ದೊಡ್ಡಬಳ್ಳಾಪುರ: ಅಂಗನವಾಡಿ ಕೇಂದ್ರಗಳಲ್ಲಿನ ಮುಖಚಹರೆ ಗುರುತಿಸುವ ವ್ಯವಸ್ಥೆ ಹಿಂಪಡೆಯಬೇಕು ಹಾಗೂ ಅಂಗನವಾಡಿ ನೌಕರರಿಗೆ ರಕ್ಷಣೆ ನೀಡಲು ಒತ್ತಾಯಿಸಿ ‘ಅಖಿಲ ಭಾರತ ಕರಾಳ ದಿನ’ವನ್ನು ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಗುರುವಾರ ಕಪ್ಪುಬಟ್ಟೆ ಧರಿಸಿ ಕೆಲಸ ನಿರ್ವಹಿಸುವ ಮೂಲಕ ಆಚರಿಸಲಾಯಿತು.

ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಲ್.ಆರ್.ನಳಿನಾಕ್ಷಿ, ಅಂಗನವಾಡಿ ಕೇಂದ್ರಗಳಲ್ಲಿನ ಸೌಲಭ್ಯ ಪಡೆಯುವ ಫಲಾನುಭವಿಗಳ ಮುಖ ಚಹರೆ ಗುರುತಿಸುವ ವ್ಯವಸ್ಥೆ ಕಷ್ಟವಾಗಿದೆ. ಸರ್ಕಾರ ನೀಡಿರುವ ಮೊಬೈಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸೌಲಭ್ಯ ಸರಿಯಾಗಿ ದೊರೆಯುತ್ತಿಲ್ಲ ಎಂದರು.

ಮೊಬೈಲ್ಗಳ ನಿರ್ವಹಣೆಗಾಗಿ ವಾರ್ಷಿಕ ₹2 ಸಾವಿರ ನಿರ್ವಹಣಾ ಅನುದಾನ ಕೊಡಲಾಗುತ್ತಿದೆ. ಇದು ಪೋಷಣ್ ಟ್ರ್ಯಾಕರ್ ಆ್ಯಪ್ ಮೂಲಕ ಕಾರ್ಯನಿರ್ವಹಿಸಲು ಸಾಕಾಗುವುದಿಲ್ಲ. ಬಹುತೇಕ ಜನ ಫಲಾನುಭವಿಗಳು ತಮ್ಮ ಆಧಾರ್ ನಂಬರ್ಗೆ ಮೊಬೈಲ್ ನಂಬರ್ ಜೋಡಿಸಿಲ್ಲ. ಇದರಿಂದ ಫಲಾನುಭವಿಗಳು ಅಂಗನವಾಡಿಗಳಲ್ಲಿ ಸೌಲಭ್ಯ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ ಎಂದರು.

ತಮ್ಮದಲ್ಲದ ತಪ್ಪಿಗಾಗಿ ಅಂಗನವಾಡಿ ನೌಕರರು ಸಾರ್ವಜನಿಕರು ಹಾಗೂ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗುವಂತಾಗಿದೆ. ಅವೈಜ್ಞಾನಿಕ ನೀತಿಗಳಿಂದಾಗಿ ಅಂಗನವಾಡಿ ನೌಕರರು ಒತ್ತಡದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಡಿಜಿಟಲೀಕರಣದಿಂದ ಅಂಗನವಾಡಿ ನೌಕರರ ಕೆಲಸದ ಹೊರೆ ಕಡಿಮೆ ಮಾಡಲಾಗುತ್ತದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಇದೇ ಈಗ ಅಂಗನವಾಡಿ ನೌಕರರಿಗೆ ಮುಳುವಾಗಿದೆ. ಕೆವೈಸಿ, ಫಲಾನುಭವಿಗಳ ಮುಖ ಗುರುತಿಸಿವಿಕೆ, ಡಿಜಿಟಲ್ ಸಾಕ್ಷರತೆ ಇವುಗಳಿಂದಾಗಿ ಅಂಗನವಾಡಿ ನೌಕರರು ನಿರಂತರ ಕಿರುಕುಳಕ್ಕೆ ಒಳಗಾಗುವಂತಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲ್ಲೂಕು ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಖಜಾಂಚಿ ಬಿ.ಎನ್.ನಿರ್ಮಲ, ಕಾರ್ಯದರ್ಶಿ ಸುಮಾ, ಉಪಾಧ್ಯಕ್ಷರಾದ ಎನ್.ಮಂಜುಳ, ಕೆ.ಟಿ.ಶೋಭಾ, ಹೇಮ, ಸುನಂದ, ತ್ರಿವೇಣಿ, ಕೆಂಪಮ್ಮ, ಸಹ ಕಾರ್ಯದರ್ಶಿ ಭಾಗ್ಯಮ್ಮ, ಸರಸ್ವತಿ, ಭಾಗ್ಯಲಕ್ಷ್ಮಮ್ಮ, ಶಾರದ, ಸವಿತ, ಮಂಜುಳಾ ಇದ್ದರು.

ಬೇಡಿಕೆಗಳು: ಮುಖಚಹರೆ ಗುರುತಿಸುವಿಕೆ ಕಡ್ಡಾಯ ಎನ್ನುವುದನ್ನು ಕೈ ಬಿಡಬೇಕು. ಅಂಗನವಾಡಿ ನೌಕರರು ಹಾಗೂ ಸಹಾಯಕಿಯರಿಗೆ ಅವರ ಕೆಲಸದ ಸ್ಥಳಗಳಲ್ಲಿ ಭದ್ರತೆ ಕೊಡಬೇಕು. ಅಂಗನವಾಡಿ ನೌಕರರು ಹಾಗೂ ಸಹಾಯಕಿಯರ ಮೇಲೆ ಹಲ್ಲೆ ಮಾಡುವವರ ಮೇಲೆ ಕ್ರಮ ಆಗಬೇಕು. ಎಲ್ಲ ಅಂಗನವಾಡಿ ಕೇಂದ್ರಗಳಿಗೂ ಗುಣಮಟ್ಟದ ಕಂಪ್ಯೂಟರ್, ಲ್ಯಾಪ್ಟಾಪ್, ಟ್ಯಾಬ್ ಒದಗಿಸಬೇಕು. 5ಜಿ ಸಂಪರ್ಕ ಇರುವ ಗುಣಮಟ್ಟದ ಮೊಬೈಲ್ ಒದಗಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.