ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಭ್ರಾತೃತ್ವದ ಸಾಕ್ಷಿಪ್ರಜ್ಞೆ ವಿವೇಕಾನಂದ: ನಿರ್ದೇಶಕ ಜೆ.ರಾಜೇಂದ್ರ

Last Updated 13 ಜನವರಿ 2020, 14:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ದೇಶದ ಸಮಗ್ರತೆ ಹಾಗೂ ಸಂಸ್ಕೃತಿ ಗೌರವಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಈ ಹಂತದಲ್ಲಿ ವಿವೇಕಾನಂದರ ಆದರ್ಶಗಳು ಸ್ಫೂರ್ತಿದಾಯಕ’ ಎಂದು ಶ್ರೀದೇವರಾಜ ಅರಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಜೆ.ರಾಜೇಂದ್ರ ಹೇಳಿದರು.

ಇಲ್ಲಿನ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ, ಶ್ರೀದೇವರಾಜ ಅರಸ್ ಪ್ರಥಮದರ್ಜೆ ಸಂಜೆ ಕಾಲೇಜು ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಪ್ರಯುಕ್ತ ಸೋಮವಾರ ಆರಂಭವಾದ ಯುವ ಸಬಲೀಕರಣ ಮಾಲಿಕೆ 5 ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ವಿಶ್ವ ಭ್ರಾತೃತ್ವವನ್ನು ಸಾರಿದ ವಿವೇಕಾನಂದರು ನಮ್ಮ ದೇಶದ ಸಾಕ್ಷಿಪ್ರಜ್ಞೆಯಾಗಿದ್ದಾರೆ. ನಮ್ಮ ಯುವಕರು ವೀರ ಸನ್ಯಾಸಿಯ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಸಮಗ್ರ ಪ್ರಗತಿ ಮತ್ತು ಸದೃಢ ಭವಿಷ್ಯ ಸಾಧ್ಯ. ಸಾಮಾಜಿಕ ಕಳಂಕಗಳ ವಿರುದ್ದ ಹೋರಾಟ ಮಾಡುವುದರ ಜೊತೆಗೆ ಮಾನವೀಯ ಚಿಂತನೆಗಳನ್ನು ರೂಢಿಸಿಕೊಳ್ಳುವುದು ಇಂದಿನ ಅನಿವಾರ್ಯತೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ‘ಎಲ್ಲಾ ಧರ್ಮಗಳನ್ನು ಗೌರವಿಸುವುದು ಈ ನೆಲದ ಗುಣವಾಗಿದೆ. ವಿವೇಕಾನಂದರು ಸಹ ಇದೇ ಹಾದಿಯಲ್ಲಿ ಬದುಕಿದವರು. ವಿಶ್ವದ ಪ್ರತಿ ಮಾನವನೂ ಒಂದೇ ಜಾತಿ ಎಂಬ ಭಾವನೆಗಳು ಮೂಡುವುದು ಇಂದಿನ ಅನಿವಾರ್ಯತೆಯಾಗಿದೆ. ಆದರೆ ಇಂದಿನ ಧರ್ಮ-ಧರ್ಮಗಳ ನಡುವಿನ ಸಂಘರ್ಷಗಳು ಸಮಾಜದ ಶಾಂತಿಯನ್ನು ಕದಡುತ್ತಿವೆ. ಇಂತಹ ಸಂದರ್ಭದಲ್ಲಿ ದೇವರು ಒಬ್ಬನೆ ಆಗಿದ್ದು, ದೇವರು ಕಾಣುವ ಅವರವರ ಮಾರ್ಗಗಳನ್ನು ಗೌರವಿಸಿದರೆ ವಿವೇಕಾನಂದರ ಆದರ್ಶಗಳು ಸಾರ್ಥಕವೆನಿಸುತ್ತವೆ’ ಎಂದರು.

ಗೀತ ಗಾಯನ: ವಿವೇಕಾನಂದರ ಜಯಂತ್ಯುತ್ಸವ ಹಾಗೂ ಯುವಸಬಲೀಕರಣ ಕಾರ್ಯಕ್ರಮ ಮಾಲಿಕೆ ಅಂಗವಾಗಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಗೀತೆಗಳನ್ನು ಯುವ ಗಾಯಕಿ ವಿದುಷಿ ಸುಮಾ ಸುನಿಲ್ ಪ್ರಸ್ತುತಪಡಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಗೀತೆಗಳನ್ನು ಹಾಡುವ ಮೂಲಕ ವಿವೇಕಾನಂದರಿಗೆ ಸಂಗೀತ ಸ್ವರ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಎಸ್.ನಟರಾಜ್, ಕಾಲೇಜಿನ ವಿಭಾಗ ಮುಖ್ಯಸ್ಥೆ ಪಿ.ಚೈತ್ರ, ಎನ್‍ಎಸ್‍ಎಸ್ ಅಧಿಕಾರಿ ಡಾ.ಚಿಕ್ಕಣ್ಣ, ಸಾಂಸ್ಕೃತಿಕ ಸಂಚಾಲಕ ಸಿ.ಪಿ.ಪ್ರಕಾಶ್, ಸನ್ನದ್ಧ ಯುವ ಪಡೆ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT