ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

ಬೆಳಗಾವಿ ಅಧಿವೇಶನ | ಸರಣಿ ಧರಣಿ: ಸುವರ್ಣ ಸೌಧದ ಆವರಣ ಶಾಂತ

ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದ ಪೊಲೀಸರು: ಗೊಂದಲಗಳಿಗಿಲ್ಲ ಆಸ್ಪದ
Published : 12 ಡಿಸೆಂಬರ್ 2025, 4:39 IST
Last Updated : 12 ಡಿಸೆಂಬರ್ 2025, 4:39 IST
ಫಾಲೋ ಮಾಡಿ
Comments
ಮಾಸಿಕ ₹5000 ಮಾಸಾಶನ ನೀಡಲು ಆಗ್ರಹಿಸಿ ಮಾಜಿ ದೇವದಾಸಿಯರು ಸೀತವ್ವ ಜೋಡಟ್ಟಿ ಅವರ ನೇತೃತ್ವದಲ್ಲಿ ಗುರುವಾರ ಸುವರ್ಣ ವಿಧಾನಸೌಧದ ಬಳಿ ಧರಣಿ ನಡೆಸಿದರು  ಪ್ರಜಾವಾಣಿ ಚಿತ್ರ
ಮಾಸಿಕ ₹5000 ಮಾಸಾಶನ ನೀಡಲು ಆಗ್ರಹಿಸಿ ಮಾಜಿ ದೇವದಾಸಿಯರು ಸೀತವ್ವ ಜೋಡಟ್ಟಿ ಅವರ ನೇತೃತ್ವದಲ್ಲಿ ಗುರುವಾರ ಸುವರ್ಣ ವಿಧಾನಸೌಧದ ಬಳಿ ಧರಣಿ ನಡೆಸಿದರು  ಪ್ರಜಾವಾಣಿ ಚಿತ್ರ
₹5000 ಮಸಾಶನಕ್ಕೆ ಆಗ್ರಹ
ಮಾಜಿ ದೇವದಾಸಿಯರಿಗೆ ₹5000ಕ್ಕೆ ಮಾಶಾಸನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆಯಿಂದ ಪ್ರತಿಭಟನೆ ನಡೆಸಿದರು‌. ರಾಜ್ಯದಲ್ಲಿರುವ 48 ಸಾವಿರ ದೇವದಾಸಿಯರಿಗೆ ವ್ಯವಸಾಯ ಮಾಡಲು ಪ್ರತಿ ಮಹಿಳೆಗೆ ಎರಡು ಎಕರೆ ಜಮೀನು ನೀಡುವುದು ಉದ್ಯೋಗ ಮತ್ತು ಕೃಷಿ ಮಾಡಲು ಸಾಲ ಸೌಲಭ್ಯ ಅಂತ್ಯೋದಯ ಪಡಿತರ ಚೀಟಿ ಮನೆ ನಿರ್ಮಿಸಿ ನೀಡಬೇಕು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಎಂದು ಒತ್ತಾಯಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೀತವ್ವ ಜೋಡಟ್ಟಿ ಯಲ್ಲವ್ವ ಪರಸನ್ನವರ ಯಮನವ್ವ ಮಾದರ ರೇಖಾ ಕಾಂಬಳೆ ರೇಖಾ ಭಂಡಾರಿ ಸಾಗರ ಶಿವಕ್ಕನ್ನವರ ಇತರರಿದ್ದರು.
ನೇರ ನೇಮಕಾತಿಗೆ ಆಗ್ರಹ
ಸ್ಥಳೀಯ ಸಂಸ್ಥೆಗಳಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು  ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ₹27 ಸಾವಿರ ವೇತನ ನೀಡಬೇಕು. ಸೇವೆಯಲ್ಲಿರುವಾಗಲೇ ಮರಣ ಹೊಂದಿದರೆ ಅಂತಹವರಿಗೆ 10 ಲಕ್ಷ ಇಡಿಗಂಟು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯಪೌರ ನೀರು ಸರಬರಾಜು ನೌಕರರ ಮಹಾಸಂಘದ ವತಿಯಿಂದ ಪ್ರತಿಭಟಿಸಲಾಯಿತು. ಪಾಗವಾಡ ಶ್ರೀರಾಮ್ ಸತೀಶ್ ಎಸ್.ಮಂಜುನಾಥ ರಮೇಶ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT