ಆನೇಕಲ್: ತಾಲೂಕಿನ ಚಂದಾಪುರದ ಶಿವಾಲಯ ನಾಟ್ಯಮಂದಿರದ 12ನೇ ವಾರ್ಷಿಕೋತ್ಸವ ಸಮರ್ಪಣಾಮ್ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಆಕರ್ಷಕ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿದರು.

ಶಿವಾಲಯ ನಾಟ್ಯಮಂದಿರದ ವಿದ್ಯಾರ್ಥಿಗಳ ದಶಾವತಾರ ನೃತ್ಯ ಪ್ರದರ್ಶನ ಪ್ರೇಕ್ಷಕರ ಕಣ್ಮನ ಸೆಳೆಯಿತು. ದಶಾವತಾರದ ಒಂದೊಂದು ಅವತಾರವು ನೃತ್ಯರೂಪಕದಲ್ಲಿ ಪ್ರದರ್ಶನವಾಗುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮತ್ಸ್ಯಾ, ವರಹ ಮತ್ತು ನರಸಿಂಹ ಅವತಾರ ನೋಡುಗರಲ್ಲಿ ಭಕ್ತಿ, ಭಾವ ಮೂಡಿಸಿತು.

ಭರತನಾಟ್ಯ ಕೇವಲ ವೃತ್ತಿವಲ್ಲ, ಭಕ್ತಿ ಮತ್ತು ಧ್ಯಾನದ ರೂಪಕವಾಗಿದೆ. ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಸಂರಕ್ಷಿಸುವ ಸಲುವಾಗಿ ಭರತನಾಟ್ಯ, ಕರ್ನಾಟಿಕ್ ಸಂಗೀತ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕಲೆಗಳನ್ನು ಅಭ್ಯಾಸ ಮಾಡಬೇಕು ಎಂದು ಶಿವಾಲಯ ನಾಟ್ಯಮಂದಿರದ ಮುಖ್ಯಸ್ಥೆ ಮಂಜುಳಾ ಹೇಳಿದರು.

ನೃತ್ಯ ಕಲಾವಿದರಾದ ಡಾ.ಸಂಧ್ಯಾ ರವಿ, ಭಾನುಪ್ರಿಯ ರಾಕೇಶ್, ಶಿವಾಲಯ ಆರ್ಟ್ಸ್ ಅಂಡ್ ಕಲ್ಚರಲ್ ಟ್ರಸ್ಟ್ ನ ಅಧ್ಯಕ್ಷ ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.