ಮಂಗಳವಾರ, ಮಾರ್ಚ್ 31, 2020
19 °C

ಕೋವಿಡ್–19 ತಡೆಗೆ ಕ್ರಮ: 5ನೇ ದಿನವೂ ಸ್ತಬ್ಧವಾದ ಬೆಳಗಾವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗುರುವಾರ ಸತತ 5ನೇ ದಿನವೂ ಬೆಳಗಾವಿ ಸ್ತಬ್ಧಗೊಂಡಿದೆ. ಹಾಲು ವಿತರಣೆ, ದಿನಸಿ, ತರಕಾರಿ ಹಾಗೂ ಹಣ್ಣಿನ ಅಂಗಡಿಗಳು ಬೆಳಿಗ್ಗೆ ಕೆಲಹೊತ್ತು ಕಾರ್ಯನಿರ್ವಹಿಸಿದವು. 

ಇನ್ನಿತರ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿವೆ. ಬಸ್‌, ಆಟೊ, ಟ್ರಕ್‌  ಹಾಗೂ ಇತರ ವಾಹನಗಳೂ ಸ್ಥಗಿತಗೊಂಡಿವೆ. ಅವಶ್ಯಕ ವಸ್ತುಗಳನ್ನು ಸಾಗಿಸುವ ಹಾಗೂ ಅವಶ್ಯಕ ಸೇವೆ ನೀಡುವ ಸಿಬ್ಬಂದಿಗಳ ವಾಹನಗಳಿಗೆ ಮಾತ್ರ ಸಂಚರಿಸಲು ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. 

ಸೋಷಿಯಲ್‌ ಡಿಸ್ಟನ್ಸಿಂಗ್‌: ದಿನಸಿ ಹಾಗೂ ಹಾಲು ಮಾರಾಟ ಮಾಡುವ ಅಂಗಡಿಗಳ ಎದುರು ಸೋಷಿಯಲ್‌ ಡಿಸ್ಟನ್ಸಿಂಗ್‌ಗೆ ಮಾರ್ಕ್‌ ಮಾಡಲಾಗಿದೆ. 2ರಿಂದ 3 ಅಡಿಗಳಷ್ಟು ಅಂತರದಲ್ಲಿ ಸರದಿ ಸಾಲು ನಿಲ್ಲಿಸಿ, ಸಾಮಾನುಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಸಹಕರಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು