ಶನಿವಾರ, ಜನವರಿ 25, 2020
27 °C

ಮಹದೇವ ಕಾಲೇಜಿಗೆ 3 ರ‍್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಬೆಂಗಳೂರು ವಿಶ್ವವಿದ್ಯಾಲಯವು ಮೇ, ಜೂನ್ 2019 ರಲ್ಲಿ ನಡೆಸಿದ ಬಿ.ಎ. ಕೋರ್ಸ್ ಗಳ ಪರೀಕ್ಷೆಗಳಲ್ಲಿ 3 ರ‍್ಯಾಂಕ್‌ಗಳನ್ನು ನಗರದ ಮಹದೇವ ಡಿಗ್ರಿ ಕಾಲೇಜು ಗಳಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಲೇಜಿನ ವಿದ್ಯಾರ್ಥಿ ಮಹಾಲಕ್ಷ್ಮೀ ಎಂ.ಆರ್ 5,200 ಅಂಕಗಳಿಗೆ 4,556 ಅಂಕಗಳನ್ನು ಪಡೆದು ಶೇ 87.62 ಅಂಕಗಳನ್ನು ಪಡೆದು ವಿಶ್ವವಿದ್ಯಾಲಯಕ್ಕೆ ಮೊದಲ ರ‍್ಯಾಂಕ್‌ ಪಡೆದಿದ್ದಾರೆ.

ರೇಖಾ ಎಚ್.ವಿ 5,200 ಅಂಕಗಳಿಗೆ 4,485 ಅಂಕಗಳನ್ನು ಪಡೆದು ಶೇ 86.25 ಅಂಕಗಳನ್ನು ಪಡೆದು 3ನೇ ರ‍್ಯಾಂಕ್‌ ಗಳಿಸಿದ್ದಾರೆ. ಆದರ್ಶ್ ಎಂ.ಆರ್. 5,200 ಅಂಕಗಳಿಗೆ 4,444 ಅಂಕಗಳನ್ನು ಪಡೆದು ಶೇ 85.46 ಅಂಕ ಪಡೆದು 5ನೇ ರ‍್ಯಾಂಕ್‌ ಗಳಿಸಿದ್ದಾರೆ.

ಕಾಲೇಜಿಗೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಅಧ್ಯಕ್ಷರಾದ ರಾಮಾಂಜಿನಿ, ಪ್ರಾಂಶುಪಾಲ ರಾಮನಾಥ್ ಎಂ.ಎಂ., ಟ್ರಸ್ಟಿನ ಸದಸ್ಯರಾದ ನವನೀಶ್ವರ್ ರೆಡ್ಡಿ, ಹರೀಶ್ ಮಯೂರ್ ಮತ್ತು ಕಾಲೇಜಿನ ಉಪನ್ಯಾಸಕರು ಅಭಿನಂದಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು