ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ(ದೇವನಹಳ್ಳಿ) | ಹದ ಮಳೆ: ಬಿತ್ತನೆ ಶುರು

Published : 18 ಆಗಸ್ಟ್ 2024, 14:17 IST
Last Updated : 18 ಆಗಸ್ಟ್ 2024, 14:17 IST
ಫಾಲೋ ಮಾಡಿ
Comments

ವಿಜಯಪುರ(ದೇವನಹಳ್ಳಿ): ಹೋಬಳಿಯಲ್ಲಿ ವಾರದಿಂದ ಹದ ಮಳೆ ಸುರಿಯುತ್ತಿದ್ದು, ರೈತರು ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ರಾಗಿ, ಅವರೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತಿದೆ.

ಎರಡು ವರ್ಷಗಳಿಂದ ತೀವ್ರ ಬರಗಾಲ ಎದುರಿಸಿದ್ದ ರೈತರಿಗೆ ಮುಂಗಾರು ನಿರಾಸೆ ಮೂಡಿಸಿತ್ತು. ರಾಜ್ಯದೆಲ್ಲೆಡೆ ಅಬ್ಬರದ ಮಳೆ ಸುರಿದರೂ ಜಿಲ್ಲೆಯಲ್ಲಿ ಮಳೆ ಬಾರದೆ ರೈತರಲ್ಲಿ ಹತಾಸೆ ಮೂಡಿತು. ವಾರದಿಂದ ಬೀಳುತ್ತಿರುವ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮುಂಗಾರು ಮಳೆ ಉತ್ತಮವಾಗಿ ಆಗಿದ್ದರೆ, ಹೊಲಗಳಲ್ಲಿ ಇಷ್ಟು ಹೊತ್ತಿಗೆ ಕುಂಟೆ ಹೊಡೆದು ಕಳೆ ತೆಗೆಯುವ ಹಂತಕ್ಕೆ ರಾಗಿ ಬೆಳೆ ಬೆಳೆಯುತ್ತಿತು. ಆದರೆ, ಮುಂಗಾರು ಆರಂಭದಲ್ಲಿ ಕೈ ಕೊಟ್ಟಿದ್ದರಿಂದ ತಡವಾಗಿ ಬಿತ್ತನೆಕಾರ್ಯ ಶುರು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆಯಾದರೆ, ಬೆಳೆಗಳು ಕೈಗೆ ಸಿಗುತ್ತವೆ. ಇಲ್ಲವಾದರೆ ಈ ಬಾರಿಯೂ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ರೈತ ಮುನಿಶಾಮಪ್ಪ ಹೇಳಿದರು.

ಕೊಟ್ಟಿಗೆ ಗೊಬ್ಬರ ಲಭ್ಯವಿಲ್ಲದ ಕಾರಣ, ರಸಗೊಬ್ಬರಗಳ ಮೊರೆ ಹೋಗಿರುವುದರಿಂದ ರಸಗೊಬ್ಬರಗಳಿಗೆ ಬೇಡಿಕೆ ಹೆಚ್ಚಾಗಿದೆ. ರಸಗೊಬ್ಬರಗಳ ಮಾರಾಟಗಾರರು, ದರಪಟ್ಟಿಯನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಬರೆಯುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಬೇಕು. ರೈತರು ಖರೀದಿಸುವ ರಸಗೊಬ್ಬರಗಳಿಗೆ ಕಡ್ಡಾಯವಾಗಿ ರಸೀದಿ ಕೊಡುವಂತೆ ವ್ಯಾಪಾರಿಗಳಿಗೆ ನಿರ್ದೇಶನ ನೀಡಬೇಕು. ಎಂಆರ್‌ಪಿ ಬೆಲೆಗಿಂತ ಹೆಚ್ಚು ಹಣ ಪಡೆಯುವ ವ್ಯಾಪಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ರೈತ ಮುಖಂಡ ಪ್ರತೀಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT