ದೊಡ್ಡಬಳ್ಳಾಪುರ: ಪೊಲೀಸ್ ವೃತ್ತಿಯಲ್ಲಿ ಉತ್ತಮಸೇವೆ ಸಲ್ಲಿಸಿದ ಹಿನ್ನೆಲೆ ಯಲ್ಲಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪಡೆದ ಡಿವೈಎಸ್‍ಪಿ ಟಿ.ರಂಗಪ್ಪ ಹಾಗೂ ಮುಖ್ಯಮಂತ್ರಿ ಪದಕ ಪಡೆದ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಬಿ.ನವೀನ್‌ಕುಮಾರ್ ಅವರಿಗೆ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿ ಡಿವೈಎಸ್‌ಪಿ ಟಿ.ರಂಗಪ್ಪ, ಪೊಲೀಸರು ಮೋಟಾರು ವಾಹನ ಸಂಬಂಧಿತ ಪ್ರಕರಣಗಳಲ್ಲಿ ಸಾರ್ವಜನಿಕರನ್ನು ಪ್ರಶ್ನಿಸುವ ಮೊದಲು ತಮ್ಮ ವಾಹನಗಳಿಗೆ ಎಲ್ಲ ಅಗತ್ಯ ದಾಖಲೆ ಹೊಂದಿರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸಿಬ್ಬಂದಿ ಚಾಲನಾ ಪರವಾನಗಿ, ವಾಹನ ವಿಮೆ ಸೇರಿದಂತೆ ಎಲ್ಲ ದಾಖಲೆಗಳನ್ನು ಕಡ್ಡಾಯವಾಗಿ ಹೊಂದುವಂತೆ ಸೂಚನೆ ನೀಡ
ಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ರಸ್ತೆ ಸುರಕ್ಷತೆ ಕಾನೂನು ಉಲ್ಲಂಘಿಸದೆ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.

ಪೊಲೀಸರನ್ನು ಸಾರ್ವಜನಿಕರು ಅಭಿನಂದಿಸುವುದು ಅಪರೂಪ. ಆದರೆ, ಇಲ್ಲಿನ ಸಂಘಟನೆ ಹಾಗೂ ಜನರು ಅಭಿನಂದಿಸಿರುವುದು
ಸಂತಸದ ವಿಚಾರ. ಆದರೆ, ಇದೇ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳಬಾರದು. ‘ನನ್ನ ಪ್ರಶಸ್ತಿಯನ್ನು ಇಲ್ಲಿನ ಕನ್ನಡಪರ ಸಂಘನೆಗಳಿಗೆ ಅರ್ಪಿಸುತ್ತೇನೆ’ ಎಂದು ಅವರು ಹೇಳಿದರು.

ಸಾರ್ವಜನಿಕ ಸೇವೆಯಲ್ಲಿ ವೃತ್ತಿನಿಷ್ಠೆಗೆ ಮನ್ನಣೆ ಸಿಗುತ್ತದೆ. ಸಾಧನೆ ಎಂಬುದು ಹಲವರಿಗೆ ಸ್ಫೂರ್ತಿಯಾದಾಗ ಮಾತ್ರ ಹೆಚ್ಚಿನ ಅರ್ಥ ಸಿಗುತ್ತದೆ ಎಂದು ಹೇಳಿದರು

ಯುವಜನರು ಸಾಮಾಜಿಕ ಪ್ರಗತಿಗೆ ಪೂರಕವಾದ ವ್ಯಕ್ತಿತ್ವಗಳಾಗಿ ರೂಪಗೊಂಡಾಗ ಮಾತ್ರ ಬದುಕಿನ ಸಾರ್ಥಕತೆ ಲಭ್ಯವಾಗುತ್ತದೆ ಎಂದರು.

ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಬಿ.ನವೀನ್‍ಕುಮಾರ್ ಮಾತನಾಡಿ, ರಂಗಪ್ಪ ಅವರಂತಹ ಉತ್ತಮ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆತಿರುವುದು ವೃತ್ತಿ ಬದುಕಿನಲ್ಲಿ ಅನನ್ಯ ಸಾಧನೆಗೆ ದಾರಿ ದೀಪವಾಗಿದೆ ಎಂದರು.

ಕನ್ನಡ ಸಂಘಟನೆಗಳ ಒಕ್ಕೂಟದ ಹಲವು ಸಂಘಟನೆಗಳಿಂದ ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.