ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಲಿಬೆಲೆ: ಆಲೂಗಡ್ಡೆ ಬೆಳೆಗೆ ಬಂಪರ್ ಬೆಲೆ

ಹೊಸಕೋಟೆ ತಾಲ್ಲೂಕಿನಲ್ಲಿ 250ರಿಂದ 300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ
Last Updated 6 ಜನವರಿ 2021, 4:43 IST
ಅಕ್ಷರ ಗಾತ್ರ

ಸೂಲಿಬೆಲೆ: ಹಲವು ವರ್ಷಗಳ ನಂತರ ಆಲೂಗಡ್ಡೆ ಉತ್ತಮ ಬೆಲೆಗೆ ಮಾರಾಟವಾಗಿದೆ. ಆಲೂಗಡ್ಡೆ ಬೆಳೆ ಕಟಾವು ಮಾಡಿದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಸೂಲಿಬೆಲೆ ರೈತ ನಾರಾಯಣಸ್ವಾಮಿ, ಎರಡು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆ ಬೆಳೆದಿದ್ದರು. ಎಕರೆಗೆ 13 ಟನ್‌ಗಿಂತ ಹೆಚ್ಚಿನ ಇಳುವರಿ ಬಂದಿದೆ. ಪ್ರತಿವರ್ಷ ಆಲೂಗಡ್ಡೆ ಬೆಳೆದರೆ ಇಳುವರಿ ಕುಂಠಿತವಾಗುತ್ತದೆ. ಆಲೂಗಡ್ಡೆ ಮೂಟೆ (50ಕೆಜಿ) ₹2200 ಬಂಪರ್ ಬೆಲೆಗೆ ಮಾರಾಟವಾಗಿದೆ. ಸ್ಥಳೀಯವಾಗಿ ಗರಿಷ್ಠ ಬೆಲೆಯಾಗಿದೆ. 2014ರ ನಂತರ ದಾಖಲೆ ಬೆಲೆ ಸಿಕ್ಕಿದೆ ಎನ್ನುತ್ತಾರೆ ಅವರು.

ಗಿಡ್ಡಪ್ಪನಹಳ್ಳಿ ರೈತ ಅಕ್ಬರ್ ಅಲಿ ಖಾನ್ ಮಾತನಾಡಿ, ಹಿಂದಿನಿಂದಲೂ ಆಲೂಗಡ್ಡೆ ಕೃಷಿ ಮಾಡಿಕೊಂಡು ಬರಲಾಗುತ್ತಿದೆ. ಬೆಳೆಯನ್ನು ಮುತುವರ್ಜಿಯಿಂದ ನೋಡಿಕೊಂಡರೆ ಎಕರೆಗೆ 10ಟನ್ ಆಲೂಗಡ್ಡೆ ಬೆಳೆಯಬಹುದು ಎನ್ನುತ್ತಾರೆ ಅವರು.

ಹೊಸಕೋಟೆ ತಾಲ್ಲೂಕಿನಲ್ಲಿ ಸುಮಾರು 250 ರಿಂದ 300 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆ ಬೆಳೆಯುತ್ತಿದ್ದು, ಸೂಲಿಬೆಲೆ ಹೋಬಳಿಯಲ್ಲಿ ಅತಿ ಹೆಚ್ಚು ಬೆಳೆಗಾರರಿದ್ದಾರೆ. ಕಳೆದ ವರ್ಷ ಆಲೂಗಡ್ಡೆ ಬೆಳೆಯ ಪ್ರಮಾಣ ಕಡಿಮೆಯಾದ ಕಾರಣ ಈ ವರ್ಷ ಬಿತ್ತನೆ ಆಲೂಗಡ್ಡೆಗೆ ಬೇಡಿಕೆ ಹೆಚ್ಚಾಗಿ ಮೂಟೆ (50 ಕೆಜಿ) ₹5000 ಮಾರಾಟವಾಗಿದೆ. ಈ ವರ್ಷ ಕಟಾವು ಆದ ಆಲೂಗಡ್ಡೆ ಮೂಟೆಗೆ (50ಕೆಜಿ) ಪ್ರಸ್ತುತ ₹1300 ಆಗಿದ್ದು, ಇದು ಕೂಡ ಉತ್ತಮ ಬೆಲೆಯಾಗಿದೆ.

ಸ್ಥಳೀಯ ರೈತರು ಹಿಂಗಾರಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಅಕ್ಟೋಬರ್ ತಿಂಗಳಿನಿಂದ ಜನವರಿ 15 ರವರೆಗೆ ಆಲೂಗಡ್ಡೆ ಬಿತ್ತನೆಗೆ ಸೂಕ್ತ ಕಾಲ. ಹೆಕ್ಟೇರ್ ಗೆ 14 ಟನ್ ಇಳುವರಿ ಬರುತ್ತದೆ. ಮುಂಗಾರಿನಲ್ಲಿ ಬೇರೆ ಬೆಳೆ ಬೆಳೆದು, ಹಿಂಗಾರಿನಲ್ಲಿ ಆಲೂಗಡ್ಡೆ ಬೆಳೆಯುವುದರಿಂದ ಭೂಮಿ ಹೆಚ್ಚಿನ ಸತ್ವದ ಅವಶ್ಯ ಇರುತ್ತದೆ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದಾಗ 90 ದಿವಸಗಳಿಗಿಂತ ಮೊದಲೇ ಬೆಳೆಯನ್ನು ರೈತರು ಕಟಾವು ಮಾಡುವುದರಿಂದ ಇಳುವರಿ ಕುಂಠಿತಗೊಳ್ಳುತ್ತದೆ.

ಸರಿಯಾದ ಕಾಲಕ್ಕೆ ಭೂಮಿ ಹದಗೊಳಿಸಿ ಆಲೂಗಡ್ಡೆ ಬಿತ್ತನೆ ಮಾಡಿದರೆ ಒಳ್ಳೆಯ ಇಳುವರಿಯನ್ನು ಪಡೆಯಬಹುದು ಎನ್ನುತ್ತಾರೆ ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಸೋಮಶೇಖರಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT