ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ವಾಟ್ಸ್‌ಆ್ಯ‍ಪ್ ಮೂಲಕ ಎಲ್‌ಪಿಜಿ ಸೇವೆ ಲಭ್ಯ

Last Updated 17 ಸೆಪ್ಟೆಂಬರ್ 2021, 3:54 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಹೊಗೆ ಮುಕ್ತ ಗ್ರಾಮಗಳನ್ನಾಗಿ ಮಾಡುವ ಕೇಂದ್ರ ಸರ್ಕಾರದ ಆಶಯದಂತೆ ಎಲ್ಲರ ಮನೆಗೂ ಅಗತ್ಯ ಇರುವಷ್ಟು ಅಡುಗೆ ಅನಿಲ ಸಿಲಿಂಡರ್‌ ಪೂರೈಕೆ ಮಾಡಲು ತಂತ್ರಜ್ಞಾನ ಗ್ರಾಹಕರ ನೆರವಿಗೆ ಬಂದಿದೆ ಎಂದು ನಗರದ ಮಂಜುನಾಥ ಗ್ಯಾಸ್‌ ಏಜೆನ್ಸಿ ಮುಖ್ಯಸ್ಥ ನಂದಕುಮಾರ್‌ ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿದ ಅವರು, ಗ್ರಾಹಕರು ತಮ್ಮ ಮೊಬೈಲ್‌ ನಂಬರ್‌ನಿಂದಲೇ ಅಡುಗೆ ಅನಿಲ ಬುಕ್‌ ಮಾಡುವ ವಿಧಾನ ಯಶಸ್ಸಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಗ್ರಾಹಕರು ಏಜನ್ಸಿ ಬಳಿಗೆ ತಿರುಗಾಡುವುದು ತಪ್ಪಿದೆ
ಎಂದರು.

ಈಗ ಭಾರತ್‌ ಗ್ಯಾಸ್‌ ವತಿಯಿಂದ ಗ್ರಾಹಕರ ಅನುಕೂಲಕ್ಕಾಗಿ ಮತ್ತಷ್ಟು ಅನುಕೂಲ ಕಲ್ಪಿಸುವ ಸಲುವಾಗಿ ವಾಟ್ಸ್‌ಆ್ಯಪ್‌ ಸಂಖ್ಯೆ ಆರಂಭಿಸಲಾಗಿದೆ. ಗ್ರಾಹಕರು ಹೆಚ್ಚುವರಿ ಸಿಲಿಂಡರ್‌ ಸಂಪರ್ಕ, ಮೊಬೈಲ್‌ ನಂಬರ್‌ ಬದಲಾವಣೆ, ಅಡುಗೆ ಅನಿಲ್ ಸಂಪರ್ಕ ಪಡೆದ ವಿವರ, ಹೊಸ ಅಡುಗೆ ಅನಿಲ ಸಂಪರ್ಕ, ಸ್ಟೌ ದುರಸ್ತಿ ಸೇರಿದಂತೆ ತಮಗೆ ಬೇಕಾದ ಸೇವೆ ಕುರಿತು ವಾಟ್ಸ್‌ಆ್ಯಪ್‌ ಸಂಖ್ಯೆಗೆ ಮಾಹಿತಿ ಕಳುಹಿಸಿದರೆ ತಕ್ಷಣ ಸ್ಪಂದಿಸಲಾಗುವುದು. ಈ ಎಲ್ಲ ಸೇವೆ ಕುರಿತು ಗ್ರಾಹಕರಿಗೆ ಪರಿಚಯಿಸಲು ಪ್ರಚಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT