೆಮ್ಮ ದೇವಸ್ಥಾನ, ಪುರಸಭೆ, ನಡುಲ ಮಸೀದಿ ಬಳಿ ರಸ್ತೆ ಪಕ್ಕದಲ್ಲಿ ಹಣ್ಣು, ಬಾಳೆ ಕಂಬ, ಬಾಳೆ ಎಲೆ, ವಿವಿಧ ಬಗೆಯ ಹೂವುಗಳು, ಹಣ್ಣುಗಳ ಮಾರಾಟ ದರದಲ್ಲಿ ಏರಿಕೆ ಕಂಡಿದ್ದರೂ ವಿಕ್ರಯ ವೇಗವಾಗಿತ್ತು.