ನಂದಗುಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಇದ್ದಂತಹ ಆಂಜನೇಯ ದೇವಾಲಯ ಇಂದು ಬೆಳಿಗ್ಗೆ ಕಿಡಿಗೆಡಿಗಳಿಂದ ನೆಲಸಮ ಗೊಂಡಿರುವುದು
ಕಿಡಿಗೇಡಿಗಳ ದುಷ್ಕೃತ್ಯ ದಿಂದ ದೇವಾಲಯದ ಗೋಡೆಗಳು ತುಂಡು ತುಂಡಾಗಿ ಬಿದ್ದಿರುವುದು
ದೇವಾಲಯ ಪಕ್ಕದ ಜಾಗದ ಮೇಲೆ ಗ್ರಾಮದ ಪ್ರಭಾವಿಯೊಬ್ಬರ ಕಣ್ಣು ಬಿದ್ದಿತ್ತು. ಇದು ಗೊತ್ತಾಗಿ ದೇವಾಲಯ ಆಡಳಿತ ಮಂಡಳಿ ದೇವಾಲಯದ ಸುತ್ತಮುತ್ತ ಬಾರ್ ತೆರೆಯಲು ಅನುಮತಿ ನೀಡದಂತೆ ಅಬಕಾರಿ ಇಲಾಖೆಗೆ ದೂರು ನೀಡಿತ್ತು. ಇದರಿಂದ ಕೋಪಗೊಂಡ ಗ್ರಾಮದ ಪ್ರಭಾವಿ ದೇವಾಲಯ ನೆಲಸಮ ಮಾಡಿರಬಹುದು. ಘಟನಾ ಸ್ಥಳಕ್ಕೆ ನಂದಗುಡಿ ಪೋಲೀಸರು ಭೇಟಿ ನೀಡಿದ್ದರು
ಆಂಜಿನಪ್ಪ ನಂದಗುಡಿ ಗ್ರಾಮಸ್ಥ
ವೈಯುಕ್ತಿಕ ಲಾಭಕ್ಕಾಗಿ ದೇವಾಲಯ ನೆಲಸಮ ಮಾಡಿದ್ದು ದುರಂತ. ಪೋಲೀಸರು ನೈಜ ಕಾರಣ ಪತ್ತೆ ಹಚ್ಚಬೇಕು