ಶುಕ್ರವಾರ, ಮೇ 20, 2022
23 °C
ದೊಡ್ಡಬಳ್ಳಾಪುರ ರಾಜ್ಯದಲ್ಲೇ ಅತಿ ಹೆಚ್ಚು ರಾಗಿ ಬೆಳೆದಿರುವ ತಾಲ್ಲೂಕು

ರಾಗಿ ಖರೀದಿ ಮಿತಿ ಹೆಚ್ಚಳಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿ
ಕೊಂಡಿರುವ ರೈತರಿಂದ ಭಾನುವಾರವೂ  ರಾಗಿ ಖರೀದಿ ನಡೆಯಲಿದೆ. ರೈತರಿಗೆ ಖರೀದಿ ಕೇಂದ್ರದಲ್ಲಿ ಯಾವುದೇ ರೀತಿ ಸಮಸ್ಯೆ ಹಾಗೂ ಕಿರುಕುಳ ಉಂಟಾದಲ್ಲಿ ತಕ್ಷಣ ಸಂಪರ್ಕಿಸಬಹುದಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಅವರು ನಗರದ ಎಪಿಎಂಸಿ ಆವರಣದಲ್ಲಿ ರಾಜ್ಯ ಆಹಾರ ನಿಗಮದ ವತಿಯಿಂದ ಬೆಂಬಲ ಬೆಲೆ ಯೋಜನೆ
ಯಡಿ ರಾಗಿ ಖರೀದಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಈ ಬಾರಿ ತಾಲ್ಲೂಕಿನಲ್ಲಿ ರಾಗಿ ಉತ್ತಮ ಇಳುವರಿ ಬಂದಿದೆ. ಹೀಗಾಗಿ ರೈತರಿಂದ ಹೆಕ್ಟೇರ್‌ ವ್ಯಾಪ್ತಿಗೆ ನಿಗದಿಪಡಿಸಿರುವ ರಾಗಿ ಖರೀದಿ ಮಿತಿ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡ
ಲಾಗಿತ್ತು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದರಿಂದ ರಾಗಿ ಬೆಳೆದಿರುವ ರೈತರು ಮಾ
ರಾಟಕ್ಕೆ ಖಾಸಗಿ ವ್ಯಕ್ತಿಗಳನ್ನು ಅವಲಂಬಿಸುವಂತಾಗಿದೆ ಎಂದರು.

ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ರಾಗಿ ಖರೀದಿಸುವುದನ್ನು ಆರಂಭಿಸಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ. ತಾಲ್ಲೂಕಿನಲ್ಲಿ ರಾಗಿ ಸಂಗ್ರಹ ಮಾಡಲು ₹12ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಿಸಲಾಗಿದೆ. ಪ್ರತಿ ದಿನ ಮೂರು ಸಾವಿರ ಕ್ವಿಂಟಲ್‌ ರಾಗಿ ಖರೀದಿ ಮಾಡ
ಲಾಗುವುದು. ರೈತರು ಖರೀದಿ ಕೇಂದ್ರಕ್ಕೆ ರಾಗಿ ತರಲು ಅಗತ್ಯ ಇರುವ ಚೀಲಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ₹17 ನೀಡಿ ಖರೀದಿಸಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರು ಟ್ರ್ಯಾಕ್ಟರ್‌ಗಳಲ್ಲಿ ರಾಗಿ ತಂದು ತೂಕ ಮಾಡಿಸಲು ಎಲ್ಲ ವೇಬ್ರಿಡ್ಜ್‌ಗಳಲ್ಲೂ ಏಕ ರೀತಿಯ ಶುಲ್ಕ ಪಡೆಯುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು

ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ ಮಾತನಾಡಿ, ತಾಲ್ಲೂಕಿನಲ್ಲಿ ಇದುವರೆಗೆ 7660 ಜನ ರಾಗಿ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದು, ಈ ರೈತರಿಂದ 1,53,586 ಕ್ವಿಂಟಲ್‌ ರಾಗಿ ಖರೀದಿಸಲಾಗುವುದು. ನೋಂ
ದಣಿ ಹಾಗೂ ಖರೀದಿಗೆ ಮಾರ್ಚ್‌ 15ರ
ವರೆಗೂ ಅವಕಾಶ ಇದೆ. ಯಾ
ವೊಬ್ಬ ರೈತರು ಸಹ ಖರೀದಿ ಕೇಂದ್ರದಲ್ಲಿ ನೂಕು ನುಗ್ಗಲು ಮಾಡಿಕೊಳ್ಳದೆ ನಿಗದಿ ದಿನಾಂಕದಂದು ರಾಗಿ ತರಬೇಕು ಎಂದರು.

2020ನೇ ಸಾಲಿನಲ್ಲಿ 5530 ಜನ ರೈತರು ನೋಂದಣಿ ಮಾಡಿ
ಕೊಂಡಿದ್ದರು. ಈ ಬಾರಿ ರಾಜ್ಯದಲ್ಲೇ ಅತಿ ಹೆಚ್ಚಿನ ರೈತರು ತಾಲ್ಲೂಕಿನ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಸಹ ನೋಂದಣಿ ನಡೆಯುತ್ತಿದೆ ಎಂದರು.

ಪಹಣಿಯಲ್ಲಿ ಬೆಳೆ ನಮೂದು ಆಗದೇ ಇದ್ದರೂ ಸಹ ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಸಂಗ್ರಹಿಸಲಾದ ಮಾಹಿತಿ ಫ್ರೂಟ್‌ ಐಡಿಯಲ್ಲಿ ಸೇರ್ಪಡೆಯಾಗಿರುತ್ತದೆ. ಹೀಗಾಗಿ ರೈತರು ಕೃಷಿ ಇಲಾಖೆ
ಯಲ್ಲಿ ಫ್ರೂಟ್‌ ಐಡಿ ಸಂಖ್ಯೆ ಪಡೆಯುವ ಮೂಲಕ ರಾಗಿ ಮಾರಾಟ ಮಾಡಲು ಅವಕಾಶ ಇದೆ. ರೈತರಿಗೆ ಸೂಕ್ತ ಮಾಹಿತಿ ನೀಡಲು ಖರೀದಿ ಕೇಂದ್ರದಲ್ಲೇ ಕೃಷಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಮಾಹಿತಿ ಕೇಂದ್ರ ತೆರೆಯಲಾಗಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ರೈತರು ರಾಗಿ ಖರೀದಿ ಕೇಂದ್ರದಲ್ಲಿ ಸಮಸ್ಯೆಗಳನ್ನು ಶಾಸಕರು ಹಾಗೂ ತಹಶೀಲ್ದಾರರ ಗಮನಕ್ಕೆ ತಂದರು. ಖರೀದಿ ಕೇಂದ್ರದಲ್ಲಿ ಯಾವುದೇ ರೀತಿ ಸಮಸ್ಯೆ ಉಂಟಾದಲ್ಲಿ ರೈತರು ಕರೆ ಮಾಡಿ ತಿಳಿಸಲು ಅನುಕೂಲವಾಗುವಂತೆ ಶಾಸಕ ಮೊಬೈಲ್‌ ಸಂಖ್ಯೆ ಖರೀದಿ ಕೇಂದ್ರದ ಮುಂದೆ ಬರೆದು ಅಂಟಿಸಲು ಸೂಚನೆ
ನೀಡಲಾಯಿತು. ರಾಗಿ ಖರೀದಿ ಕೇಂದ್ರ ಉದ್ಘಾಟನೆಯಲ್ಲಿ ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಎಪಿಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಆಹಾರ ಇಲಾಖೆ ನಿರೀಕ್ಷಕ ರಮೇಶ್‌, ಖರೀದಿ ಕೇಂದ್ರದ ಅಧಿಕಾರಿ ಪುಟ್ಟ
ಸ್ವಾಮಿ, ಕೃಷಿಕ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಜಯರಾಮಯ್ಯ, ಎಪಿಎಂಸಿ ನಿರ್ದೇಶಕ ಸೋಮರುದ್ರಶರ್ಮ, ಮುಖಂಡರಾದ ಕೆ.ಪಿ.ಜಗನ್ನಾಥ್‌, ಮುನೇಗೌಡ, ಮುನಿರಾಜು, ಅಂಜನಮೂರ್ತಿ,ರಾಮು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು