ಮುನವಳ್ಳಿ: ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಐದು ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕಾಮಗಾರಿ ಕೈಗೊಳ್ಳುತ್ತಿದ್ದು, ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಮುಂದಿನ ದಿನಗಳಲ್ಲಿ ಪಟ್ಟಣವನ್ನು ಮಾದರಿ ಮಾಡಲು ಶ್ರಮಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.
ಪಟ್ಟಣದ ಮೇದಾರ ಓಣಿಯಲ್ಲಿ ನಗರೋತ್ಥಾನ ಯೋಜನೆಯ ಹಂತ 4ರ ಅಡಿಯಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳ ಒಟ್ಟು ₹177.82 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾನು ಶಾಸಕ ಆದನಂತರ ಇದೇ ಮೊದಲ ಪೂಜೆ ಆಗಿದ್ದು, ಗುತ್ತಿಗೆದಾರರು ಈ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಅವಧಿಯ ಮುನ್ನ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ಸಿ.ಬಿ.ಬಾಳಿ, ಡಿ.ಡಿ.ಕಿನ್ನೂರಿ, ಮೀರಾಸಾಭ ವಟ್ನಾಳ, ಈಶ್ವರ ಕರೀಕಟ್ಟಿ, ಶ್ರೀಶೈಲ ನೇಗಿನಾಳ, ಪಂಚು ಬಾರಕೇರ, ವಿನಯಾಕ ಕಟ್ಟೇಕಾರ, ಸಮೀವುಲ್ಲಾ ಚೂರಿಖಾನ್, ಸಲೀಂ ಬೆಳವಡಿ, ಮುಬಾರಕ ಬೈರಕದಾರ, ಶ್ರೀಶೈಲ ಮುಸುಂಡಿ, ಹುಕ್ಕೆರಿ, ಮೇದಾರ, ಮುರುಗೊಡ, ದಿನ್ನಿಮನಿ, ಬಡೆಮ್ಮಿ, ನಿಕಿಲ ಬಾಳಿ, ಲುಕಮಾನ ದನದಮನಿ, ಅನಿಲ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ತಹಸೀಲ್ದಾರ, ಅನಿಲ ಗಿಡ್ನಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.