ಹೊಸಕೋಟೆ: ಬೇಸಿಗೆ ಆರಂಭದಲ್ಲೇ ತಾಲ್ಲೂಕಿನಾದ್ಯಂತ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಅದರಂತೆ ತಾಲ್ಲೂನಾದ್ಯಂತ ಈವರೆಗೂ ಸುಮಾರು 43 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ.

ಈ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ನೀಗಿಸಲು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಇತರೆ ಇಲಾಖೆಗಳು ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಂಡಿವೆ.

ಸಮಸ್ಯೆ ಇರುವ 43 ಹಳ್ಳಿಗಳ ಪೈಕಿ 21 ಹಳ್ಳಿಗಳಲ್ಲಿ ನೂತನ ಕೊಳವೆ ಬಾವಿ ಕೊರೆಸುವ ಮೂಲಕ ಸಮಸ್ಯೆ ಪರಿಹರಿಸಬಹುದು. 19 ಗ್ರಾಮಗಳಲ್ಲಿ ವಿದ್ಯುತ್ ಪ್ರವರ್ತಕ ಅಳವಡಿಕೆ ಬಾಕಿ ಉಳಿದಿದೆ. ಇತರೆ ಹಳ್ಳಿಗಳಿಂದ ಮೂರು ಗ್ರಾಮಗಳು ನೀರು ಪಡೆಯುತ್ತಿವೆ.

ಪ್ರಸ್ತುತ ತೀರಾ ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮುಖ್ಯವಾಗಿ ಮೂರು ಗ್ರಾಮಗಳಲ್ಲಿ ನೀರಿನ ತೀವ್ರ ನೀರಿನ ಸಮಸ್ಯೆ ಇದೆ. ಇಟ್ಟಸಂದ್ರ ಗ್ರಾ.ಪಂನ ಈಸ್ತೂರು, ಹೆತ್ತಕ್ಕಿ ಗ್ರಾ.ಪಂನ ಬಂಡಹಳ್ಳಿ ಮತ್ತು ದೊಡ್ಡಅರಳಗೆರೆ ಗ್ರಾ.ಪಂ ಕೇಂದ್ರ ನೀರಿನ ಸಮಸ್ಯೆ ಎದುರಿಸುತ್ತಿವೆ.

ಈಸ್ತೂರು ಗ್ರಾಮಕ್ಕೆ ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಸುತ್ತಿದ್ದರೆ, ಬಂಡಹಳ್ಳಿ ಮತ್ತು ದೊಡ್ಡಅರಳಗೆರೆ ಗ್ರಾಮಗಳಿಗೆ ನೀರಿನ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ಇಂದು ಟಾಸ್ಕ್ ಪೋರ್ಸ್ ಸಭೆ: 2023-24ನೇ ವರ್ಷದಲ್ಲಿ ಹೊಸಕೋಟೆ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿನಲ್ಲಿ ಹೊಸಕೋಟೆ ತಾಲ್ಲೂಕಿನಲ್ಲಿ ನೀರು ಮತ್ತು ಮೇವಿನ ಲಭ್ಯತೆಯ ಕುರಿತು ಚರ್ಚಿಸುವ ಸಲುವಾಗಿ ಏ.22ರಂದು ಶಾಸಕ ಶರತ್ ಬಚ್ಚೇಗೌಡ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಟಾಸ್ಕ್ಪೋರ್ಸ್ ಸಭೆ ಕರೆಯಲಾಗಿದೆ.

ದಿನೇ ದಿನೇ ನೀರಿನ ಸಮಸ್ಯೆ ಉಲ್ಬಳಗೊಳ್ಳುತ್ತಿದೆ. ಅದನ್ನು ವೈಜ್ಞಾನಿಕವಾಗಿ ನಿಭಾಯಿಸಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಲ್ಲದೆ ಇರುವ ನೀರನ್ನು ವ್ಯರ್ಥ ಮಾಡದೆ ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಕರ್ತವ್ಯ ಸಾರ್ವಜನಿಕರದ್ದು

–ಹರೀಶ್ ಹಳೇಯೂರು ನಂದಗುಡಿ

ಈ ಹಳ್ಳಿಗಳಲ್ಲಿ ನೀರಿನ ಹಾಹಾಕಾರ

ತಾಲ್ಲೂಕಿನ 28 ಪಂಚಾಯಿತಿಗಳಲ್ಲಿ ಸುಮಾರು 18 ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ಅದರಲ್ಲಿಯೂ ಸೂಲಿಬೆಲೆ ಹೋಬಳಿಯ ದೊಡ್ಡಅರಳಗೆರೆ ಮತ್ತು ನಂದಗುಡಿ ಹೋಬಳಿಯಲ್ಲಿ ಹೆಚ್ಚು ಸಮಸ್ಯೆ ಇದೆ. ದೊಡ್ಡಅರಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡಅರಳಗೆರೆ ಶಶಿಮಾಕನಹಳ್ಳಿ ಹೊಸದಿಂಬಹಳ್ಳಿ(ಚನಿಗಲಾಪುರ) ಮತ್ತು ಭುವನಹಳ್ಳಿ ನಂದಗುಡಿ ಗ್ರಾ.ಪಂ ವ್ಯಾಪ್ತಿಯ ಹಳೆಯೂರು ನಂದಗುಡಿ ಬನಹಳ್ಳಿ ವಡ್ಡಹಳ್ಳಿ ಮತ್ತು ಗಿಡ್ಡನಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಗಿಡ್ಡಪ್ಪನಹಳ್ಳಿ ಜಡಿಗೇನಹಳ್ಳಿ ಹೋಬಳಿಯ ಖಾಜಿ ಹೊಸಹಳ್ಳಿ ಗ್ರಾ.ಪಂ ನಂತರದ ಸ್ಥಾನದಲ್ಲಿವೆ. ಗಿಡ್ಡಪ್ಪನಹಳ್ಳಿ ಮುತ್ಸಂದ್ರ ಲಕ್ಕೊಂಡಹಳ್ಳಿ ದೊಡ್ಡನಲ್ಲಾಲ ಬೈಲನರಸಾಪುರ ಇಟ್ಟಸಂದ್ರದಲ್ಲಿ ದಿನೇದಿನೇ ಸಮಸ್ಯೆ ಉಲ್ಬಳಗೊಳ್ಳುತ್ತಿದೆ.

ಸಮರೋಪಾದಿ ಕೆಲಸ ತೀರಾ ಅಗತ್ಯ

ಇರುವ ಕಡೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಒದಗಿಸಲಾಗುತ್ತಿದೆ. ಕೆಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ನಿಬಾಯಿಸುವ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ಪೋರ್ಸ್ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಯಾವ ಪರಿಹಾರ ಸೂಚಿಸುತ್ತಾರೋ ಆ ರೀತಿಯಲ್ಲಿ ಸಮರೋಪಾದಿ ಕೆಲಸ ಮಾಡಲಾಗುವುದು. ದಿವ್ಯಾ ಸಹಾಯಕ ಎಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.