ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟೇಲ್ ಉದ್ಯಮಕ್ಕೂ ಬೇಸಿಗೆ ‘ಬಿಸಿ’: ಶೇ 70 ರಷ್ಟು ವ್ಯಾಪಾರ ಕುಸಿತ

Published 6 ಮೇ 2024, 15:02 IST
Last Updated 6 ಮೇ 2024, 15:02 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಬಿಸಿಲಿನ ತಾಪಮಾನದಿಂದ ಹೈರಾಣಾಗಿರುವ ಜನ ಮನೆಗಳಿಂದ ಹೊರಗೆ ಬರಲಿ ಭಯಪಡುತ್ತಿದ್ದು, ಹೊಟೇಲ್ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಸುಮಾರು 37 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಮಧ್ಯಾಹ್ನದ ವೇಳೆ ಜನರ ಓಡಾಟ ವಿರಳವಾಗಿದೆ. ಹೊಟೇಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ.

ಬೆಳಗಿನ ಸಮಯ 10 ಗಂಟೆಯೊಳಗೆ ತಿಂಡಿ ತಿನ್ನುವುದಕ್ಕೆ ಸ್ವಲ್ಪ ಮಂದಿ ಬರುತ್ತಾರೆ. ಮಧ್ಯಾಹ್ನದ ಬಿಸಿಲಿನಿಂದಾಗಿ ಗ್ರಾಹಕರು ಬರುತ್ತಿಲ್ಲ. ಹೊಟೇಲ್ ಉದ್ಯಮ ನಡೆಸುವುದು ತುಂಬಾ ಕಷ್ಟವಾಗಿದೆ ಶೇ 70 ರಷ್ಟು ವ್ಯಾಪಾರ ಕುಸಿತವಾಗಿದೆ ಎನ್ನುತ್ತಾರೆ ಹೊಟೇಲ್ ಮಾಲೀಕರು.

ತರಕಾರಿ, ದಿನಸಿ, ಸಿಲಿಂಡರ್ ಬೆಲೆ, ಹೀಗೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೇಸಿಗೆಯಲ್ಲಿ ತಯಾರಿಸಿದ ಚಟ್ನಿ, ಇಡ್ಲಿ, ದೋಸೆ ರುಚಿ ಕೆಡುತ್ತಿವೆ. ಹೆಚ್ಚು ಸಮಯ ಇಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊಟೇಲ್‌ನಲ್ಲಿ 15 ಮಂದಿ ಕಾರ್ಮಿಕರಿದ್ದಾರೆ. ಅವರಿಗೆ ತಿಂಗಳಿಗೆ ಸರಿಯಾಗಿ ವೇತನ ಕೊಡಬೇಕು. ವಿದ್ಯುತ್‌, ನೀರು ಮತ್ತು ಕಟ್ಟಡ ಬಾಡಿಗೆ ಕಟ್ಟಬೇಕು. ಇವುಗಳ ನಿರ್ವಹಣೆಗೆ ಈಗ ಆಗುತ್ತಿರುವ ವ್ಯಾಪಾರ ಸಾಲುತ್ತಿಲ್ಲ. ನಷ್ಟದ ನಡುವೆ ಕೈಯಿಂದ ಈ ಬಿಲ್‌ಗಳನ್ನು ಕಟ್ಟಬೇಕಿದೆ ಎನ್ನುತ್ತಾರೆ ಹೊಟೇಲ್ ಮಾಲೀಕ ಶಾಂತಾರಾಮ್.

ಬಿಸಿಲಿನ ತಾಪಮಾನದಿಂದ ಕಾಫಿ, ಟೀ. ಕುಡಿಯುವವರ ಸಂಖ್ಯೆ  ಕಡಿಮೆಯಾಗಿದೆ. ಮೊದಲು 40 ಲೀಟರ್ ಹಾಲು ತರಿಸಿಕೊಳ್ಳುತ್ತಿದ್ದೆ, ಈಗ 20 ಲೀಟರ್ ತರಿಸಿಕೊಳ್ಳುತ್ತೇವೆ. ಹಾಲು ಹೆಚ್ಚು ದಿನ ಇಡುವುದಕ್ಕೆ ಆಗಲ್ಲ, ನಮ್ಮಲ್ಲಿ ಫ್ರಿಡ್ಜ್ ಇಲ್ಲದ ಕಾರಣ, ಹಾಲು ಸಂಗ್ರಹಿಸಲು ಆಗುತ್ತಿಲ್ಲವೆಂದು ಟೀ ಮಾರಾಟಗಾರ ಆನಂದ್ ಹೇಳುತ್ತಾರೆ.

ರಸ್ತೆಗಳ ಬದಿಯಲ್ಲಿ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ತಳ್ಳುವ ಗಾಡಿಗಳಲ್ಲಿ ಆಹಾರ ತಯಾರಿಸಿ, ಮಾರಾಟ ಮಾಡುತ್ತಿದ್ದೇವೆ. ಬಿಸಿಲಿನಿಂದ ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾಗಿರುವ ಕಾರಣ, ಗ್ರಾಹಕರು ಬರುತ್ತಿಲ್ಲ. ಕೆಲವೊಮ್ಮೆ ತಯಾರಿಸಿ ತಿಂಡಿಗಳು ಬಿಸಿಗೆ ಹೆಚ್ಚು ಸಮಯ ಇಡಲು ಸಾಧ್ಯವಾಗದೆ ಹಸುಗಳಿಗೆ ನೀಡುತ್ತಿದ್ದೇವೆ ಎಂದು ತಳ್ಳುವ ಗಾಡಿಯ ವ್ಯಾಪಾರಿ ರಮೇಶ್ ಬೇಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT