ಸೂಲಿಬೆಲೆ(ಹೊಸಕೋಟೆ): ಕುಡಿದ ನಶೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗನ್ ತೋರಿಸಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಕೇರಳದ ವ್ಯಕ್ತಿಯನ್ನು ಸೂಲಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ದೀಪಕ್ ಕೃಷ್ಣ ಬಂಧಿತ. ಕಳೆದ ಮೂರು ದಿನಗಳಿಂದ ಆರೋಪಿ ಜಿ.ಎನ್. ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಬಳಿ ಸಂಜೆ ಬಾರ್ನಲ್ಲಿ ಮದ್ಯ ಸೇವಿಸಲು ಬರುತ್ತಿದ್ದ. ಅ.14ರಂದು ಸಂಜೆ 7.30ಕ್ಕೆ ಕುಡಿದ ನಶೆಯಲ್ಲಿ ಬಾರ್ ಮುಂದೆ ಹೋಗಿ ಬರುವ ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗನ್ ತೋರಿಸಿ ಬೆದರಿಕೆ ಹಾಕಿದ್ದ.

ತಕ್ಷಣಕ್ಕೆ ಬಾರ್ನ ಸಿಬ್ಬಂದಿ ಸೂಲಿಬೆಲೆ ಠಾಣೆಗೆ ದೂರು ಸಲ್ಲಿಸಿದ್ದರು. ಕಾರ್ಯಪ್ರವೃತ್ತರಾದ ಸೂಲಿಬೆಲೆ ಪೊಲೀಸ್ ಠಾಣೆಯ ಪೊಲೀಸರು ದೀಪಕ್ ಕೃಷ್ಣನನ್ನು ಬಂದಿಸಿ ಆತನಿಂದ ಗನ್ ವಶಕ್ಕೆ ಪಡೆದು ಆತನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.