ಆನೇಕಲ್: ಪಟ್ಟಣದಲ್ಲಿ ವಿಜಯದಶಮಿಯಂದು ಚೌಡಶ್ವರಿ ದೇವಿ ಜಂಬೂಸವಾರಿ ಗುರುವಾರ ವೈಭವದಿಂದ ನಡೆಯಿತು. ಸಾವಿರಾರು ಜನರ ಮಧ್ಯ ಕೇರಳದ ಆನೆ ಶೇಖರನ್ ತಾಯಿ ಚೌಡೇಶ್ವರಿ ದೇವಿಯನ್ನು ಹೊತ್ತು ಆನೇಕಲ್ ದಸರಾವನ್ನು ಯಶಸ್ವಿಗೊಳಿಸಿದನು.

ಈ ಭಾಗದ ದಸರಾ ಎಂದು ಖ್ಯಾತಿ ಗಳಿಸಿರುವ ಆನೇಕಲ್ ದಸರಾವನ್ನು ಕಣ್ತುಂಬಿಕೊಳ್ಳಲು ಕಳೆದ ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಪಟ್ಟಣದಲ್ಲಿ ಎಲ್ಲಿ ನೋಡಿದರೂ ಜನಸ್ತೋಮ ಎದ್ದು ಕಾಣುತ್ತಿತು.

ಊರಿ ಬಿಸಿಲನ್ನು ಲೆಕ್ಕಿಸದೆ ಕಾದು ಕುಳಿತ ಸಹಸ್ರಾ ಮಂದಿ ದಸರಾ ಆರಂಭವಾಗುತ್ತಿದ್ದಂತೆ ಉತ್ಸಾಹಗೊಂಡು ಜೈಕಾರ ಹಾಕಿದರು. ಅಂಬಾರಿಯಲ್ಲಿ ವಿರಾಜಮಾನಳಾದ ಚೌಡೇಶ್ವರಿಯನ್ನು ಕಂಡು ಧನ್ಯರಾದರು. ಜಂಬೂ ಸವಾರಿ ವೀಕ್ಷಿಸಲು ನೂಕುನುಗ್ಗಲಿನಲ್ಲಿ ತಾವು ಪಟ್ಟ ಕಷ್ಟಗಳ ತಾಯಿ ದರುಶನದಿಂದ ಸಾರ್ಥಕವಾಯಿತೆಂದು ಖುಷಿಪಟ್ಟರು. 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.

ಚೌಡೇಶ್ವರಿ ದೇವಿಗೆ ವಿಜಯದಶಮಿ ಉತ್ಸವದ ಪ್ರಯುಕ್ತ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿ, ಅಲಂಕೃತ ದೇವಿಯ ಉತ್ಸವ ಮೂರ್ತಿಯನ್ನು ಮಧ್ಯಾಹ್ನ 3.30ರ ಸುಮಾರಿಗೆ ಆನೆ ಅಂಬಾರಿಯ ಮೇಲೆ ಕೂರಿಸಲಾಯಿತು. ಅಂಬಾರಿ ಹೊತ್ತ ಆನೆಯು ವೇದಿಕೆಯ ಬಳಿಗೆ ಬರುತ್ತಿದ್ದಂತೆ ಅಂಬಾರಿಗೆ ಪೂಜೆ ಸಲ್ಲಿಸಿ ಪುಷ್ಟಾರ್ಚನೆ ಮಾಡಿ ದೊಡ್ಡಬಳ್ಳಾಪುರದ ಪುಷ್ಟಾಂಡಜ ಮುನಿ ಗುರುಪೀಠದ ದಿವ್ಯಾಜ್ಞಾನಾನಂದಗಿರಿ ಸ್ವಾಮೀಜಿ ಚಾಲನೆ ನೀಡಿದರು

ದೇವಿಯನ್ನು ಹೊತ್ತ ಕೇರಳದ ಆನೆ ಶೇಖರನ್ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಮಂಗಳವಾದ್ಯ, ಕಳಶಗಳು ಹಾಗೂ ಜಾನಪದ ತಂಡಗಳು ಜಂಬೂ ಸವಾರಿಗೆ ಸಾಥ್ ನೀಡಿದವು.

ಕಿಕ್ಕಿರಿದು ತುಂಬಿದ್ದ ಜನಸ್ತೋಮ ವೈಭವದ ಉತ್ಸವವನ್ನು ಕಣ್ತುಂಬಿಕೊಂಡರು. ಬೆಂಗಳೂರು, ತಮಿಳುನಾಡು ಸೇರಿದಂತೆ ತಾಲ್ಲೂಕಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಪಟ್ಟಣದ ಕಟ್ಟಡಗಳ ಮೇಲೆ ಭಕ್ತರು ನಿಂತು ಆನೆ ಅಂಬಾರಿ ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೆರವಣಿಗೆ ಸಾಗುವ ಪ್ರತಿ ರಸ್ತೆಗಳು ಜನರಿಂದ ತುಂಬಿತ್ತು.

ಜಂಬೂ ಸವಾರಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಜನರು ಅಂಬಾರಿಗೆ ಹೂಮಳೆಗೆರೆದು ಪ್ರಮುಖ ರಸ್ತೆಗಳಲ್ಲಿ ಭಕ್ತರು ಅಂಬಾರಿಯನ್ನು ಬರಮಾಡಿಕೊಂಡರು.

ಶಾಸಕ ಬಿ.ಶಿವಣ್, ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ, ಪುರಸಭೆ ಪ್ರಭಾರ ಅಧ್ಯಕ್ಷ ಭುವನ ದಿನೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮುನಾವರ್, ಸದಸ್ಯರಾದ ರಾಜೇಂದ್ರ ಪ್ರಸಾದ್, ಮಹಾಂತೇಶ್, ಎನ್.ಎಸ್.ಪದ್ಮನಾಭ, ಸುಧಾ ನಿರಂಜನ್, ಕವಿತಾ ಅಶ್ವಥ್ ನಾರಾಯಣ್, ಭಾರತಿ, ಅನಿತಾ, ಶೋಭಾ, ರಾಜಪ್ಪ, ಶ್ರೀಕಾಂತ್, ಮುಖಂಡರಾದ ಮುಖಂಡ ಜಿ. ಗೋಪಾಲ್, ದೊಡ್ಡಹಾಗಡೆ ಹರೀಶ್ ಗೌಡ, ಸೋಮಶೇಖರ್, ದೇವೇಗೌಡ, ಶ್ರೀನಿವಾಸ್, ಲಕ್ಷ್ಮೀನಾರಾಯಣ್, ಮಲ್ಲಿಕಾರ್ಜುನ್, ನಾಗವೇಣಿ, ಹನುಮಂತರಾವ್, ರಘು ಇದ್ದರು.

ಆನೇಕಲ್ನಲ್ಲಿ ಎರಡು ದಶಕಗಳಿಂದ ವಿಜಯದಶಮಿ ಉತ್ಸವನ್ನು ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆನೇಕಲ್ನಲ್ಲಿಯೂ ಯುವ ದಸರಾ ಕೃಷಿ ದಸರಾ ಆಚರಿಸಲಾಗುದು
ಬಿ.ಶಿವಣ್ಣ ಶಾಸಕ

ಕಲಾತಂಡಗಳ ಮೆರಗು

ಮೆರವಣಿಗೆಯಲ್ಲಿ ಚಂಡೆಮೇಳ ವೀರಗಾಸೆ ಪುರವಂತಿಕೆ ಗಾರುಡಿ ಗೊಂಬೆ ಡೊಳ್ಳುಕುಣಿತ ಪೂಜಾ ಕುಣಿತ ನಂದಿಕೋಲು ಕುಣಿತ ಗಾರುಡಿ ಗೊಂಬೆ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ತಿಲಕ್ ವೃತ್ತದಿಂದ ಹೊರಟ ಆನೆ ಅಂಬಾರಿಯು ಥಳೀ ರಸ್ತೆ ಚರ್ಚ್ ರಸ್ತೆ ದೇವರಕೊಂಡಪ್ಪ ವೃತ್ತ ಗಾಂಧೀ ವೃತ್ತದ ಮೂಲಕ ಕಂಬದ ಗಣಪತಿ ದೇವಾಲಯದ ಮೂಲಕ ಚೌಡೇಶ್ವರಿ ದೇವಾಲಯದ ಬಳಿಗೆ ತೆರಳಿತು. ಚರ್ಚ್ ರಸ್ತೆಯಿಂದ ದೇವರಕೊಂಡಪ್ಪ ರಸ್ತೆಯವರೆಗೂ ಸಾರ್ವಜನಿಕರು ಜಾನಪದ ಕಲಾತಂಡಗಳನ್ನು ವೀಕ್ಷಿಸಲು ಮುಗಿಬಿದ್ದಿದ್ದರು. ಮೆರವಣಿಗೆಗೆ ಆಗಮಿಸಿದ್ದ ಜಾನಪದ ಕಲಾತಂಡಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿದ್ದರು.

ನವರಾತ್ರಿ ಉತ್ಸವಕ್ಕೆ ತೆರೆ

ಚೌಡೇಶ್ವರಿ ದೇವಿ ವಿಜಯದಶಮಿ ಉತ್ಸವದ ಅಂಗವಾಗಿ ಆಗಮಿಸಿದ್ದ ಸಹಸ್ರಾರು ಮಂದಿ ಭಕ್ತರಿಗೆ ಬೆಳಗಿನಿಂದಲೂ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಒಂಭತ್ತು ದಿನಗಳಿಂದಲೂ ನಡೆದ ನವರಾತ್ರಿ ಆಚರಣೆ ಜಂಬೂ ಸವಾರಿ ದೇವಾಲಯವನ್ನು ತಲುಪುವುದರೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು.

ಬಿಗಿ ಪೊಲೀಸ್ ಬಂದೋಬಸ್ತ್

ಪಟ್ಟಣದಲ್ಲಿ ವಿಜಯದಶಮಿ ಉತ್ಸವದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿತು. ಸಹಸ್ರಾರು ಮಂದಿ ಭಕ್ತರು ವಿಜಯದಶಮಿಯ ಉತ್ಸವಕ್ಕೆ ಆಗಮಿಸಿದ್ದರಿಂದ ಪಟ್ಟಣದಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಮೆರವಣಿಗೆಯ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ತಿಲಕ್ ವೃತ್ತದಲ್ಲಿ ಭಾರಿ ಸಂಖ್ಯೆಯ ಜನ ಜಮಾಯಿಸಿದ್ದರಿಂದ ಆನೆ ಅಂಬಾರಿ ಮತ್ತು ಜಾನಪದ ಕಲಾತಂಡಗಳಿಗೆ ಜಾಗ ಮಾಡಿಕೊಡಲು ಪೊಲೀಸರು ಹರಸಾಹಸ ಪಟ್ಟರು. ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿತ್ತು. ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.