ದೊಡ್ಡಬಳ್ಳಾಪುರ: ನಮ್ಮೂರಿನ ಕೆರೆ ನೀರಿನ ಉಳಿಸಿ ಅಭಿಯಾನಡಿ ಆಗಸ್ಟ್ 15 ರಂದು ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿ ಕಪ್ಪುಬಾವುಟ ಹಾರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ತಾಲ್ಲೂಕಿನ ದೊಡ್ಡತುಮಕೂರಿನ ಕೆರೆ ಏರಿ ಮೇಲೆ ಭಾನುವಾರ ನಡೆದ ಅರ್ಕಾವತಿ ನದಿ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ, ಹಿರಿಯ ವೈದ್ಯ ಡಾ.ಎಚ್.ಅಂಜಿನಪ್ಪ, ‘ ಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ತಡೆಯಬೇಕೆಂಬ ನಮ್ಮ ಎಲ್ಲಾ ರೀತಿಯ ಶಾಂತಿಯುತ ಪ್ರತಿಭಟನೆ, ಮನವಿ ಸಲ್ಲಿಕೆಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ರಾಜಕೀಯ ಅಧಿಕಾರಸ್ತರು, ಅಧಿಕಾರಿಗಳವರೆಗಿನ ಎಲ್ಲಾ ಭರವಸೆಗಳು ಸುಳ್ಳಾಗಿವೆ. ಹಾಗಾಗಿ ಆಗಸ್ಟ್ 15 ರಂದು ಕಪ್ಪುಬಾವುಟ ಹಾರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಿಂದ ಬರುತ್ತಿರುವ ಒಳಚರಂಡಿ ನೀರು, ಕೈಗಾರಿಕೆ ನೀರು ಶುದ್ಧೀಕರಿಸದೆ ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಎರಡು ಗ್ರಾಮ ಪಂಚಾಯಿತಿಗಳ ಜನರಿಗೆ ಶುದ್ಧ ಕುಡಿಯುವ ನೀರು ಇಲ್ಲದಂತಾಗಿವೆ. ಹಲವಾರು ರೋಗಗಳಿಂದ ನರಳುವಂತಾಗಿದೆ. ಇದರ ವಿರುದ್ಧ ಹಲವಾರು ವರ್ಷಗಳಿಂದಲು ಹೋರಾಟ ಮಾಡುತ್ತ ಕೆರೆಗೆ ಹರಿದು ಬರುವ ನೀರನ್ನು ಮೂರು ಹಂತಗಳಲ್ಲಿ ಶುದ್ದೀಕರಣ ಮಾಡಿ ಬಿಡುವಂತೆ ಮನವಿ ಮಾಡಿದರು ನಮ್ಮ ಕೋರಿಕೆ ಈಡೇರಿಲ್ಲ ಎಂದು ಬೇಸರಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಬಾವುಟ ಹಾರಿಸುವ ಮೂಲಕ ನಮ್ಮ ಬೇಡಿಕೆ, ನಮ್ಮೂರಿನ ಕೆರೆಗಳ ಅವ್ಯವಸ್ಥೆಯನ್ನು ಸರ್ಕಾರದ ಗಮನಕ್ಕೆ ತರುವುದು ಅನಿವಾರ್ಯವಾಗಿದೆ ಎಂದರು.

ಅರ್ಕಾವತಿ ನದಿ ಹೋರಾಟ ಸಮಿತಿ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.