ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುವರ್ಣಾ’ಗೆ ಹೆಣ್ಣು ಮರಿ ಜನನ

ಬನ್ನೇರುಘಟ್ಟ ಜೈವಿಕ ಉದ್ಯಾನ: 25ಕ್ಕೇರಿದ ಆನೆ ಕುಟುಂಬದ ಸಂಖ್ಯೆ
Last Updated 19 ಆಗಸ್ಟ್ 2020, 20:11 IST
ಅಕ್ಷರ ಗಾತ್ರ

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವು ಪುತ್ರೋತ್ಸವದ ಸಂಭ್ರಮದಲ್ಲಿದೆ. ಉದ್ಯಾನದ ಆನೆ 45 ವರ್ಷದ ಸುವರ್ಣಳು ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ. ಇದರಿಂದಾಗಿ ಉದ್ಯಾನದ ಆನೆ ಕುಟುಂಬದ ಸಂಖ್ಯೆ 25ಕ್ಕೇರಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.

ಉದ್ಯಾನದ ಆನೆ ಸುವರ್ಣಾ ಇದುವರೆಗೆ ಎಂಟು ಮರಿಗೆ ಜನ್ಮ ನೀಡಿದ್ದು ಈ ಮರಿಯೊಂದಿಗೆ 9ನೇ ಮರಿಗೆ ಜನ್ಮ ನೀಡಿದ್ದಾಳೆ. ಇದೊಂದು ವಿಶೇಷ ದಾಖಲೆ ಎಂದು ಉದ್ಯಾನದ ಮೂಲಗಳು ಹೇಳಿವೆ.

ನೂತನ ಅತಿಥಿಯ ಆಗಮನದಿಂದಾಗಿ ಉದ್ಯಾನದಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗಷ್ಟೇ ಉದ್ಯಾನದ ರೂಪಾ ಎಂಬ ಆನೆ ಗಂಡು ಮರಿಯೊಂದಕ್ಕೆ ಜನ್ಮ ನೀಡಿತ್ತು. ಇದೀಗ ಸುವರ್ಣಾ ಮರಿ ಹಾಕಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಗೋಧಿ, ಕಡಲೆಕಾಳು, ಬೆಲ್ಲ, ಉದ್ದಿನಕಾಳು, ಹೆಸರಕಾಳು, ತೆಂಗಿನಕಾಯಿ, ಅವಲಕ್ಕಿ, ಈರುಳ್ಳಿ ಸೇರಿದಂತೆ ವಿಶೇಷ ಆಹಾರ ನೀಡುವ ಮೂಲಕ ಮಾವುತರಾದ ಭಾಸ್ಕರ್‌ ಮತ್ತು ರಾಜ ಆನೆ ಸುವರ್ಣ ಮತ್ತು ಮರಿಯನ್ನು ಜೋಪಾನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT