ಇತ್ತೀಚೆಗೆ ಅಗರ್‌ವಾಲ್ ಕಂಪನಿ ಹೆಸರಲ್ಲಿ ತಮ್ಮ ಕಂಪನಿಗೆ ಬಂದ ನಕಲಿ ಇ–ಮೇಲ್‌ನಲ್ಲಿ ‘ನಮ್ಮ ಕಂಪನಿಯ ಬ್ಯಾಂಕ್ ಖಾತೆ ಬದಲಾಗಿದೆ’ ಎಂದು ಹೇಳಲಾಗಿತ್ತು. ಜತೆಗೆ, ನಿರ್ದಿಷ್ಟ ಖಾತೆ ಸಂಖ್ಯೆಯನ್ನು ನೀಡಿ, ಅದಕ್ಕೆ ಹಣ ಹಾಕುವಂತೆ ತಿಳಿಸಲಾಗಿತ್ತು. ಅದನ್ನು ನಂಬಿದ ಕಂಪನಿಯ ಹಣಕಾಸು ವಿಭಾದವರು ಹದಿನೈದು ದಿನಗಳ ಅಂತರದಲ್ಲಿ ಹಂತ ಹಂತವಾಗಿ ₹2,11,50,224 ಹಣ ಹಾಕಿದ್ದಾರೆ.