ಖರೀದಿ ಮಾರುಕಟ್ಟೆ: ಡಿ.1ಕ್ಕೆ ಸಂವಾದ
ಮುಕ್ತ ವ್ಯಾಪರ ಒಪ್ಪಂದ ಜಾಗತೀಕರಣದ ಪ್ರಭಾವದಿಂದ ನೇಕಾರರು ಮಾರಾಟ ಮಾಡುವ ಸೀರೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿ ನೇಕಾರರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ನೇಕಾರರ ಹೋರಾಟದ ಫಲವಾಗಿ ರಾಜ್ಯ ಉಚಿತ ವಿದ್ಯುತ್ ಸೌಲಭ್ಯಗಳು ಸರ್ಕಾರದಿಂದ ದೊರೆತಿತ್ತು. ಈಗ ಸರ್ಕಾರ ಕಚ್ಚಾ ವಸ್ತುಗಳ ಬೆಲೆ ಕಡಿಮೆ ಮಾಡುವುದರೊಂದಿಗೆ ನೇಕಾರರು ಉತ್ಪಾದಿಸಿದ ಬಟ್ಟೆಗಳನ್ನು ಖರೀದಿಸುವ ವ್ಯವಸ್ಥೆ ಮಾಡಬೇಕಿದೆ. ಈ ಕುರಿತು ಡಿ.1 ರಂದು ಸಂವಾದ ಏರ್ಪಡಿಸಲಾಗಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ತಿಳಿಸಿದರು. ಡಿ.4ಕ್ಕೆ ನಿಯೋಗ ಭೇಟಿ: ಇಲ್ಲಿನ ನೇಕಾರರ ಸಮಸ್ಯೆಗಳ ಕುರಿತು ಚರ್ಚಿಸಲು ಜನಪ್ರತಿನಿಧಿಗಳ ಹಾಗೂ ನೇಕಾರರ ಸಂಘಟನೆಗಳ ಮುಖಂಡರ ನಿಯೋಗವನ್ನು ಭೇಟಿ ಮಾಡಲು ಜವಳಿ ಸಚಿವರು ಡಿ.4 ರಂದು ಸಮಯ ನಿಗದಿ ಮಾಡಿದ್ದಾರೆ.