ಬಳ್ಳಾರಿ ಹೊರವಲಯದ ವೇಣಿವೀರಾಪುರ ಬಳಿಯ ಸ್ಪಾಂಜ್ ಐರನ್ ಕಾರ್ಖಾನೆಯೊಂದರ ದೂಳಿನಿಂದಾಗಿ ರಸ್ತೆ ಕಪ್ಪಾಗಿರುವುದು
ಸ್ಪಾಂಜ್ ಐರನ್ ಕಾರ್ಖಾನೆಗಳಿಂದಾಗಿ ರಸ್ತೆಯ ಮೇಲೆ ಕುಳಿತಿರುವ ಕಪ್ಪು ದೂಳು
ಸ್ಪಾಂಜ್ ಐರನ್ ಕಾರ್ಖಾನೆಯೊಂದರಿಂದ ಹೊಮ್ಮುತ್ತಿರುವ ಹೊಗೆ

ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಕಾರ್ಖಾನೆಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ಎಷ್ಟೇ ದೊಡ್ಡವರಿದ್ದರೂ ಕ್ರಮಕ್ಕೆ ಹಿಂಜರಿಯುವುದಿಲ್ಲ. ಕ್ರಮದ ರೂಪದಲ್ಲಿ ಉತ್ತರ ನೀಡುತ್ತೇವೆ
ಪಿ.ಎಂ.ನರೇಂದ್ರ ಸ್ವಾಮಿ ಶಾಸಕ ಅಧ್ಯಕ್ಷ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 
ಕಾರ್ಖಾನೆಗಳ ವಿರುದ್ಧ 2004ರಿಂದಲೂ ಹೋರಾಟ ನಡೆದಿದೆ. ಮಾಲಿನ್ಯ ನಿಂತಿಲ್ಲ. ರಾಜಿ ಪಂಚಾಯಿತಿಗೆ ಬರುವ ಕಾರ್ಖಾನೆಯವರು ಹಣ ಗುತ್ತಿಗೆ ಒಪ್ಪಂದ ಉದ್ಯೋಗದ ಆಮಿಷ ಒಡ್ಡುತ್ತಾರೆ
ರಾಮು ಸ್ಥಳೀಯ ನಿವಾಸಿ.
ಕಾರ್ಖಾನೆಗಳ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಗಂಭೀರವಾಗಲಿದೆ.
ಡಾ. ಗಂಗಾಧರ ಗೌಡ ನಿರ್ದೇಶಕ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ