ಅಥಣಿ (ಬೆಳಗಾವಿ): ಪಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಆಗಿದ್ದ ಮುತ್ತವ್ವ ಗೊಳಸಂಗಿ (21) ಶುಕ್ರವಾರ ಸಾವಿಗೀಡಾಗಿದ್ದಾರೆ. ‘ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ’ ಎಂದು ಮುತ್ತವ್ವ ಪತಿ ಸಂತೋಷ ಗೊಳಸಂಗಿ ಆರೋಪಿಸಿದ್ದಾರೆ.

‘ಆರೋಗ್ಯದಲ್ಲಿ ಏರುಪೇರಾದಾಗ ಗುರುವಾರ ಬೆಳಿಗ್ಗೆ ಮುತ್ತವ್ವಗೆ ಆಸ್ಪತ್ರೆಗೆ ದಾಖಲಿಸಿದ್ದೆ. 11 ಗಂಟೆಗೆ ಹೆರಿಗೆ ಮಾಡಿಸಲು ಶಸ್ತ್ರ ಚಿಕಿತ್ಸಾ ಕೊಠಡಿಗೆ ಒಯ್ದಿದ್ದಾರೆ. ಸಂಜೆ 4.30ಕ್ಕೆ ಹೆರಿಗೆಯಾಗಿದೆ ಎಂದು ಹೇಳುತ್ತಾರೆ. ಅದುವರೆಗೂ ಅವರು ಏನು ಮಾಡಿದರು ಗೊತ್ತಿಲ್ಲ? ಹೆರಿಗೆ ನಂತರ ಮುತ್ತವ್ವ ಸಾಕಷ್ಟು ನೋವು ಅನುಭವಿಸುತ್ತಿದ್ದಳು. ಆ ಬಗ್ಗೆ ವೈದ್ಯರು ಹಾಗೂ ನರ್ಸ್ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಸಂತೋಷ ಗೊಳಸಂಗಿ ದೂರಿದ್ದಾರೆ.

‘ಹೆರಿಗೆ ವೇಳೆ ರಕ್ತದೊತ್ತಡ ಕಡಿಮೆಯಾಗಿ ಬಾಣಂತಿ ಸಾವಾಗಿದೆ. ನಿತ್ಯವೂ ಸಾಕಷ್ಟು ಹೆರಿಗೆ ಮಾಡಿಸುತ್ತೇವೆ. ನಮ್ಮಲ್ಲಿ ಈವರೆಗೂ ಬಾಣಂತಿಯಾಗಲೀ, ಶಿಶುಗಳ ಸಾವಾಗಲೀ ಆಗಿಲ್ಲ. ಇದು ಯಾವ ಕಾರಣಕ್ಕೆ ಆಗಿದೆ ಎನ್ನುವುದು ಮರಣೋತ್ತರ ಪರೀಕ್ಷಾ ವರದಿ ಬಂದ ಮೇಲೆ ಗೊತ್ತಾಗಲಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಬಸನಗೌಡ ಕಾಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.