ಗುರುವಾರ , ಫೆಬ್ರವರಿ 27, 2020
19 °C

ಅಪಘಾತ: ಪಿಡಬ್ಲ್ಯೂಡಿ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕಾಮಗಾರಿ ಪ್ರದೇಶದಲ್ಲಿ ರಕ್ಷಣಾ ಕ್ರಮ ಇಲ್ಲದ ಕಾರಣ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. 

ದ್ವಿಚಕ್ರ ವಾಹನ ಸವಾರ ಚನ್ನೇಗೌಡ (60) ಚನ್ನರಾಯಪಟ್ಟಣ ಹೋಬಳಿ ಐಬಸಾಪುರದಲ್ಲಿ ಸೇತುವೆ ಕಾಮಗಾರಿ ಪ್ರದೇಶದಲ್ಲಿ ಅಪಘಾತದಿಂದ ಮೃತಪಟ್ಟಿದ್ದರು. ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸೂಚನಾ ಫಲಕಗಳು ಅಳವಡಿಸಿಲ್ಲ. ಪಕ್ಕದಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ಸುರಕ್ಷತಾ ಕ್ರಮಗಳು ಕೈಗೊಂಡಿಲ್ಲ. ಗುದ್ದಲಿಪೂಜೆ ಮಾಡಿ ಹೋದ ನಂತರ ಇಕ್ಕೆಲಗಳಲ್ಲಿ ಟೇಪ್ ಕಟ್ಟಿದ್ದಾರೆ. ರಾತ್ರಿಯ ವೇಳೆ ಇಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಮಾಡಿಲ್ಲ. ರಸ್ತೆ ಅಗಲ ಮಾಡಬೇಕಾಗಿತ್ತು ಮಾಡಿಲ್ಲ. ಆದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಮೃತರ ಪುತ್ರ ಸಂದೇಶ್‌ ದೂರಿನಲ್ಲಿ ಆರೋಪಿಸಿದ್ದಾರೆ.  

ಪೊಲೀಸರು ಗುತ್ತಿಗೆದಾರ ಮುರಳಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಪ್ಪ, ಎಂಜಿನಿಯರ್ ಶಂಕರಪ್ಪ ಅವರ ಮೇಲೆ ದೂರು ದಾಖಲಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು