ಬುಧವಾರ, ಆಗಸ್ಟ್ 21, 2019
22 °C

ಬೆಳಗಾವಿ | 106 ಗ್ರಾಮಗಳ 22,682 ಮಂದಿ ಸ್ಥಳಾಂತರ

Published:
Updated:

ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರಿದಿದೆ. ಈವರೆಗೆ 106 ಗ್ರಾಮಗಳ 5,598 ಕುಟುಂಬಗಳ 22,682 ಮಂದಿಯನ್ನು ಸ್ಥಳಾಂತರಿಸಲಾಗಿದೆ.

‘ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ತಾಲ್ಲೂಕುಗಳಲ್ಲಿ ತಲಾ 10, ನಿಪ್ಪಾಣಿಯಲ್ಲಿ 12, ಗೋಕಾಕದಲ್ಲಿ 18, ಮೂಡಲಗಿಯಲ್ಲಿ 15, ಹುಕ್ಕೇರಿಯಲ್ಲಿ 17 ಹಾಗೂ ಖಾನಾಪುರದಲ್ಲಿ 4 ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಕಾಗವಾಡ ತಾಲ್ಲೂಕಿನಲ್ಲಿ ಅತಿಹೆಚ್ಚು ಅಂದರೆ 7,409 ಮಂದಿಯನ್ನು ಸ್ಥಳಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

‘9,519 ಜಾನುವಾರುಗಳನ್ನೂ ಸ್ಥಳಾಂತರಿಸಲಾಗಿದೆ. 13,682 ಮಂದಿ ಸಂಬಂಧಿಕರು ಹಾಗೂ ಸ್ವಂತ ಮನೆಗೆ ಹೋಗಿದ್ದಾರೆ. 79 ಗಂಜಿ (ಪರಿಹಾರ) ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 6,970 ಮಂದಿ ಅಲ್ಲಿ ಆಶ್ರಯ ಪಡೆದಿದ್ದಾರೆ. ಹುಕ್ಕೇರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 22 ಗಂಜಿಕೇಂದ್ರಗಳನ್ನು ಆರಂಭಿಸಲಾಗಿದೆ. ವಿವಿಧೆಡೆ 2,010 ಜಾನುವಾರುಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

Post Comments (+)