ಆನೇಕಲ್: ತಾಲ್ಲೂಕಿನ ಚನ್ನೇರುಘಟ್ಟದಲ್ಲಿ ಶೂ ಮಾದರಿಯ ಚಪ್ಪಲಿಯಲ್ಲಿ ಸೇರಿಕೊಂಡಿದ್ದ ಹಾವು ಕಚ್ಚಿ
ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಬನ್ನೇರುಘಟ್ಟದ ರಂಗನಾಥ ಬಡಾವಣೆ ನಿವಾಸಿ ಮಂಜು ಪ್ರಕಾಶ್ (41) ಮೃತರು.

ಮಂಜು ಪ್ರಕಾಶ್ ಅವರ ಕ್ರಾಕ್ಸ್ ಮಾದರಿಯ ಚಪ್ಪಲಿಯಲ್ಲಿ ಕೊಳಕು ಮಂಡಲ (ರಸೆಲ್ಸ್ ವೈಪರ್) ಹಾವು ಸೇರಿಕೊಂಡಿತ್ತು. ಇದನ್ನು ಗಮನಿಸದೆ ಚಪ್ಪಲಿ ಹಾಕಿಕೊಂಡ ಅವರ ಹೆಬ್ಬೆರಳನ್ನು ಹಾವು ಕಚ್ಚಿದೆ. ಇದು ಅವರ ಅನುಭವಕ್ಕೆ ಬಂದಿಲ್ಲ. ಮನೆಗೆ ಮರಳಿ ಮಲಗಿದಲ್ಲಿಯೇ ಅವರು ಮೃತಪಟ್ಟಿದ್ದಾರೆ. ಚಪ್ಪಲಿಯಲ್ಲಿದ್ದ ಹಾವು ಸಹ ಮೃತಪಟ್ಟಿದೆ.

‘2016ರಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಂಜು ಪ್ರಕಾಶ್ ಬಲಗಾಲು ಸ್ಪರ್ಶಜ್ಞಾನ ಕಳೆದುಕೊಂಡಿತ್ತು. ಇದೇ ಕಾಲಿಗೆ ಹಾವು ಕಚ್ಚಿದ್ದರಿಂದ ನೋವು ಅವರ ಗಮನಕ್ಕೆ ಬಂದಿರಲಿಲ್ಲ. ಆರೋಗ್ಯ ಸರಿ ಇಲ್ಲದ ಕಾರಣ ಅವರು ಜ್ಯೂಸ್ ತರಲು ಹೊರ ಹೋಗಿದ್ದರು. ಮನೆಗೆ ಬಂದು ಮಲಗಿದ ಅವರು ಮತ್ತೇ ಮೇಲೆ ಏಳಲಿಲ್ಲ’ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ

ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹಾವು ಕಡಿತದಿಂದ ಸಾವು ಸಂಭವಿಸಿದೆ ಎಂದು ವರದಿ ದೃಢಪಡಿಸಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಳಕು ಮಂಡಲ ವಿಷಕಾರಿ ಹಾವು. ದೇಶದಲ್ಲಿ ಕೊಳಕು ಮಂಡಲ ಹಾವು ಕಚ್ಚಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚು. ಜೀವ ಉಳಿದರೂ ಹಾವು ಕಚ್ಚಿದ ಸ್ಥಳದಲ್ಲಿ ಗ್ಯಾಂಗ್ರೀನ್ ಉಂಟಾಗಿ ಕಾಲು ಕಳೆದುಕೊಳ್ಳುವ ಅಪಾಯ ಇರುತ್ತದೆ ಎಂದು ವೈದ್ಯರು
ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.