ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌ನಲ್ಲಿ ಹೋಳಿ ಸಂಭ್ರಮ

Published 24 ಮಾರ್ಚ್ 2024, 13:47 IST
Last Updated 24 ಮಾರ್ಚ್ 2024, 13:47 IST
ಅಕ್ಷರ ಗಾತ್ರ

ಆನೇಕಲ್: ಪಟ್ಟಣದಲ್ಲಿ ಹೋಳಿ ಹಬ್ಬದ ಆಚರಣೆಯು ಸಂಭ್ರಮ ಸಡಗರಗಳಿಂದ ನೆರವೇರಿತು. ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಪುಟಾಣಿ ಮಕ್ಕಳು ಬಣ್ಣಗಳ ಓಕುಳಿಯಾಡಿದರು. ಮನೆ ಮನೆಗಳ ಬಳಿ ಬಣ್ಣಗಳನ್ನು ಪರಸ್ಪರ ಎರಚಿ ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತು. ತಮಟೆಯ ವಾದನಕ್ಕೆ ಬಣ್ಣ ಎರಚುತ್ತಾ, ಕುಣಿದು ಯುವ ಜನತೆ ಸಂಭ್ರಮಿಸಿದರು.

ಹೋಳಿಯಲ್ಲಿ ಗಮನ ಸೆಳೆದ ಚಿಣ್ಣರು
ಹೋಳಿಯಲ್ಲಿ ಗಮನ ಸೆಳೆದ ಚಿಣ್ಣರು

ಪಟ್ಟಣದ ಸಿಪಾಯಿಗಲ್ಲಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಪಟ್ಟಣದ ವಿವಿಧೆಡೆ ಹೋಳಿ ಆಚರಣೆ ಮಾಡಲಾಯಿತು. ಸರಸ್ವತಿ ವಿದ್ಯಾ ಮಂದಿರ ಸಮೀಪದ ಮೈದಾನದಲ್ಲಿ ಹೋಳಿ ಸಂಭ್ರಮ ನಡೆಯಿತು.

ಆನೇಕಲ್‌ನ ಸಿಪಾಯಿಗಲ್ಲಿಯಲ್ಲಿ ಹೋಳಿ ಪ್ರಯುಕ್ತ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಜನರು
ಆನೇಕಲ್‌ನ ಸಿಪಾಯಿಗಲ್ಲಿಯಲ್ಲಿ ಹೋಳಿ ಪ್ರಯುಕ್ತ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಜನರು

ಪಟ್ಟಣದ ಸಿಪಾಯಿಗಲ್ಲಿಯಲ್ಲಿ ಕಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಕಳೆದ ಒಂದು ವಾರದಿಂದ ಪೂಜೆ ಸಲ್ಲಿಸಲಾಗಿತ್ತು. ಕಾಮದಹನದ ಮಾದರಿ ರೂಪಿಸಿ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT