



ಪಟ್ಟಣದ ಹೃದಯ ಭಾಗದ ಪುರಸಭೆಗೆ ಸೇರಿದ ಹಳೆ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ₹ 2ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಿನಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಸದ್ಯ ಹಳೆ ಬಸ್ ನಿಲ್ದಾಣದ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿ ಮುಕ್ತಾಯದ ಬಳಿಕ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.ಜೆ.ಎನ್. ಗಣೇಶ್ ಕಂಪ್ಲಿ ಶಾಸಕ
ಈಗಾಗಲೇ ಪಟ್ಟಣದಲ್ಲಿ ಕಲ್ಮಠ ಶ್ರೀಗಳು ಮುದ್ದಾಪುರ ರಸ್ತೆಯಲ್ಲಿ ದಾನವಾಗಿ ನೀಡಿದ ಸ್ಥಳದಲ್ಲಿ ಕೆ.ಕೆ.ಆರ್.ಟಿ.ಸಿ ಬಸ್ ನಿಲ್ದಾಣವಿದೆ. ಪುರಸಭೆಗೆ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುವ ಸುಮಾರು 18 ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಮತ್ತೊಂದು ಮಿನಿ ಬಸ್ ನಿಲ್ದಾಣ ನಿರ್ಮಿಸುವ ಅಗತ್ಯವಿಲ್ಲ. ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ವಿರೋಧಿಸಿದ್ದೇನೆ.ವಿ.ಎಲ್. ಬಾಬು ಪುರಸಭೆ ಸದಸ್ಯ
ತಂಗುದಾಣ ನಿರ್ಮಾಣ ಡಾ. ಅಂಬೇಡ್ಕರ್ ವೃತ್ತದ (ಹೊಸಪೇಟೆ ಮಾರ್ಗ) ಸಮೀಪ ಇಲ್ಲವೇ ಸಮುದಾಯ ಆರೋಗ್ಯ ಕೇಂದ್ರದ (ಸಿರುಗುಪ್ಪ ಮಾರ್ಗ) ಹತ್ತಿರ ಪುರಸಭೆಯವರು ಸ್ಥಳ ನೀಡಿದಲ್ಲಿ ಉಚಿತವಾಗಿ ತಂಗುದಾಣ ನಿರ್ಮಿಸಿಕೊಡಲಾಗುವುದು.ರಾಜು ಜೈನ್ ಜೈನ್ ಸೇವಾ ಟ್ರಸ್ಟ್ ಕಂಪ್ಲಿ.
ಕಂಪ್ಲಿಯ ಸಣಾಪುರ ರಸ್ತೆಯಲ್ಲಿ ಸಿರುಗುಪ್ಪ ಸೇರಿದಂತೆ ಹಲವು ಹಳ್ಳಿಗಳ ಜನರು ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್‍ಗಾಗಿ ನಿತ್ಯ ರಸ್ತೆ ಬದಿ ನಿಲ್ಲುತ್ತಾರೆ. ಈ ಸ್ಥಳದಲ್ಲಿ ಜರೂರು ತಂಗುದಾಣದ ಅಗತ್ಯವಿದೆ.ಸಿ. ಯಂಕಪ್ಪ ವಕೀಲ ಸಣಾಪುರ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.