‘ಜಾತ್ರೆಗೆ ಮಾರಾಟಕ್ಕೆ ಬರುವ ಒಂದು ಜೋಡಿ ಹೋರಿಗಳಿಗೆ ₹50ಗಳವರೆಗೂ ಟೋಲ್ ಸುಂಕ ವಸೂಲಿ ಮಾಡಲಾಗುತ್ತದೆ. ಹೋರಿಗಳನ್ನು ಸಾಕಾಣಿಕೆ ಮಾಡುವ ರೈತರ ಸಂಖ್ಯೆಯೇ ಕಡಿಮೆಯಾಗುತ್ತಿದ್ದು ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಬರುವ ಹೋರಿಗಳ ಸಂಖ್ಯೆಯು ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಜಾತ್ರೆಗೆ ಮಾರಾಟಕ್ಕೆ ಬರುವ ಹೋರಿಗಳಿಗೆ ಟೋಲ್ ಸುಂಕು ವಸೂಲಿಯಿಂದ ವಿನಾಯಿತಿ ನೀಡಬೇಕು’ ಎಂದು ತೂಬಗೆರೆ ಗ್ರಾಮದ ಯುವ ಮುಖಂಡ ಉದಯ ಆರಾಧ್ಯ ಜಿಲ್ಲಾ ಆಡಳಿತವನ್ನು ಆಗ್ರಹಿಸಿದ್ದಾರೆ.