ಕಾಗವಾಡ: ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಬುದ್ಧ ಫೌಂಡೇಷನ್ ಮತ್ತು ಗ್ರಾಮಸ್ಥರ ಸಯಹೋಗದಲ್ಲಿ ಭಾನುವಾರ ಮತ್ತು ಸೋಮವಾರ 4ನೇ ವರ್ಷದ ಬುದ್ಧ ಜಾತ್ರೆ ಅದ್ದೂರಿಯಾಗಿ ನಡೆಯಿತು. ಜಾತ್ರೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದವು.

ಭಾನುವಾರ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನಂತರ ಕುಂಭ ಹೊತ್ತ ಮಹಿಳೆಯರಿಂದ ಮೆರವಣಿಗೆ ಭೌದ್ಧ ವಿಹಾರದಲ್ಲಿ ಬುದ್ಧ ಅಂಬೇಡ್ಕರ್ ಅವರ ಪ್ರತಿಮೆಯ ಪೂಜೆಯೊಂದಿಗೆ ದೀಪ ಬೆಳಗಿಸಿ ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಾಗಲಕೋಟೆ ಬೌದ್ಧ ವಿಹಾರದ ಭಂತೇಜೀ ಧಮ್ಮಪಾಲಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಗದಾಳೆ ಉದ್ಘಾಟಿಸಿದರು. ಸಹ-ಶಿಕ್ಷಕ ಸುಭಾಷ ನಿಜನ್ನವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಮೇಶ ಜಯಕರ, ರಾಜು ಕಾಂಬಳೆ, ಪ್ರಾಚಾರ್ಯ ಎಸ್.ಪಿ. ತಳವಾರ, ವಕೀಲರಾದ ರಾಜೇಂದ್ರ ಮೂಶಿ, ಮಲ್ಲೇಶ ಕಸ್ತೂರಿ, ವಿಕ್ರಂ ಕರನಿಂಗ, ಸುಧಾಕರ ಮದರಕಂಡಿ, ಮಯೂರ ಮದಲೆ, ಮಚ್ಚೇಂದ್ರ ಕಾಡಾಪೂರೆ, ತಮ್ಮಣ್ಣಿ ಕಾಂಬಳೆ, ಪುರಂದರ ಕಾಂಬಳೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಾಧಕರಿಗೆ, ಗಣ್ಯರಿಗೆ ಸನ್ಮಾನಿಸಿ, ಸತ್ಕರಿಸಲಾಯಿತು. ಆಗಮಿಸಿದ್ದ ಎಲ್ಲರಿಗೆ ಭೋಜನೆ ವ್ಯವಸ್ಥೆ ಮಾಡಲಾಗಿತ್ತು.

ಸೋಮವಾರ ತಹಶೀಲ್ದಾರ್ ರಾಜೇಶ ಬುರ್ಲಿ, ಅಧಿಕಾರಿಗಳಾದ ಅಣ್ಣಾಸಾಬ ಕೋರೆ, ವಿಜಯಕುಮಾರ ಚೌಗುಲೆ ಕರುಣಾ ಬುದ್ಧ ವಿಹಾರಕ್ಕೆ ಭೇಟಿ ನೀಡಿ, ಧ್ವಜಾರೋಹಣ ಮಾಡಿ, ಪೂಜೆ ಸಲ್ಲಿಸಿದರು.

ಈ ಸಮಯಲ್ಲಿ ಗ್ರಾಮದ ಮುಖಂಡರು, ಬುದ್ಧ ಫೌಂಡೇಷನ್ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.